ಹಂಪಿಯಲ್ಲಿ ಪ್ರವಾಸಿಗರನ್ನು ಸಾಗಿಸಲು ಎರಡು ಬ್ಯಾಟರಿ ಚಾಲಿತ ವಾಹನಗಳ ಸಂಚಾರಕ್ಕೆ ಸಿದ್ಧ| ಬುಧವಾರದಿಂದ ಪ್ರವಾಸಿಗರ ಸೇವೆಗೆ| ಹಂಪಿಯಲ್ಲಿ ಎರಡು ಬ್ಯಾಟರಿ ಚಾಲಿತ ವಾಹನಗಳನ್ನು ಪ್ರವಾಸಿಗರಿಗೆ ಅನುಕೂಲ ಕಲ್ಪಿಸಿಕೊಟ್ಟಿರುವುದಕ್ಕೆ ಪ್ರವಾಸಿಗರಿಗೆ ಸಂತಸ|
ಹೊಸಪೇಟೆ(ಜ.08): ವಿಶ್ವವಿಖ್ಯಾತ ಹಂಪಿಯಲ್ಲಿ ಬ್ಯಾಟರಿ ಚಾಲಿತ ವಾಹನ ಸಮಸ್ಯೆ ಅಧಿಕವಾಗಿರುವ ಹಿನ್ನೆಲೆಯಲ್ಲಿ ಹಂಪಿ ವಿಶ್ವ ಪರಂಪರೆ ಅಭಿವೃದ್ಧಿ ನಿರ್ವಹಣಾ ಪ್ರಾಧಿಕಾರ ತಾತ್ಕಾಲಿಕವಾಗಿ ಈಗ ಎರಡು ಬ್ಯಾಟರಿ ಚಾಲಿತ ವಾಹನಗಳ ಚಾಲನೆಗೆ ಮುಂದಾಗಿದೆ.
ಹಂಪಿಯ ಗೆಜ್ಜಲ ಮಂಟಪದಿಂದ ವಿಜಯವಿಠಲ ದೇವಸ್ಥಾನ, ಸಪ್ತಸ್ವರ ಮಂಟಪ, ಕಲ್ಲಿನ ತೇರು ನೋಡಲು ಹೋಗುವಂತಹ ಪ್ರವಾಸಿಗರನ್ನು ಸಾಗಿಸಲು ಎರಡು ಬ್ಯಾಟರಿ ಚಾಲಿತ ವಾಹನಗಳ ಸಂಚಾರಕ್ಕೆ ಹಂಪಿ ಪ್ರಾಧಿಕಾರ ಈಗ ಕ್ರಮ ಕೈಗೊಂಡಿದ್ದು, ಮಂಗಳವಾರ ಎರಡೂ ವಾಹನಗಳು ಗೆಜ್ಜಲ ಮಂಟಪದಲ್ಲಿ ಬಂದು ಇಳಿದಿದ್ದು, ಬುಧವಾರದಿಂದ ಪ್ರವಾಸಿಗರ ಸೇವೆಗೆ ಮುಂದಾಗಲಿದೆ.
undefined
ಹೊಸಪೇಟೆ: ಹಂಪಿಯಲ್ಲಿ ಮೂಲೆಗುಂಪಾದ ಬ್ಯಾಟರಿ ಚಾಲಿತ ವಾಹನ
ಜ. 10 ಮತ್ತು 11ರಂದು ಎರಡು ದಿನಗಳ ಕಾಲ ನಡೆಯಲಿರುವ ಹಂಪಿ ಉತ್ಸವದ ಅಂಗವಾಗಿ ದೇಶ-ವಿದೇಶಿ ಪ್ರವಾಸಿಗರು, ಹೆಚ್ಚಿನ ಸಂಖ್ಯೆಯಲ್ಲಿ ಹಂಪಿಗೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹಂಪಿ ಪ್ರಾಧಿಕಾರ ಒಟ್ಟು ಐದು ತಾತ್ಕಾಲಿಕ ಬ್ಯಾಟರಿ ಚಾಲಿತ ವಾಹನಗಳ ಸಂಚಾರಕ್ಕೆ ಕ್ರಮ ಕೈಗೊಂಡಿದೆ. ಇದರಲ್ಲಿ ಈಗ ಸಧ್ಯಕ್ಕೆ ಎರಡು ವಾಹನಗಳಿಗೆ ಚಾಲನೆ ನೀಡಲಿದ್ದಾರೆ. ಹಂಪಿಯಲ್ಲಿ ಎರಡು ಬ್ಯಾಟರಿ ಚಾಲಿತ ವಾಹನಗಳನ್ನು ಪ್ರವಾಸಿಗರಿಗೆ ಅನುಕೂಲ ಕಲ್ಪಿಸಿಕೊಟ್ಟಿರುವುದಕ್ಕೆ ಪ್ರವಾಸಿಗರು ಸ್ವಲ್ಪಮಟ್ಟಿಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಹಂಪಿ ‘ಮೂಲೆ ಸೇರಿದ 21 ಬ್ಯಾಟರಿ ಚಾಲಿತ ವಾಹನ’ ಎಂಬ ಶಿರ್ಷಿಕೆ ಅಡಿಯಲ್ಲಿ ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ನಲ್ಲಿ ಜ. 1 ರಂದು ವರದಿ ಪ್ರಕಟಿಸಿತ್ತು. ಈಗ ಹಂಪಿ ಪ್ರಾಧಿಕಾರ ಎಚ್ಚೆತ್ತುಕೊಂಡು ಎರಡು ಬ್ಯಾಟರಿ ಚಾಲಿತ ವಾಹನಗಳನ್ನು ಪ್ರವಾಸಿಗರ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದ್ದಾರೆ.