ಹಜರತ್ ನಿಜಾಮುದ್ದೀನ ರೈಲ್‌ಗೆ ಗಂಧರ್ವರ ಹೆಸರಿಡಲು ಶಿಫಾರಸು !

By Kannadaprabha News  |  First Published Jun 29, 2023, 5:33 AM IST

ಹುಬ್ಬಳ್ಳಿ-ದೆಹಲಿ ಮಧ್ಯೆ ಸಂಚರಿಸುವ ಹಜರತ್‌ ನಿಜಾಮುದ್ದೀನ್‌ ರೈಲಿಗೆ ಸಂಗೀತ ದಿಗ್ಗಜ ‘ಸವಾಯಿ ಗಂಧರ್ವ’ರ ಹೆಸರನ್ನಿಡಲು ಮುಂದಾಗಿದೆ. ಈ ಸಂಬಂಧ ನೈರುತ್ಯ ರೈಲ್ವೆ ವಲಯದ ಮಹಾಪ್ರಬಂಧಕರು ಈಗಾಗಲೇ ಅನುಮೋದಿಸಿ ರೈಲ್ವೆ ಮಂಡಳಿಗೆ ಶಿಫಾರಸು ಮಾಡಿದ್ದಾರೆ. ಅಲ್ಲಿಂದ ಅನುಮೋದನೆಗೊಳ್ಳುವುದೊಂದೇ ಬಾಕಿಯಿದೆ.


ಹುಬ್ಬಳ್ಳಿ (ಜೂ.29):  ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಶ್ರೀ ಸಿದ್ಧಾರೂಢ ಸ್ವಾಮೀಜಿ ಹೆಸರಿಟ್ಟು ಆರೂಢರ ಹೆಸರನ್ನು ಅಜರಾಮರ ಮಾಡಿರುವ ರೈಲ್ವೆ ಇಲಾಖೆ, ಇದೀಗ ವಾರಕ್ಕೊಮ್ಮೆ ಹುಬ್ಬಳ್ಳಿ-ದೆಹಲಿ ಮಧ್ಯೆ ಸಂಚರಿಸುವ ಹಜರತ್‌ ನಿಜಾಮುದ್ದೀನ್‌ ರೈಲಿಗೆ ಸಂಗೀತ ದಿಗ್ಗಜ ‘ಸವಾಯಿ ಗಂಧರ್ವ’ರ ಹೆಸರನ್ನಿಡಲು ಮುಂದಾಗಿದೆ. ಈ ಸಂಬಂಧ ನೈರುತ್ಯ ರೈಲ್ವೆ ವಲಯದ ಮಹಾಪ್ರಬಂಧಕರು ಈಗಾಗಲೇ ಅನುಮೋದಿಸಿ ರೈಲ್ವೆ ಮಂಡಳಿಗೆ ಶಿಫಾರಸು ಮಾಡಿದ್ದಾರೆ. ಅಲ್ಲಿಂದ ಅನುಮೋದನೆಗೊಳ್ಳುವುದೊಂದೇ ಬಾಕಿಯಿದೆ.

ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಗಂಗೂಬಾಯಿ ಹಾನಗಲ್‌, ಭೀಮಸೇನ ಜೋಶಿ ಅವರನ್ನು ರೂಪಿಸಿದ ಮಹಾನಗುರು ‘ಸವಾಯಿ ಗಂಧರ್ವ’ರು. ಹಿಂದೆ 2014ರಲ್ಲಿ ಗಂಗೂಬಾಯಿ ಹಾಗೂ ಜೋಶಿ ಅವರ ಅಂಚೆ ಚೀಟಿ ಬಿಡುಗಡೆ ಮಾಡಲಾಗಿತ್ತು. ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸವಾಯಿ ಗಂಧರ್ವರ ಮೊಮ್ಮಗ ಸೋಮನಾಥ ಜೋಶಿ, ತಮ್ಮ ಅಜ್ಜ ಸವಾಯಿ ಅವರ ಹೆಸರಲ್ಲೂ ಅಂಚೆ ಚೀಟಿ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರು. ಆ ಪ್ರಸ್ತಾವನೆ ಹೋದ ಬಳಿಕ 2022ರ ಅಕ್ಟೋಬರ್‌ನಲ್ಲಿ ಸವಾಯಿ ಅವರ ಅಂಚೆ ಚೀಟಿ ಬಿಡುಗಡೆಗೊಳಿಸಲಾಗಿತ್ತು.

Latest Videos

undefined

ಅಳ್ನಾವರ ಬಸ್‌ ನಿಲ್ದಾಣದಲ್ಲಿ ಸ್ವಚ್ಛತೆ ಮಾಯ, ಕಸದ ರಾಶಿ, ಗಬ್ಬುನಾತ!

ಆಗಲೇ ಕುಂದಗೋಳ ರೈಲ್ವೆ ನಿಲ್ದಾಣ ಹಾಗೂ ಹುಬ್ಬಳ್ಳಿ- ದೆಹಲಿ ಮಧ್ಯೆ ಸಂಚರಿಸುವ ರೈಲಿಗೆ ಗಂಧರ್ವರ ಹೆಸರಿಡುವಂತೆ ಮನವಿ ಮಾಡಿದ್ದರು. ಅದರಂತೆ ಆಗ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರೈಲ್ವೆ ಸಚಿವ ಅಶ್ವಿನ್‌ ವೈಷ್ಣವ ಅವರು ಈ ಕುರಿತು ಪರಿಶೀಲಿಸುವುದಾಗಿ ಭರವಸೆ ನೀಡಿದ್ದರು. ಅಲ್ಲದೇ, ಮುಂದೆ ಧಾರವಾಡ ಹಾಗೂ ಹುಬ್ಬಳ್ಳಿಯಲ್ಲಿ ನಡೆದಿದ್ದ ರೈಲ್ವೆ ಇಲಾಖೆ ಕಾರ್ಯಕ್ರಮದಲ್ಲಿ ಹಜರತ್‌ ನಿಜಾಮುದ್ದೀನ ರೈಲಿಗೆ ಗಂಧರ್ವರ ಹೆಸರಿಡುವ ಭರವಸೆ ನೀಡಿದ್ದರು.

ಅದರಂತೆ ಇದೀಗ ನೈರುತ್ಯ ರೈಲ್ವೆ ಇಲಾಖೆಯ ಮಹಾಪ್ರಬಂಧಕರು, ನಿಜಾಮುದ್ದೀನ ರೈಲಿಗೆ ಸವಾಯಿ ಗಂಧರ್ವ ಹೆಸರಿಡಲು ಅನುಮೋದನೆ ನೀಡಿದ್ದು, ರೈಲ್ವೆ ಮಂಡಳಿಗೆ ಕಳುಹಿಸಲಾಗಿದೆ. ಅಲ್ಲಿಂದ ಅನುಮೋದನೆಗೊಂಡು ಬಂದ ಬಳಿಕ ಈ ರೈಲಿನ ಹೆಸರು ಬದಲಾಗಿದೆ. ಸಂಗೀತ ದಿಗ್ಗಜ ಸವಾಯಿ ಗಂಧರ್ವರ ಹೆಸರು ಶಾಶ್ವತವಾಗಲಿದೆ.

 

Vande Bharat Express: ನಾಳೆಯಿಂದ ಹುಬ್ಬಳ್ಳಿ-ಧಾರವಾಡ ಮಧ್ಯೆ ವಂದೇ ಭಾರತ್ ರೈಲು!

click me!