ಜಿಲ್ಲೆಯಿಂದ ಹೊರ ರಾಜ್ಯಗಳಿಗೆ ತೆರಳುವ ವಲಸೆ ಕಾರ್ಮಿಕರನ್ನು ನೋಂದಣಿ ಮಾಡಿ ಅವರನ್ನು ಜಿಲ್ಲೆಯಿಂದ ಕಳುಹಿಸಿಕೊಡುವ ಸಲುವಾಗಿ ಚಾಮರಾಜನಗರದ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ವಲಸೆ ಕಾರ್ಮಿಕರ ಕೇಂದ್ರವನ್ನು ತೆರೆಯಲಾಗಿದೆ. ವಲಸೆ ಕಾರ್ಮಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ತಿಳಿಸಿದ್ದಾರೆ.
ಚಾಮರಾಜನಗರ(ಜೂ.10): ಜಿಲ್ಲೆಯಿಂದ ಹೊರ ರಾಜ್ಯಗಳಿಗೆ ತೆರಳುವ ವಲಸೆ ಕಾರ್ಮಿಕರನ್ನು ನೋಂದಣಿ ಮಾಡಿ ಅವರನ್ನು ಜಿಲ್ಲೆಯಿಂದ ಕಳುಹಿಸಿಕೊಡುವ ಸಲುವಾಗಿ ಚಾಮರಾಜನಗರದ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ವಲಸೆ ಕಾರ್ಮಿಕರ ಕೇಂದ್ರವನ್ನು ತೆರೆಯಲಾಗಿದೆ. ವಲಸೆ ಕಾರ್ಮಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನ್ಯಾಯಾಲಯದ ನಿರ್ದೇಶನದಂತೆ ಹೊರರಾಜ್ಯಗಳಿಗೆ ಜಿಲ್ಲೆಯಿಂದ ತೆರಳಲು ಬಯಸುವ ವಲಸೆ ಕಾರ್ಮಿಕರಿಗೆ ಅಗತ್ಯ ವ್ಯವಸ್ಥೆಯೊಂದಿಗೆ ಕಳುಹಿಸಿಕೊಡಬೇಕಿದೆ. ಹೀಗಾಗಿ ನÜಗರದಲ್ಲಿ ವಲಸೆ ಕಾರ್ಮಿಕರ ನೊಂದಣಿ ಕೇಂದ್ರ ತೆರೆಯಲಾಗಿದೆ. ಹೊರರಾಜ್ಯಗಳಿಗೆ ತೆರಳಲು ಇಚ್ಚಿಸುವ ವಲಸೆ ಕಾರ್ಮಿಕರು ನೋಂದಣಿ ಕೇಂದ್ರದಲ್ಲಿ ವಿವರವನ್ನು ನೊಂದಾಯಿಸುವಂತೆ ಅವರು ಹೇಳಿದರು.
20ಕ್ಕೂ ಹೆಚ್ಚು ಯುವಕರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆ
ನೋಂದಣಿ ಕೇಂದ್ರದಲ್ಲಿ ಜಿಲ್ಲೆಯಿಂದ ಹೊರರಾಜ್ಯಗಳಿಗೆ ತೆರಳುವ ವಲಸೆ ಕಾರ್ಮಿಕರ ವಿವರವನ್ನು ಸೇವಾಸಿಂಧು ತಂತ್ರಾಂಶದಲ್ಲಿ ನಾವೇ ನೋಂದಣಿ ಮಾಡಿಕೊಡಲಿದ್ದೇವೆ. ನೊಂದಾಯಿಸಿದ ವಲಸೆ ಕಾರ್ಮಿಕರಿಗೆ ಮೈಸೂರು, ಬೆಂಗಳೂರಿನಿಂದ ಅವರ ರಾಜ್ಯಗಳಿಗೆ ರೈಲಿನಲ್ಲಿ ಕಳುಹಿಸಿಕೊಡಲು ಅಗತ್ಯ ವ್ಯವಸ್ಥೆ ಕಲ್ಪಿಸಲಿದ್ದೇವೆ ಎಂದರು.
ಹೊರರಾಜ್ಯಗಳಿಗೆ ತೆರಳುವ ವಲಸೆ ಕಾರ್ಮಿಕರಿಗೆ ನೆರವಾಗಿ ಕಳುಹಿಸಿಕೊಡುವ ಉದ್ದೇಶದಿಂದ ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ತೆರೆಯಲಾಗಿರುವ ವಲಸೆ ಕಾರ್ಮಿಕರ ನೋಂದಣಿ ಕೇಂದ್ರಕ್ಕೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ.
ಕೊರೋನಾಗೆ ಡಿಎಂಕೆ ಶಾಸಕ ಬಲಿ; ಹುಟ್ಟುಹಬ್ಬದಂದೇ ಕೊನೆಯುಸಿರೆಳೆದ ಅನ್ಬಳಗನ್!
ನೋಡಲ್ ಅಧಿಕಾರಿಗಳನ್ನಾಗಿ ಕೊಳ್ಳೇಗಾಲ ಉಪವಿಭಾಗಾಧಿಕಾರಿ (ಮೊ. ನಂ. 9742164846), ಚಾಮರಾಜನಗರ ತಹಶೀಲ್ದಾರ್ (ಮೊ.ನಂ. 9902434583), ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಉಪನ್ಯಾಸಕರಾದ ಅರುಣ್ (ಮೊ. 7899540377), ಚಿಕ್ಕ ಬಸಪ್ಪ (ಮೊ. 948183093), ಇ-ಡಿಸ್ಟ್ರಿಕ್ಟ್ ಯೋಜನೆ ಯೋಜನಾ ವ್ಯವಸ್ಥಾಪಕ ನಂಜುಂಡಸ್ವಾಮಿ (ಮೊ. 9538100543) ಅವರನ್ನು ನೇಮಕ ಮಾಡಲಾಗಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರ್ ಸಿ ಎಚ್ ಅಧಿಕಾರಿ ಡಾ. ಕೆ.ಎಂ. ವಿಶ್ವೇಶ್ವರಯ್ಯ (ಮೊ. 9449843192) ಅವರು ಆರೋಗ್ಯ ತಪಾಸಣೆ ಕಾರ್ಯ ನಿರ್ವಹಿಸುವರು. ಊಟೋಪಚಾರದ ವ್ಯವಸ್ಥೆಗಾಗಿ ಜಿಲ್ಲಾ ಪರಿಶಿಷ್ಟವರ್ಗಗಳ ಅಧಿಕಾರಿ ಹೊನ್ನೇಗೌಡ (9448602635), ಸ್ವಚ್ಚತೆ ಕಾರ್ಯದ ಮೇಲುಸ್ತುವಾರಿಗಾಗಿ ನಗರಸಭೆ ಪೌರಾಯುಕ್ತ ರಾಜಣ್ಣ (9480362679) ಅವರನ್ನು ನೇಮಿಸಲಾಗಿದೆ.
ಕೃಷಿ, ರೈತಸ್ನೇಹಿ 'ಮೇಘದೂತ್' ಮೊಬೈಲ್ ಅಪ್ಲಿಕೇಷನ್ ಬಿಡುಗಡೆ
ಹೊರರಾಜ್ಯಗಳಿಗೆ ತೆರಳುವ ವಲಸೆ ಕಾರ್ಮಿಕರು ಕೇಂದ್ರದಲ್ಲಿ ನೋಂದಾಯಿಕೊಂಡರೆ ಅವರನ್ನು ತಮ್ಮ ರಾಜ್ಯಗಳಿಗೆ ತೆರಳಲು ಅನುಕೂಲ ಕಲ್ಪಿಸಿಕೊಡಲಾಗುವುದು. ಈ ವ್ಯವಸ್ಥೆಯ ಪ್ರಯೋಜನವನ್ನು ವಲಸೆ ಕಾರ್ಮಿಕರು ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ತಿಳಿಸಿದ್ದಾರೆ.