ದರ್ಶನ್ ಕೂಡ ಸಾಮಾನ್ಯ ಕೈದಿಯಾಗಿದ್ದು ಜೈಲಿನ ನಿಯಮಾನುಸಾರ ಇದ್ದಾರೆ. ವೆಸ್ಟರ್ನ್ ಟಾಯ್ಲಟ್ ಅಥವಾ ಸರ್ಜಿಕಲ್ ಚೇರ್ ವ್ಯವಸ್ಥೆ ಕೇಳಿದ್ದಾರೆ. ಜೈಲು ಡಾಕ್ಟರ್ ಪರಿಶೀಲನೆ ಮಾಡ್ತಾರೆ. ದರ್ಶನ್‌ಗೆ ಬೆನ್ನು ನೋವು ಇದೆ ಅಂತಾ ಹೇಳ್ತಿದ್ದಾರೆ. ಮೆಡಿಕಲ್ ಡಾಕ್ಯುಮೆಂಟ್ ಪರಿಶೀಲನೆ ಮಾಡ್ಬೇಕು. ಈಗ ಜೈಲು ಡಾಕ್ಟರ್ ಇದ್ದಾರೆ ಚಿಕಿತ್ಸೆ ಮಾಡ್ತಾರೆ ಎಂದ ಡಿಐಜಿ ಶೇಷಾ
ಬಳ್ಳಾರಿ(ಆ.31): ಇವತ್ತು ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ದರ್ಶನ್ ತಂಗಿ ಗಂಡ ಭೇಟಿ ಮಾಡಿದ್ದಾರೆ. ಬೇಕರಿ ಫುಡ್, ಸಾಬೂನು, ಬಟ್ಟೆ, ಡ್ರೈಪ್ರೂಟ್ಸ್ ಕೊಟ್ಟಿದ್ದಾರೆ. ಬೆಡ್ ಶೀಟ್ ತಂದಿದ್ದರು ಅದರ ಅವಕಾಶ ನೀಡಿಲ್ಲ.. ವಾಪಾಸ್ ತೆಗೆದುಕೊಂಡು ಹೋಗಿದ್ದಾರೆ. ದರ್ಶನ್ ವಕೀಲರು ಭೇಟಿ ಮಾಡಿಲ್ಲ ಸಿಸಿ ಕ್ಯಾಮಾರ ಕಳಗಡೆ ಪತ್ನಿ ಭೇಟಿ ಮಾಡಿದ್ದಾರೆ ಎಂದು ಡಿಐಜಿ ಶೇಷಾ ತಿಳಿಸಿದ್ದಾರೆ.
ಇಂದು(ಶನಿವಾರ) ಜೈಲಿನ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿಐಜಿ ಶೇಷಾ ಅವರು, ದರ್ಶನ್ ಕೂಡ ಸಾಮಾನ್ಯ ಕೈದಿಯಾಗಿದ್ದು ಜೈಲಿನ ನಿಯಮಾನುಸಾರ ಇದ್ದಾರೆ. ವೆಸ್ಟರ್ನ್ ಟಾಯ್ಲಿಟ್ ಅಥವಾ ಸರ್ಜಿಕಲ್ ಚೇರ್ ವ್ಯವಸ್ಥೆ ಕೇಳಿದ್ದಾರೆ. ಜೈಲು ಡಾಕ್ಟರ್ ಪರಿಶೀಲನೆ ಮಾಡ್ತಾರೆ. ದರ್ಶನ್‌ಗೆ ಬೆನ್ನು ನೋವು ಇದೆ ಅಂತಾ ಹೇಳ್ತಿದ್ದಾರೆ. ಮೆಡಿಕಲ್ ಡಾಕ್ಯುಮೆಂಟ್ ಪರಿಶೀಲನೆ ಮಾಡ್ಬೇಕು. ಈಗ ಜೈಲು ಡಾಕ್ಟರ್ ಇದ್ದಾರೆ ಚಿಕಿತ್ಸೆ ಮಾಡ್ತಾರೆ ಎಂದು ಹೇಳಿದ್ದಾರೆ.
ಬಳ್ಳಾರಿ ಸೆಂಟ್ರಲ್ ಜೈಲ್‌ನಲ್ಲಿ ರಾತ್ರಿ ಊಟ ಸೇವಿಸಿದ ಕೊಲೆ ಆರೋಪಿ ನಟ ದರ್ಶನ್..!
ಹೆಚ್ಚಿನ ಚಿಕಿತ್ಸೆ ಅಗತ್ಯ ಇದ್ರೆ ಸರ್ಕಾರಿ ಆಸ್ಪತ್ರೆ ಇದೆ. ಜೈಲಿನಲ್ಲಿ ಕ್ಯಾಂಟೀನ್ ವ್ಯವಸ್ಥೆ ಇದೆ. ಜೈಲಿನಲ್ಲಿ ನಿಯಮ ಪಾಲನೆ ಕುರಿತು ಪರಿಶೀಲನೆ ಮಾಡಿರುವೆ ಎಂದು ಡಿಐಜಿ ಶೇಷಾ ಮಾಹಿತಿ ನೀಡಿದ್ದಾರೆ.