ಈ ಸಲ ಕಪ್‌ ನಮ್ದೆ ಎಂದು ಮಾದಪ್ಪನ ತೇರಿಗೆ ಬಾಳೆ ಹಣ್ಣೆಸೆದ

Kannadaprabha News   | Asianet News
Published : Feb 27, 2020, 11:24 AM IST
ಈ ಸಲ ಕಪ್‌ ನಮ್ದೆ ಎಂದು ಮಾದಪ್ಪನ ತೇರಿಗೆ ಬಾಳೆ ಹಣ್ಣೆಸೆದ

ಸಾರಾಂಶ

ಇಲ್ಲೊಬ್ಬ ಐಪಿಎಲ್‌ನ ಆರ್‌ಸಿಬಿ ತಂಡದ ಅಭಿಮಾನಿ ಈ ಸಲ ಕಪ್‌ ನಮ್ದೆ ಎಂದು ಹನೂರಿನಲ್ಲಿ ಹಣ್ಣು ಜವನಕ್ಕೆ ಬರೆದು ಮಾದಪ್ಪನ ತೇರಿಗೆ ಎಸೆದಿರುವ ವಿಡಿಯೋ ಸಖತ್‌ ವೈರಲ್ಲಾಗಿದೆ.  

ಚಾಮರಾಜನಗರ(ಫೆ.27) : ಇಲ್ಲೊಬ್ಬ ಐಪಿಎಲ್‌ನ ಆರ್‌ಸಿಬಿ ತಂಡದ ಅಭಿಮಾನಿ ಈ ಸಲ ಕಪ್‌ ನಮ್ದೆ ಎಂದು ಹನೂರಿನಲ್ಲಿ ಹಣ್ಣು ಜವನಕ್ಕೆ ಬರೆದು ಮಾದಪ್ಪನ ತೇರಿಗೆ ಎಸೆದಿರುವ ವಿಡಿಯೋ ಸಖತ್‌ ವೈರಲ್ಲಾಗಿದೆ.

ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಫೆ.24 ರಂದು ರಥೋತ್ಸವ ಜರುಗಿತ್ತು. ಆ ವೇಳೆ, ಹನೂರಿನ ರಘು ಎಂಬ ಆರ್‌ಸಿಬಿಯ ಕಟ್ಟಾಅಭಿಮಾನಿ. ಈ ಸಲವಾದರೂ ತಮ್ಮ ನೆಚ್ಚಿನ ತಂಡ ಚಾಂಪಿಯನ್‌ ಆಗಲೆಂದು ಮಹದೇಶ್ವರನ ಮೊರೆ ಹೋಗಿದ್ದಾರೆ.

'BJPಯವ್ರಿಗೆ ಅಧಿಕಾರದ ಅಮಲು ತಲೆಗೇರಿದೆ'..!

ಬಾಳೆ ಹಣ್ಣಿನ ಮೇಲೆ ಈ ಸಲ ಕಪ್‌ ನಮ್ದೆ ಎಂದು ಬರೆದು ಮಾದಪ್ಪನ ತೇರಿಗೆ ಎಸೆದು ಬೇಡಿಕೊಂಡಿದ್ದಾರೆ. ಇದೀಗ ಈ ವಿಡಿಯೋ ವೈರಲ್‌ ಆಗಿದೆ. ರಥೋತ್ಸವ ಸಂದರ್ಭ ತೇರಿಗೆ ಬಾಳೆ ಹಣ್ಣು ಎಸೆಯುವ ಸಂಪ್ರದಾಯ ಹಲವು ಕಡೆ ಇದೆ.

PREV
click me!

Recommended Stories

ಬೆಂಗಳೂರಲ್ಲಿ ಇನ್ನು ಏರ್ ಶೋ ನಡೆಯಲ್ಲ, ಅರಣ್ಯ ಇಲಾಖೆಯಿಂದ ಭೂಮಿ ವಶಪಡಿಸಲು ನಿರ್ಧಾರ
ಇಂದು ಸಿಂಧನೂರು ಪಟ್ಟಣಕ್ಕೆ ಕಿಚ್ಚ ಸುದೀಪ್! ಅಭಿಮಾನಿಗಳಿಗೆ ಹಬ್ಬ, ಏನಿದು, ಎಲ್ಲಿದೆ ಕಾರ್ಯಕ್ರಮ? ಇಲ್ಲಿದೆ ವಿವರ