ಚಿಕ್ಕಮಗಳೂರು: ಜೋಳಿಗೆಯಲ್ಲಿ ಶವ ಹೊತ್ತು ತಂದ ಗ್ರಾಮಸ್ಥರು, ರಸ್ತೆ ಇಲ್ಲದೆ ಪರದಾಟ..!

By Girish Goudar  |  First Published Aug 31, 2024, 7:22 PM IST

ಗ್ರಾಮದ ಅಂಚಿಗೆ ಆಂಬುಲೆನ್ಸ್ ಬಂದರೂ ಕೂಡ ಸುಮಾರು 2 ಕಿ.ಮೀ. ದೂರದಲ್ಲೇ ನಿಲ್ಲುತ್ತೆ. ಆ ಎರಡು ಕಿ.ಮೀ. ದೂರ ಜೋಳಿಗೆಯಲ್ಲೇ ರೋಗಿಯನ್ನ ಹೊತ್ತು ತರಬೇಕು. ಮೃತದೇಹವನ್ನೂ ಅದೇ ರೀತಿ ಹೊತ್ತು ಸಾಗಬೇಕು. ಈ ಮಾರ್ಗದಲ್ಲಿನ ಭದ್ರಾ ನದಿಯ ಉಪನದಿಯ ಹಳ್ಳಕ್ಕೆ ಸ್ಥಳೀಯರೇ ಸಂಕ ನಿರ್ಮಿಸಿಕೊಂಡಿದ್ದು ಆ ಸಂಕದ ಮೇಲೆ ಸಾವಿನ ನಡೆಗೆ ನಡೆಯಬೇಕು. ಈ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಮಾಡಿದ್ರು ಕೂಡ ಯಾವುದೇ ಪ್ರಯೋಜನವಾಗಿಲ್ಲ. 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಆ.31):  ಹೆಣ ಹೊತ್ತುಕೊಂಡು ಹೋಗೋದಕ್ಕೂ ದಾರಿ ಇಲ್ಲದೆ ಜೋಳಿಗೆಯಲ್ಲಿ ಹೆಣ ಹೊತ್ತುಕೊಂಡು ಮನೆಗೆ ಹೋಗಿರುವ ಘಟನೆ ಜಿಲ್ಲೆಯ ಕಳಸ ತಾಲೂಕಿನ ಸಂಸೆ ಸಮೀಪದ ಕೋಣೆಗೂಡು ಗ್ರಾಮದಲ್ಲಿ ಇಂದು(ಶನಿವಾರ) ನಡೆದಿದೆ. 

Tap to resize

Latest Videos

ಕೋಣೆಗೂಡು ಗ್ರಾಮದ 19 ವರ್ಷದ ಯುವಕ ಅವಿನಾಶ್ ಅನಾರೋಗ್ಯದಿಂದ ಬಳಲುತ್ತಿದ್ದ. ಕೂಡಲೇ ಆತನನ್ನ ಜೋಳಿಗೆಯಲ್ಲಿ ಹೊತ್ತುಕೊಂಡು ಆಸ್ಪತ್ರೆಗೆ ಸಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದನು. ಆತನ ಮೃತದೇಹವನ್ನ ಮನೆಗೂ ತರೋಕೆ ಆಗದೆ ಕೋಣೆಗೂಡು ನಿವಾಸಿಗಳು ಮತ್ತದೇ ಜೋಳಿಗೆಯಲ್ಲಿ ಮೃತದೇಹ ಕಟ್ಟಿಕೊಂಡು ಮನೆಗೆ ಹೊತ್ತೊಯ್ದಿದ್ದಾರೆ.

ವಾರಾಂತ್ಯದಲ್ಲಿ ಭೇಟಿ ನೀಡಲು ಟಾಪ್ 5 ಸ್ಥಳಗಳಿವು, ಯಾವ ಸಮಯ ಉತ್ತಮ ಇಲ್ಲಿದೆ ಮಾಹಿತಿ

ಜೋಳಿಗೆಯೇ ಆಂಬುಲೆನ್ಸ್  : 

ಈ ಗ್ರಾಮದ ಅಂಚಿಗೆ ಆಂಬುಲೆನ್ಸ್ ಬಂದರೂ ಕೂಡ ಸುಮಾರು 2 ಕಿ.ಮೀ. ದೂರದಲ್ಲೇ ನಿಲ್ಲುತ್ತೆ. ಆ ಎರಡು ಕಿ.ಮೀ. ದೂರ ಜೋಳಿಗೆಯಲ್ಲೇ ರೋಗಿಯನ್ನ ಹೊತ್ತು ತರಬೇಕು. ಮೃತದೇಹವನ್ನೂ ಅದೇ ರೀತಿ ಹೊತ್ತು ಸಾಗಬೇಕು. ಈ ಮಾರ್ಗದಲ್ಲಿನ ಭದ್ರಾ ನದಿಯ ಉಪನದಿಯ ಹಳ್ಳಕ್ಕೆ ಸ್ಥಳೀಯರೇ ಸಂಕ ನಿರ್ಮಿಸಿಕೊಂಡಿದ್ದು ಆ ಸಂಕದ ಮೇಲೆ ಸಾವಿನ ನಡೆಗೆ ನಡೆಯಬೇಕು. ಈ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಮಾಡಿದ್ರು ಕೂಡ ಯಾವುದೇ ಪ್ರಯೋಜನವಾಗಿಲ್ಲ. 

ಸೇತುವೆ ಮನವಿ ಸಲ್ಲಿಸಿದರೂ ಪ್ರಯೋಜನವಿಲ್ಲ : 

ಕಳೆದ 2 ವರ್ಷಗಳಲ್ಲಿ ಇದೊಂದೇ ಗ್ರಾಮದಲ್ಲಿ ಮೂರು ಜನ ಸಾವನ್ನಪ್ಪಿದ್ದಾರೆ. ಆಗಲೂ ಕೂಡ ಈ ಕೋಣೆಗೂಡು ಗ್ರಾಮದ ಜನ ಇದೇ ರೀತಿ ಮೃತದೇಹವನ್ನ ಸಾಗಿಸಿದ್ದರು. ಗ್ರಾಮದಲ್ಲಿ ಯಾರಿಗಾದರೂ ಆರೋಗ್ಯ ಕೆಟ್ಟರೆ ಅವರನ್ನ ಆಸ್ಪತ್ರೆಗೆ ಸೇರಿಸಲು ಊರಿನ ಇಂದಿಗೂ ಪರದಾಡ್ತಿದ್ದಾರೆ. ಯಾರಿಗಾದರೂ ಆರೋಗ್ಯ ತುರ್ತಾಗಿ ಹದಗೆಟ್ಟು ತಕ್ಷಣ ಆಸ್ಪತ್ರೆಗೆ ಹೋಗಬೇಕು ಅಂದ್ರೆ ಊರಲ್ಲಿ ಜನ ಇದ್ರೆ ಮಾತ್ರ ಸಾಧ್ಯ. ಇಲ್ಲವಾದರೆ ಸಾವೇ ಗತಿ. 50ಕ್ಕೂ ಹೆಚ್ಚು ಕುಟುಂಬಗಳಿರೋ ಈ ಕೋಣೆಗೂಡು ಗ್ರಾಮದ ಜನ ಕಡೇ ಪಕ್ಷ ಜೀವ ಉಳಿಸಿಕೊಳ್ಳೋಕ್ಕಾದ್ರು ರಸ್ತೆ, ಸೇತುವೆ ನಿರ್ಮಿಸಿಕೊಡಿ ಎಂದು ದಶಕಗಳಿಂದ ಮನವಿ ಮಾಡ್ತಾನೆ ಇದ್ದಾರೆ. 

ಆದ್ರೆ, ಇವರ ನೋವಿಗೆ ಇಂದಿಗೂ ಸ್ಪಂದನೆ ಸಿಕ್ಕಿಲ್ಲ. ಸಮಪರ್ಕ ರಸ್ತೆಯೂ ಇಲ್ಲ. ಕಾಡಿನ ಕಲ್ಲು-ಮುಳ್ಳುವಳ ಮಾರ್ಗದಲ್ಲಿ ಶಾಲಾ ಕಾಲೇಜುಗೆ ಹೋಗೋ ಮಕ್ಕಳು ಕೂಡ ಪರದಾಡ್ತಿದ್ದಾರೆ. ಆದರೆ, ಇವರ ನೋವಿನ ಕೂಗು ಜನನಾಯಕರು, ಅಧಿಕಾರಿಗಳಿಗೆ ಇಂದಿಗೂ ಕೇಳ್ತಾನೆ ಇಲ್ಲ. ದಶಕಗಳಿಂದ ಇವರ ಪರಿಸ್ಥಿತಿ ನೋಡುದ್ರೆ 77 ವರ್ಷದ ಹಿಂದೆ ಗಾಂಧಿ ಕೊಡ್ಸಿದ್ ಸ್ವಾತಂತ್ರ್ಯ ಇವರಿಗೆ ಸಿಕ್ಕಿದ್ಯೋ...ಇಲ್ವೋ... ಅನ್ನೋ ಪ್ರಶ್ನೆ ಕಾಡದೆ ಇರಲ್ಲ. 

click me!