ಕಾಫಿನಾಡಿನ ತೋಟ ಒಂದರಲ್ಲಿ ಭಾರೀ ಗಾತ್ರದ ಕಾಳಿಂಗ ಸರ್ಪವನ್ನು ಸೆರೆ ಹಿಡಿಯಲಾಗಿದೆ.
ನರಸಿಂಹರಾಜಪುರ [ಫೆ.27]: ಬುಧವಾರ ತಾಲೂಕಿನ ಕಣುವೆ ವಿನಯ ಎಂಬುವರ ತೋಟಕ್ಕೆ ಬಂದಿದ್ದ 11 ಅಡಿ ಉದ್ದದ ಗಂಡು ಕಾಳಿಂಗ ಸರ್ಪ ಸೆರೆ ಹಿಡಿಯಲಾಗಿದೆ.
ಅರಣ್ಯಾಧಿಕಾರಿಗಳ ಸೂಚನೆಯಂತೆ ಕುದುರೆಗುಂಡಿಯ ಉರಗ ತಜ್ಞ ಪಿ.ಜಿ.ಹರೀಂದ್ರ ಹಿಡಿದು ಸುರಕ್ಷಿತವಾಗಿ ಸಮೀಪದ ಅಭಯಾರಣ್ಯಕ್ಕೆ ಬಿಟ್ಟು ಬಂದಿದ್ದಾರೆ.
undefined
ಕಾಫಿ ತೋಟಕ್ಕೆ ಎಂಟ್ರಿ ಕೊಟ್ಟ 15 ಅಡಿ ಉದ್ದದ ಕಾಳಿಂಗ ಸರ್ಪ: ದಂಗಾದ ಜನ..
ಈ ವಾರದಲ್ಲಿ 3 ಕಾಳಿಂಗ ಸರ್ಪ ಹಿಡಿದಿದ್ದು ಇದು ನಾನು ಹಿಡಿದ 302 ನೇ ಕಾಳಿಂಗ ಸರ್ಪವಾಗಿದೆ ಎಂದು ಉರಗ ತಜ್ಞ ಪಿ.ಜಿ.ಹರೀಂದ್ರ ತಿಳಿಸಿದ್ದಾರೆ.
ಮಲೆನಾಡು ಭಾಗದಲ್ಲಿ ಹೆಚ್ಚು ಪ್ರಮಾಣದಲ್ಲಿ ಕಾಳಿಂಗ ಸರ್ಪಗಳು ಕಾಣಿಸಿಕೊಳ್ಳುತ್ತಿದ್ದು, ಇವುಗಳನ್ನು ಸೆರೆ ಹಿಡಿದು ಸುರಕ್ಷಿತವಾಗಿ ಅರಣ್ಯ ಪ್ರದೇಶಗಳಲ್ಲಿ ಬಿಡಲಾಗುತ್ತಿದೆ.