ಬಂಡಾಯ ಎದ್ದ ಬಿಜೆಪಿ ಮುಖಂಡರ ಉಚ್ಛಾಟನೆ : 6 ವರ್ಷ ಔಟ್

By Kannadaprabha NewsFirst Published Aug 31, 2021, 3:41 PM IST
Highlights
  • ಚುನಾವಣೆಯಲ್ಲಿ ಬಂಡಾಯ ಎದ್ದಿರುವ ಬಿಜೆಪಿ ಅಭ್ಯರ್ಥಿಗಳು
  • ಪಕ್ಷದಿಂದ 6 ವರ್ಷಗಳ ಕಾಲ ಉಚ್ಛಾಟನೆ ಮಾಡಿದ ಪಕ್ಷದ ಜಿಲ್ಲಾಧ್ಯಕ್ಷ ಅರವಿಂದ ಬೆಲ್ಲದ

 ಹುಬ್ಬಳ್ಳಿ (ಆ.31):  ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಂಡಾಯ ಎದ್ದಿರುವ ಬಿಜೆಪಿ ಅಭ್ಯರ್ಥಿಗಳನ್ನು ಪಕ್ಷದ ಜಿಲ್ಲಾಧ್ಯಕ್ಷ ಅರವಿಂದ ಬೆಲ್ಲದ 6 ವರ್ಷಗಳ ವರೆಗೆ ಉಚ್ಛಾಟನೆ ಮಾಡಿದ್ದಾರೆ.

ಮಾಜಿ ಮಹಾಪೌರರು, ಉಪಮಹಾಪೌರರು, ಜಿಲ್ಲಾ ಯುವಮೋರ್ಚಾ ಅಧ್ಯಕ್ಷರೂ ಈ ಉಚ್ಛಾಟನೆಯಲ್ಲಿ ಸೇರಿರುವುದು ವಿಶೇಷ.

ಧಾರವಾಡ ಪಾಲಿಕೆ ಚುನಾವಣೆಗೆ ದಿನಾಂಕ ಘೋಷಣೆ; ಅರವಿಂದ್ ಬೆಲ್ಲದ್ ಫುಲ್ ಸಕ್ರಿಯ!

ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಸೂರಜ ಪುಡಲಕಟ್ಟಿ, ಮಂಜುನಾಥ ನಡಟ್ಟಿ, ರಾಖೇಶ ದೊಡ್ಡಮನಿ, ರಾಜು ಕಡೇಮನಿ ಅವರನ್ನು ಉಚ್ಛಾಟನೆ ಮಾಡಲಾಗಿದೆ. 

ಹು-ಧಾ ಪೂರ್ವ ಕ್ಷೇತ್ರದಿಂದ ಶಶಿ ಬಿಜವಾಡ, ಸೆಂಟ್ರಲ್‌ ಕ್ಷೇತ್ರದಿಂದ ಮಾಜಿ ಉಪಮಹಾಪೌರ ಲಕ್ಷ್ಮೀ ಉಪ್ಪಾರ, ಮಾಜಿ ಸದಸ್ಯ ಲಕ್ಷ್ಮಣ ಉಪ್ಪಾರ, ಹೂವಪ್ಪ ದಾಯಗೋಡಿ, ಹುಲಗಪ್ಪ ಚಲವಾದಿ, ಮಂಜು ವಡಕಣ್ಣವರ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಕಿರಣ ಉಪ್ಪಾರ, ಪಾಲಿಕೆ ಮಾಜಿ ಸದಸ್ಯ ಲಕ್ಷ್ಮಣ ಗಂಡಗಾಳೇಕರ್‌, ಲಕ್ಷ್ಮಣ ಕೊರಪಾಟೆ, ರಾಮಚಂದ್ರ ಹದಗಲ್, ಸುದೀಂದ್ರ ಹೆಗಡೆ, ಮಾಜಿ ಮಹಾಪೌರ ಮಂಜುಳಾ ಅಕ್ಕೂರ ಅವರನ್ನೂ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ.

click me!