ಉಡುಪಿ: ಅಪರೂಪದ ಹಾರುವ ಹಾವು ಪತ್ತೆ..!

By Kannadaprabha NewsFirst Published Jan 26, 2023, 11:06 AM IST
Highlights

ಸುಮಾರು ಎರಡೂವರೆ ಅಡಿ ಉದ್ದವಿರುವ, ಮೈಯುದ್ದಕ್ಕೂ ಕಪ್ಪು​​-ಬಿಳಿ ಪಟ್ಟೆಗಳ ಮಧ್ಯೆ ಕೆಂಪು ಹವಳದಂತಹ ಬಣ್ಣವಿರುವ ಇದು ವಿಷದ ಹಾವಿರಬಹುದು ಎಂದು ತಿಳಿದು ಭಯಬೀತರಾದ ಜನ. 

ಉಡುಪಿ(ಜ.26):  ಇಲ್ಲಿನ ಪರ್ಕಳದ ಮಾರ್ಕೆಟ್‌ ಬಳಿ ಅಪರೂಪದ, ಆಕರ್ಷಕ ‘ಹಾರುವ ಹಾವು’ಪತ್ತೆಯಾಗಿದೆ. ಬುಧವಾರ ಇಲ್ಲಿನ ನಗರಸಭೆಗೆ ಸೇರಿದ ಕಟ್ಟಡದಲ್ಲಿರುವ ಲಾಂಡ್ರಿಯೊಂದರ ಎದುರು ಮರದಿಂದ ಥಟ್ಟನೆ ಕೆಳಗೆ ಹಾರಿದ ಹಾವು ಎಲ್ಲರ ಗಮನ ಸೆಳೆಯಿತು. 

ಸುಮಾರು ಎರಡೂವರೆ ಅಡಿ ಉದ್ದವಿರುವ, ಮೈಯುದ್ದಕ್ಕೂ ಕಪ್ಪು​​-ಬಿಳಿ ಪಟ್ಟೆಗಳ ಮಧ್ಯೆ ಕೆಂಪು ಹವಳದಂತಹ ಬಣ್ಣವಿರುವ ಇದು ವಿಷದ ಹಾವಿರಬಹುದು ಎಂದು ತಿಳಿದು ಸ್ಥಳೀಯರು ಭಯಬೀತರಾದರು.

ನಮಗೆ ಕೇವಲ ರಾಮಮಂದಿರ ನಿರ್ಮಾಣ ಅಷ್ಟೇ ಅಲ್ಲ, ರಾಮ ರಾಜ್ಯ ಕಟ್ಟುವ ಕನಸು ಇದೆ: ಪೇಜಾವರ ಶ್ರೀ

ಉರಗತಜ್ಞ ಗುರುರಾಜ್‌ ಸನಿಲ್‌ ಅವರನ್ನು ಸಂಪರ್ಕಿಸಿದಾಗ, ಇದು ವಿಷರಹಿತವಾಗಿದ್ದು, ಹತ್ತಾರು ಅಡಿ ಎತ್ತರದ ಮರದ ಮೇಲೇರಿ, ಅಲ್ಲಿಂದ ಕೆಳಗೆ ಹಾರುವುದರಿಂದ ಅದನ್ನು ಕನ್ನಡದಲ್ಲಿ ಹಾರುವ ಹಾವು ಎಂದು, ತುಳುವಿನಲ್ಲಿ ಪುಲ್ಲಿಪುತ್ರ ಎಂದು ಕರೆಯುತ್ತಾರೆ, ಮಲೆನಾಡು ಪ್ರದೇಶದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ, ಕರಾವಳಿಯಲ್ಲಿಯೂ ಈ ಹಾವುಗಳು ಅಪರೂಪವಾಗಿ ಕಾಣ ಸಿಗುತ್ತವೆ ಎಂದು ಮಾಹಿತಿ ನೀಡಿದರು.

click me!