Bengaluru Weather: ಮಳೆಯ ನಡುವೆಯೂ ಬೆಂಗಳೂರಿನಲ್ಲಿ ದಾಖಲೆಯ ತಾಪಮಾನ ಏರಿಕೆ; ಮುಂದಿನ ನಾಲ್ಕು ದಿನ ಮಳೆ ಅಲರ್ಟ್

Published : Sep 21, 2026, 10:59 AM IST
Bengaluru

ಸಾರಾಂಶ

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಬೆಂಗಳೂರು ಸೇರಿದಂತೆ ರಾಜ್ಯದ 16 ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನ ಮಳೆಯಾಗುವ ಮುನ್ಸೂಚನೆ ಇದೆ. ಆದರೆ, ಮಳೆಯ ನಡುವೆಯೂ ರಾಜ್ಯದ ಒಳನಾಡು ಮತ್ತು ಬೆಂಗಳೂರಿನಲ್ಲಿ ತಾಪಮಾನವು ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾದರೆ ತಾಪಮಾನ ಕಡಿಮೆಯಾಗುವ ನಿರೀಕ್ಷೆಯಿದೆ.

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ 16 ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಮಳೆಯಾಗಲಿದೆ ಎಂದು ಎಐಂಡಿ ಮುನ್ಸೂಚನೆ ನೀಡಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವ ಪರಿಣಾಮ ರಾಜ್ಯದಲ್ಲಿ 16 ಜಿಲ್ಲೆಗಳಿಎ ಯಲ್ಲೋ ಅರ್ಟ್ ನೀಡಲಾಗಿದೆ.

ವಾಡಿಕೆ ತಾಪಮಾನಕ್ಕಿಂತ ಐದರಿಂದ ಆರು ಡಿಗ್ರಿ ವರೆಗೆ ತಾಪಮಾನ ಏರಿಕೆ

ಆದರೆ, ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ನಡುವೆಯೂ ರಾಜ್ಯದಲ್ಲಿ ತಾಪಮಾನದಲ್ಲಿ ಭಾರೀ ಏರಿಕೆ ಕಂಡು ಬರುತ್ತಿದೆ. ಕರ್ನಾಟಕದ ಒಳನಾಡು ಪ್ರದೇಶಗಳಲ್ಲಿ ತಾಪಮಾನ ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡಿದೆ. ವಾಡಿಕೆ ತಾಪಮಾನಕ್ಕಿಂತ ಐದರಿಂದ ಆರು ಡಿಗ್ರಿ ವರೆಗೆ ತಾಪಮಾನ ಏರಿಕೆಯಾಗಿದೆ. ಬೆಂಗಳೂರು ಮಾತ್ರವಲ್ಲದೆ, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ತಾಪಮಾನ ಏರಿಕೆಯಾಗಿದ್ದು, ಬೆಂಗಳೂರು ವಿಮಾಮ ನಿಲ್ದಾಣದಲ್ಲಿ ನಿನ್ನೆ 5 ಡಿಗ್ರಿ ಏರಿಕೆ ಆಗಿತ್ತು.

ನಗರನಿನ್ನೆ ತಾಪಮಾನವ್ಯತ್ಯಾಸ
ಬೆಂಗಳೂರು ನಗರ31.22.6
ಬೆಂ ವಿಮಾನ ನಿಲ್ದಾಣ33.14.9
ವಿಜಯಪುರ354.1
ಬಾಗಲಕೋಟೆ34.9 4.9
ಗದಗ 35 5.4
ಕಲ್ಬುರ್ಗಿ37.45.6
ಕೊಪ್ಪಳ366.8
ರಾಯಚೂರು364.4
ಮೈಸೂರು33.84.2
ದಾವಣಗೆರೆ334.9

ಕರ್ನಾಟಕದಲ್ಲಿ ಮತ್ತೆ ಮಳೆ ಚುರುಕು

ಇನ್ನು, ನಿನ್ನೆ ರಾತ್ರಿ ಬೆಂಗಳೂರಲ್ಲಿ ಸಾಧಾರಣ ಮಳೆಯಾಗಿದ್ದು, ವಿಜಯ ನಗರ, ದೀಪಾಂಜಲಿ ನಗರ, ಆರ್ ನಗರ, ಚಂದ್ರಾಲೇಔಟ್, ಸುಂಕದಕಟ್ಟೆ ಭಾಗಗಳಲ್ಲಿ ಸಾಧಾರಣ ಪ್ರಮಾಣದ ಮಳೆಯಾಗಿದೆ. ಮಳೆಯಿಂದ ಯಾವುದೇ ಹಾನಿ ಸಂಭವಿಸಿಲ್ಲ, ಆದರೆ ಬೈಕ್ ಸವಾರರು ಮಳೆಯಿಂದ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಸುಮಾರು ಅರ್ಧ ಗಂಟೆ ಕಾಲ ಸುರಿದ ಮಳೆ ಆ ಬಳಿಕ ಬಿಡುವು ನೀಡಿತ್ತು.

ಉಳಿದರೆ ಮುಂದಿನ ನಾಲ್ಕು ದಿನಗಳ ಕಾಲ ಕರ್ನಾಟಕದಲ್ಲಿ ಉತ್ತಮ ಮಳೆಯಾಗಲಿದೆ. ಬೀದರ್, ಕಲಬುರಗಿ, ಯಾದಗಿರಿ, ವಿಜಯಪುರ, ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು, ರಾಮನಗರ ಜಿಲ್ಲೆಗಳಿಗೆ ಮುಂದಿನ ನಾಲ್ಕು ದಿನ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. ಈ ಜಿಲ್ಲೆಗಳಿಗೆ ಇಂದು ಹಳದಿ ಅಲರ್ಟ್ ಘೋಷಣೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಉತ್ತಮ ಮಳೆಯಾದರೆ ತಾಪಮಾನ ಪ್ರಮಾಣ 2-3 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗುವ ನಿರೀಕ್ಷೆ ಇದೆ.

PREV
Read more Articles on
click me!

Recommended Stories

Free Blood: ಬಿಪಿಎಲ್ ಕಾರ್ಡ್‌ದಾರರಿಗೆ ಉಚಿತ ರಕ್ತ ಒದಗಿಸುವ ಯೋಜನೆ; ಮುಂದಿನ ವರ್ಷದಿಂದಲೇ ಯೋಜನೆ ಜಾರಿ
ತಮಿಳುನಾಡಿನಲ್ಲಿ ಬೆಂಗಳೂರು ಎಕ್ಸ್‌ಪ್ರೆಸ್‌ ರೈಲಿಗೆ ಅಪ್ಪಳಿಸಿದ ಬಂಡೆ, ತಪ್ಪಿತು ಮಹಾ ದುರಂತ!