ಪೊಲೀಸಪ್ಪನ ₹97 ಲಕ್ಷ ಹಣವನ್ನೇ ಕದ್ದ ಕಾರು ಡ್ರೈವರ್, ಸುಮ್ನೆ ಬಿಟ್‌ಬಿಡ್ತಾರಾ? ಈಗ ನೋಡಿ ಕಥೆ ಏನಾಯ್ತು!

Published : Aug 27, 2025, 05:43 PM IST
Chitradurga

ಸಾರಾಂಶ

ಚಳ್ಳಕೆರೆಯಲ್ಲಿ ನಿವೃತ್ತ ಎಸ್ಪಿ ಗುರುಪ್ರಸಾದ್ ಅವರಿಂದ ₹97 ಲಕ್ಷ ಕಳವು ಮಾಡಲು ಯತ್ನಿಸಿದ ಬಾಡಿಗೆ ಕಾರು ಚಾಲಕನನ್ನು ಪೊಲೀಸರು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಬಂಧಿಸಿದ್ದಾರೆ. ಆಂಧ್ರದತ್ತ ಪರಾರಿಯಾಗುತ್ತಿದ್ದ ಚಾಲಕನನ್ನು ಬೆನ್ನಟ್ಟಿ ಹಣ ವಶಪಡಿಸಿಕೊಳ್ಳಲಾಗಿದೆ.

ಚಿತ್ರದುರ್ಗ:  ಜಿಲ್ಲೆಯ ಚಳ್ಳಕೆರೆ ಪಟ್ಟಣದಲ್ಲಿ ನಿನ್ನೆ ರಾತ್ರಿ ನಡೆದ ಘಟನೆಯೊಂದು ಸಂಪೂರ್ಣ ಸಿನಿಮಾ ದೃಶ್ಯವನ್ನು ಹೋಲಿಸುವಂತಿತ್ತು. ಬಾಡಿಗೆ ಕಾರು ಚಾಲಕನು ಕಾರಿನಲ್ಲಿದ್ದ 97 ಲಕ್ಷ ರೂಪಾಯಿ ನಗದು ಕಸಿದುಕೊಂಡು ಪರಾರಿಯಾಗಲು ಯತ್ನಿಸಿದ ಪ್ರಕರಣದಲ್ಲಿ, ಚಳ್ಳಕೆರೆ ಪೊಲೀಸರು ತಕ್ಷಣ ಬೆನ್ನಟ್ಟಿ ಆರೋಪಿ ಚಾಲಕನನ್ನು ಬಂಧಿಸುವಲ್ಲಿ ಯಶಸ್ವಿಯಾದರು.

ವಂಚನೆಗೆ ಗುರಿಯಾದ ನಿವೃತ್ತ ಎಸ್ಪಿ ಗುರುಪ್ರಸಾದ್

ಬೆಂಗಳೂರು ಮೂಲದ ನಿವೃತ್ತ ಸಿಬಿಐ ಎಸ್ಪಿ ಗುರುಪ್ರಸಾದ್ ತಮ್ಮ ಪತ್ನಿ ಲಲಿತಾ ಜೊತೆ ಬಳ್ಳಾರಿಗೆ ತೆರಳಿದ್ದರು. ಅಲ್ಲಿ ಕುಟುಂಬದ ಜಮೀನು ಮಾರಾಟ ಮಾಡಿಕೊಂಡು ಸುಮಾರು ₹97 ಲಕ್ಷ ರೂಪಾಯಿ ನಗದು ಪಡೆದು, ಬೆಂಗಳೂರಿಗೆ ಹಿಂತಿರುಗುವ ಸಲುವಾಗಿ ಬಾಡಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಕಾರು ಆಂಧ್ರದ ಹಿಂದೂಪುರ ಮೂಲದ ರಮೇಶ್ ಎಂಬುವನಿಗೆ ಸೇರಿದ್ದಾಗಿದೆ.

ಹೋಟೆಲ್‌ನಲ್ಲಿ ಊಟ – ಚಾಲಕನ ಎಸ್ಕೇಪ್

ಮಧ್ಯದಲ್ಲಿ, ಚಳ್ಳಕೆರೆ ಪಟ್ಟಣದ ಬಳಿ ದಂಪತಿ ಹೋಟೆಲ್‌ನಲ್ಲಿ ಊಟ ಮಾಡಲು ಕಾರು ನಿಲ್ಲಿಸಿದರು. ಆದರೆ ಊಟ ಮುಗಿಸಿ ಹೊರಬಂದಾಗ, ಚಾಲಕ ರಮೇಶ್ ಕಾರಿನಲ್ಲಿದ್ದ ಹಣ ಸಮೇತ ಸ್ಥಳದಿಂದ ಎಸ್ಕೇಪ್ ಆಗಿದ್ದ. ತಕ್ಷಣವೇ ಗುರುಪ್ರಸಾದ್ ಅವರು ಪೊಲೀಸರಿಗೆ ದೂರು ನೀಡಿದರು.

ಸಿನಿಮೀಯ ರೀತಿಯ ಬೆನ್ನಟ್ಟುವಿಕೆ

ಮಾಹಿತಿ ತಿಳಿದ ಕೂಡಲೇ ಚಳ್ಳಕೆರೆ ಡಿವೈಎಸ್ಪಿ ರಾಜಣ್ಣ ಮತ್ತು ಸಿಪಿಐ ಕುಮಾರ್ ನೇತೃತ್ವದಲ್ಲಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದರು. ಕಾರನ್ನು ಹಿಂಬಾಲಿಸಿದ ಪೊಲೀಸರು ರಮೇಶ್ ಆಂಧ್ರದತ್ತ ಕಾರನ್ನು ಚಲಾಯಿಸುತ್ತಿರುವುದು ಪತ್ತೆಹಚ್ಚಿದರು. ಆದರೆ, ಪೊಲೀಸರ ಬೆನ್ನಟ್ಟುವಿಕೆ ಅರಿತ ಆರೋಪಿಯು ವೇಗವಾಗಿ ಕಾರು ಚಲಾಯಿಸಿ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದನು.

ಆರೋಪಿಯ ಬಂಧನ ಮತ್ತು ಹಣ ವಶ

ಈ ಘಟನೆಯ ನಂತರ, ಪೊಲೀಸರು ಆರೋಪಿ ರಮೇಶ್‌ನ್ನು ಬಂಧಿಸಿ, ಕಾರಿನಲ್ಲಿ ಇದ್ದ ₹97 ಲಕ್ಷ ರೂಪಾಯಿ ನಗದು ಮತ್ತು ವಾಹನವನ್ನು ವಶಕ್ಕೆ ಪಡೆದರು. ಆರೋಪಿಯ ವಿರುದ್ಧ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

ಜನಮನ ಸೆಳೆದ ಕಾರ್ಯಾಚರಣೆ

ಈ ಪ್ರಕರಣದಲ್ಲಿ ಪೊಲೀಸರ ತ್ವರಿತ ಕಾರ್ಯಾಚರಣೆ ಹಾಗೂ ಸಿನಿಮೀಯ ರೀತಿಯ ಬೆನ್ನಟ್ಟುವಿಕೆ ಜನಮನ ಸೆಳೆದಿದ್ದು, ನಿವೃತ್ತ ಎಸ್ಪಿ ಗುರುಪ್ರಸಾದ್ ಮತ್ತು ಅವರ ಕುಟುಂಬ ಪೊಲೀಸರಿಗೆ ಧನ್ಯವಾದ ತಿಳಿಸಿದ್ದಾರೆ.

PREV
Read more Articles on
click me!

Recommended Stories

'ನೀವು ಎಂಎಲ್ಸಿ ಅನ್ನೋಕೆ ಸಾಕ್ಷಿ ಏನು?' ಕೇಶವ ಪ್ರಸಾದ್ ಕಾರು ತಡೆದ ಟೋಲ್ ಸಿಬ್ಬಂದಿ, ಒಂದು ಗಂಟೆ ಕಾಲ ಕಿರಿಕ್!
ಪಾಕಿಸ್ತಾನಕ್ಕೆ ನೌಕಾಪಡೆ ರಹಸ್ಯ ಮಾಹಿತಿ ಸೋರಿಕೆ ಪ್ರಕರಣ: ಉಡುಪಿಯಲ್ಲಿ ಗುಜರಾತ್ ಮೂಲದ ಮತ್ತೊಬ್ಬ ಆರೋಪಿ ಬಂಧನ