ಗದಗ: ಜಿಲ್ಲಾಸ್ಪತ್ರೆಯಲ್ಲಿ ವ್ಹೀಲ್‌ ಚೇರ್‌ ಇಲ್ಲದೇ ರೋಗಿ ಹೊತ್ತೊಯ್ದ ಸಂಬಂಧಿಕರು

Kannadaprabha News   | Asianet News
Published : Mar 01, 2020, 09:40 AM IST
ಗದಗ: ಜಿಲ್ಲಾಸ್ಪತ್ರೆಯಲ್ಲಿ ವ್ಹೀಲ್‌ ಚೇರ್‌ ಇಲ್ಲದೇ ರೋಗಿ ಹೊತ್ತೊಯ್ದ ಸಂಬಂಧಿಕರು

ಸಾರಾಂಶ

ವ್ಹೀಲ್‌ ಚೇರ್‌ ಇಲ್ಲದೇ ರೋಗಿ ಹೊತ್ತೊಯ್ದ ಸಂಬಂಧಿಕರು| ಗದಗ ಜಿಲ್ಲಾಸ್ಪತ್ರೆಯಲ್ಲಿ ನಡೆದ ಘಟನೆ|  ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್‌|

ಗದಗ(ಮಾ.01): ನಗರದ ಹೊರವಲಯದಲ್ಲಿರುವ ಜಿಲ್ಲಾಸ್ಪತ್ರೆಯಲ್ಲಿ ವ್ಹೀಲ್‌ ಚೇರ್‌ ಇಲ್ಲದೇ ರೋಗಿಯನ್ನು ಸಂಬಂಧಿಕರೇ ಹೊತ್ತೊಯ್ಯುತ್ತಿರುವ ಅಮಾನವೀಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಶನಿವಾರ ವೈರಲ್‌ ಆಗಿದೆ. 

ವೈದ್ಯರು, ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ ಸ್ಪ್ರೇಚರ್‌, ವ್ಹೀಲ್ ಚೇರ್‌ ಸಿಗದ ಕಾರಣ ಅಜ್ಜಿಯನ್ನು ಸಂಬಂಧಿಕರು ಎತ್ತಿಕೊಂಡು ಹೋಗುತ್ತಿರುವ ದೃಶ್ಯಗಳು ವಿಡಿಯೋದಲ್ಲಿವೆ. ಸ್ಥಳದಲ್ಲಿದ್ದ ಸಾರ್ವಜನಿಕರೇ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಎರಡು ದಿನಗಳ ಹಿಂದೆಯೇ ಈ ಘಟನೆ ನಡೆದಿದ್ದು, ಈಗ ವಿಡಿಯೋ ವೈರಲ್  ಆಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಜಿಲ್ಲಾ ಆರೋಗ್ಯಾಧಿಕಾರಿ ಡಾ. ಬಸರಿಗಿಡದ ಅವರನ್ನು ಸಂಪರ್ಕಿಸಿದರೆ, ಗದಗ ಜಿಲ್ಲಾಸ್ಪತ್ರೆ ಈಗ ವೈದ್ಯಕೀಯ ವಿಜ್ಞಾನ ಸಂಸ್ಥೆ (ಜಿಮ್ಸ್‌) ವ್ಯಾಪ್ತಿಗೆ ಒಳಪಡಲಿದೆ ಎಂದರು. ಜಿಮ್ಸ್‌ ನಿರ್ದೇಶಕ ಡಾ. ಬೂಸರೆಡ್ಡಿ ಸಂರ್ಪರ್ಕಿಸಿದರೆ, ಈ ಕುರಿತು ತನಿಖೆ ನಡೆಸಿ, ಕ್ರಮ ಕೈಗೊಳ್ಳಲಾಗುವುದು ಎಂದರು. ಈ ಅಜ್ಜಿ ಯಾವ ಊರಿನವಳು, ಯಾವ ಚಿಕಿತ್ಸೆಗಾಗಿ ಬಂದಿದ್ದು, ಅವರನ್ನು ಹೊತ್ತೊಯ್ದವರು ಯಾರು ಎಂಬ ಬಗ್ಗೆ ಯಾವುದೇ ಮಾಹಿತಿ ತಿಳಿದು ಬಂದಿ​ಲ್ಲ.

PREV
click me!

Recommended Stories

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ