Chikkamagaluru: ಮುಳ್ಳಯ್ಯನಗಿರಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಲು ಸರ್ಕಾರಕ್ಕೆ ವರದಿ

By Govindaraj S  |  First Published Oct 14, 2023, 10:23 PM IST

ಬಹುಶಃ, ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗರಿಯ ನಿರ್ಸಗದ ಸೌಂದರ್ಯವನ್ನ ಕಣ್ತುಂಬಿಕೊಳ್ಳದ ಕನ್ನಡಿಗರೇ ಇಲ್ಲ ಅನ್ಸತ್ತೆ. ಕಣ್ಣಿನ ದೃಷ್ಟಿ ಮುಗಿದರೂ ಮುಗಿಯದ ಈ ಸೌಂದರ್ಯಕ್ಕೆ ಆಯಸ್ಸು ಹೆಚ್ಚಿಲ್ಲ ಎಂಬ ಅನುಮಾನ ಈಗ ಮೂಡಿದೆ.


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಅ.14): ಬಹುಶಃ, ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗರಿಯ ನಿರ್ಸಗದ ಸೌಂದರ್ಯವನ್ನ ಕಣ್ತುಂಬಿಕೊಳ್ಳದ ಕನ್ನಡಿಗರೇ ಇಲ್ಲ ಅನ್ಸತ್ತೆ. ಕಣ್ಣಿನ ದೃಷ್ಟಿ ಮುಗಿದರೂ ಮುಗಿಯದ ಈ ಸೌಂದರ್ಯಕ್ಕೆ ಆಯಸ್ಸು ಹೆಚ್ಚಿಲ್ಲ ಎಂಬ ಅನುಮಾನ ಈಗ ಮೂಡಿದೆ. ಏಕಂದ್ರೆ, 2019ರಲ್ಲಿ ಅರಣ್ಯ ಮತ್ತು ಪರಿಸರ ಇಲಾಖೆ ಸರ್ಕಾರಕ್ಕೆ ಚಂದ್ರದ್ರೋಣ ಪರ್ವತಗಳ ಸಾಲಿನಲ್ಲಿರುವ ಮುಳ್ಳಯ್ಯನಗಿರಿ ತಪ್ಪಲಿನ ಸುಮಾರು ಸುಮಾರು 14 ಸಾವಿರ ಎಕರೆಯನ್ನ ಮುಳ್ಳಯ್ಯನಗಿರಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಲು ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಬಳಿಕ ಅದು 18284 ಎಕರೆಯಾಗಿತ್ತು. ತದನಂತರ ಸಾರ್ವಜನಿಕ ಉದ್ದೇಶಗಳಿಗೆ 1448 ಎಕರೆಯನ್ನ ಕೈಬಿಟ್ಟು 16836 ಎಕರೆ ಪ್ರದೇಶವನ್ನ ಸಂರಕ್ಷಿತ ಪ್ರದೇಶ ಮಾಡಲು ವರದಿ ಸಲ್ಲಿಸಿತ್ತು. ಆದರೆ, ಈಗ ಪುನಃ ಆ ವರದಿ ಪರಿಷ್ಕರಣೆಗೊಂಡು ಮೊದಲ ಹಂತವಾಗಿ ಕೇವಲ 4636 ಎಕರೆ ಪ್ರದೇಶವನ್ನಷ್ಟೆ ಸಂರಕ್ಷಿತ ಪ್ರದೇಶವನ್ನಾಗಿಸಲು ಸರ್ಕಾರ ಮುಂದಾಗಿದೆ.

Tap to resize

Latest Videos

undefined

ಸರ್ಕಾರದ ನಿರ್ಧಾರಕ್ಕೆ ಪರಿಸರವಾದಿಗಳಿಂದ ಆತಂಕ: ಸರ್ಕಾರದ ಈ ನಿರ್ಧಾರಕ್ಕೆ ಕೆಲ ಪರಿಸರ ಪ್ರಿಯರು ಹಾಗೂ ಪರಿಸರವಾದಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಮೊದಲ ಹಂತದ ಬಳಿಕ ಎರಡನೇ ಹಂತ ನಿಜಕ್ಕೂ ಆಗುತ್ತಾ ಅನ್ನೋದು ಪರಿಸರವಾದಿಗಳ ಆತಂಕವಾಗಿದೆ. 18284 ಸಾವಿರ ಎರಕೆಯಿಂದ 16836 ಎರಕೆಗೆ ಬಂದು ಬಳಿಕ 4 ಸಾವಿರ ಎಕರೆಗೆ ಬರಲು ಕಾರಣ ಒತ್ತುವರಿದಾರರೇ ಕಾರಣ ಎಂಬ ಮಾತು ಕೇಳಿ ಬಂದಿದೆ. ಈಗಾಗಲೇ ಮುಳ್ಳಯ್ಯನಗಿರಿಯಲ್ಲಿ ಬಹುತೇಕ ಭೂಮಿ ಒತ್ತುವರಿಯಾಗಿ, ಕಾಫಿತೋಟವಾಗಿದೆ. ಫಾರಂ 53, 54, 57ರ ಅಡಿ ಸಾವಿರಾರು ಜನ ಭೂಮಿಗಾಗಿ ಅರ್ಜಿ ಹಾಕಿದ್ದಾರೆ. ರಾಜಕಾರಣದ ಒತ್ತಡದಿಂದಲೇ ಸರ್ಕಾರ ಇಂದು 18 ಸಾವಿರದಿಂದ 4 ಸಾವಿರಕ್ಕೆ ಬಂದಿದೆ ಎಂದು ಪರಿಸರವಾದಿಗಳು ಆರೋಪಿಸಿದ್ದಾರೆ.

ಮುತ್ತತ್ತಿಯಿಂದ ಬನ್ನೇರುಘಟ್ಟದವರೆಗೆ ಬ್ಯಾರಿಕೇಡ್ ನಿರ್ಮಾಣ: ಸಂಸದ ಡಿ.ಕೆ.ಸುರೇಶ್

ಭವಿಷ್ಯದಲ್ಲಿ ಮುಳ್ಳಯ್ಯನಗಿರಿ ಪ್ರದೇಶ ಉಳಿಯುವ ಅನುಮಾನ: ಮುಳ್ಳಯ್ಯನಗಿರಿ ದಟ್ಟ ಅರಣ್ಯದಲ್ಲಿ ಸಾವಿರಾರು ಪ್ರಾಣಿಗಳಿವೆ. ಹಲವು ನದಿಗಳ ಉಗಮ ಸ್ಥಾನವಾಗಿದೆ. ಹತ್ತಾರು ಕೆರೆಗಳಿಗೆ ನೀರಿನ ಮೂಲವಾಗಿದೆ. ಮುಳ್ಳಯ್ಯನಗಿರಿಯಲ್ಲಿ ಈಗಾಗಲೇ ಅರಣ್ಯವೇ ಒತ್ತುವರಿಯಾಗಿದೆ. ಈಗಲೇ ಮುಳ್ಳಯ್ಯನಗಿರಿಯನ್ನ ಉಳಿಸದಿದ್ದರೆ ಮುಂದಿನ ದಿನಗಳಲ್ಲಿ ಒತ್ತುವರಿದಾರರಿಂದ ಮುಳ್ಳಯ್ಯನಗಿರಿ ಪ್ರದೇಶಕ್ಕೆ ಉಳಿಗಾಲವಿರೋಲ್ಲ ಅನ್ನೋದ ಆತಂಕ ಸ್ಥಳಿಯರು ಹಾಗೂ ಪರಿಸರವಾದಿಗಳು. ಹಾಗಾಗಿ, ಈಗಲೇ ಮುಳ್ಳಯ್ಯಗಿರಿಗೊಂದು ಭದ್ರತೆ ಮಾಡದಿದ್ದರೆ ಮುಂದಿನ ಎಂಟತ್ತು ವರ್ಷಗಳಲ್ಲಿ ಮುಳ್ಳಯ್ಯನಗಿರಿ ತಪ್ಪಲಿನ ಪ್ರದೇಶ ಒತ್ತುವರಿ ಹಾಗೂ ತೋಟಗಳಾಗೋದ್ರಲ್ಲಿ ಯಾವುದೇ ಅನುಮಾನವಿಲ್ಲ ಆತಂಕ ಪರಿಸರವಾದಿಗಳದ್ದು. 

Ramanagara: ನೃತ್ಯಗಾರರನ್ನೂ ನಾಚಿಸಿದ ಶಾಸಕ ಬಾಲಕೃಷ್ಣರ ಡ್ಯಾನ್ಸ್!

ಒಟ್ಟಾರೆ, ಸರ್ಕಾರ ಮುಳ್ಳಯ್ಯನಗಿರಿ ತಪ್ಪಲಿನಲ್ಲಿನಲ್ಲಿ ಹಲವು ಗ್ರಾಮಗಳಿವೆ. ಆದ್ರೆ, ಅಲ್ಲಿನ ಜನರಿಗೆ ಯಾವುದೇ ತೊಂದರೆಯಾಗಂತೆ ಪರಿಸರ ಉಳಿಸಲು ಮುಂದಾಗಿದೆ. ಆದ್ರೆ, ಸರ್ಕಾರ ಮಾತ್ರ ಯಾವುದೋ ಮುಲಾಜು-ಒತ್ತಡಕ್ಕೆ ಸಿಲುಕಿ ಈ ರೀತಿ 18 ಸಾವಿರದಿಂದ 4 ಸಾವಿರಕ್ಕೆ ಬಂದಿದೆ ಎಂಬ ಅನುಮಾನ ಮೂಡಿದೆ. ಇರೋ ಮುಳ್ಳಯ್ಯನಗಿರಿಯನ್ನ ಉಳಿಸಿಕೊಂಡರೇ ಮುಂದಿನ ಪೀಳಿಗೆಗೂ ಉಳಿಯಲಿದೆ. ಸರ್ಕಾರ ಮುಲಾಜಿಗೋ ಅಥವ ಒತ್ತಡಕ್ಕೋ ಒಳಗಾಗಿ ಮುಳ್ಳಯ್ಯನಗಿರಿಯನ್ನ ಕಳ್ಕಂಡ್ರೆ ಎಷ್ಟು ಸಾವಿರ ಕೋಟಿಯನ್ನ ಹಾಕಿದರೂ ನೈಸರ್ಗಿಕ ಮುಳ್ಳಯ್ಯನಗಿರಿಯನ್ನ ಬೆಳೆಯಲು ಸಾಧ್ಯವಿಲ್ಲ.

click me!