ಉತ್ತರ ಕನ್ನಡದ ರೈತನ ತೋಟದ ವಿಸ್ಮಯ: ಒಂದೇ ಹಣ್ಣಿಗೆ 60 ಚಿಕ್ಕ ಚಿಕ್ಕ ಕಾಯಿಗಳು!

Published : Apr 02, 2026, 03:56 PM IST
Medusa pineapple

ಸಾರಾಂಶ

ಉತ್ತರ ಕನ್ನಡದ ಶೇವಾಳಿ ಗ್ರಾಮದ ರೈತರೊಬ್ಬರ ತೋಟದಲ್ಲಿ ಒಂದು ಅನಾನಸ್ ಗಿಡದಲ್ಲಿ 60ಕ್ಕೂ ಹೆಚ್ಚು ಚಿಕ್ಕ ಚಿಕ್ಕ ಅನಾನಸ್‌ಗಳು ಬೆಳೆದು ಅಚ್ಚರಿ ಮೂಡಿಸಿವೆ. ಇದು ಥೈಲ್ಯಾಂಡ್ ಮೂಲದ ಅಪರೂಪದ 'ಮೆಡುಸಾ ಅನಾನಸ್' ತಳಿಯಾಗಿರಬಹುದು ಎಂದು ಶಂಕಿಸಲಾಗಿದ್ದು, ಇದನ್ನು ಅಲಂಕಾರಿಕ ಉದ್ದೇಶಗಳಿಗಾಗಿ ಹೆಚ್ಚಾಗಿ ಬೆಳೆಯಲಾಗುತ್ತದೆ.

ಉತ್ತರ ಕನ್ನಡ: ತಾಲೂಕಿನ ಶೇವಾಳಿ ಗ್ರಾಮದ ರೈತರ ತೋಟದಲ್ಲಿ ಬೆಳೆಯುತ್ತಿರುವ ಒಂದು ಅನಾನಸ್ ಗಿಡದಲ್ಲಿ 60ಕ್ಕೂ ಹೆಚ್ಚು ಚಿಕ್ಕ ಚಿಕ್ಕ ಅನಾನಸ್ ಬೆಳದಿದ್ದು, ಆಶ್ಚರ್ಯ ತಂದಿದೆ.

ಅನಾನಸ್ ನೋಡುವುದೇ ಒಂದು ಖುಷಿ

ತಾಲೂಕಿನ ರೈತರಿಗೆ ಯಾವುದೇ ಬೆಳೆ ರಕ್ಷಿಸಿಕೊಳ್ಳುವುದೇ ಒಂದು ಸಾಹಸ. ಅದರಲ್ಲೂ ಅನಾನಸ್‌ಗಳಂತ ಬೆಳೆ ಗಳು ಚಿಕ್ಕದಾಗಿ ಮೂಡಿ ಬರುತ್ತಿದ್ದಂತೆ ಮಂಗಗಳು, ಕೆಂದಳಿಲು, ಹಂದಿಗಳು ಮತ್ತು ಹಾರುವ ಬೆಕ್ಕುಗಳು ಮುರಿದು ತಿನ್ನುತ್ತವೆ. ಆದರೂ ಎಲ್ಲ ಪ್ರಾಣಿಗಳ ಕಣ್ಣು ತಪ್ಪಿಸಿ ಉಳಿದ ಈ ಅನಾನಸ್‌ನಲ್ಲಿ ಆರಂಭದಲ್ಲಿ ಏನೂ ವಿಶೇಷತೆ ಕಂಡು ಬಂದಿರಲಿಲ್ಲ. ದಿನ ಕಳೆದಂತೆ ಏನೋ ಬದಲಾವಣೆ ಕಂಡು ಬರತೊಡಗಿ ಮತ್ತೆ ಚಿಕ್ಕ ಚಿಕ್ಕ ಅನಾನಸ್ ಬೆಳೆದಿವೆ. ಈ ಚಿಕ್ಕ ಚಿಕ್ಕ ಅನಾನಸ್ ತಿನ್ನಲು ಬರುವುದಿಲ್ಲ. ಚಿಕ್ಕ ಮಕ್ಕಳ ಆಟಿಗೆಯಂತೆ ಚಿಕ್ಕದಾಗಿವೆ. ಎಲ್ಲ ಅನಾನಸ್ ಹೊತ್ತ ದೊಡ್ಡ ಅನಾನಸ್‌ಗೆ ಸಿಹಿಯನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಇದೆಯೋ ಗೊತ್ತಿಲ್ಲ. ಒಟ್ಟಾರೆ ತುಂಬಾ ಸೌಂದರ್ಯ ಹೊತ್ತಂತಿರುವ ಅನಾನಸ್ ನೋಡುವುದೇ ಒಂದು ಖುಷಿಯಾಗಿದೆ.

ಹೊರ ದೇಶದ ಅನಾನಸ್

ಇದು ಥೈವಾನ್ ಅಥವಾ ಥೈಲ್ಯಾಂಡ್‌ನ ಅನಾನಸ್ ಇರಬಹುದು ಎನ್ನುತ್ತಾರೆ ರಾಮನಗರ ತೋಟಗಾರಿಕೆ ಅಧಿಕಾರಿ ಅಬ್ದುಲ್ಲ ದಳವಾಯಿ. ಸಿದ್ದಾಪುರದ ಜೋಶಿಯವರ ನರ್ಸರಿಯಿಂದ ತಂದಿರುವ ಅನಾನಸ್ ಗಿಡ ಇದಾಗಿದ್ದು, ಅವರು ಕೊಡುವಾಗ ಹೊರ ದೇಶದ ಅನಾನಸ್ ಎಂದು ಹೇಳಿದ್ದರು ಎನ್ನಲಾಗಿದೆ.

ಗೂಗಲ್ ನಲ್ಲಿ ಏನಿದೆ?

ಮೆಡುಸಾ ಅನಾನಸ್ ಒಂದು ಅಪರೂಪದ ಹಣ್ಣಾಗಿದ್ದು, ಇದು ಥೈಲ್ಯಾಂಡ್ ಬ್ರೊಮೆಲಿಯಾಡ್ ಕುಟುಂಬದ ಸದಸ್ಯ ಸಸ್ಯವಾಗಿದ್ದು, ಅಲಂಕಾರಿಕ ಬಳಕೆಗಾಗಿ ಮತ್ತು ಸಿಹಿ ಮತ್ತು ಹುಳಿ, ತಳದಲ್ಲಿ ಹೆಚ್ಚಿನ ಸಕ್ಕರೆ ಸಾಂದ್ರತೆಯೊಂದಿಗೆ ಇರುತ್ತದೆ. ಇದನ್ನು ವ್ಯಾಪಕವಾಗಿ ಬೆಳೆಸಲಾಗುತ್ತದೆ, ಇದು ಮುಖ್ಯ ಹಣ್ಣಿಗೆ ಜೋಡಿಸಲಾದ ನೂರಾರು ಸಣ್ಣ ಅನಾನಸ್‌ಗಳನ್ನು ಹೊಂದಿರುತ್ತದೆ ಮತ್ತು ಈಗ ಭಾರತದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಬೆಚ್ಚಗಿನ, ಉಷ್ಣವಲಯದ ಹವಾಮಾನದಲ್ಲಿ ಬೆಳೆಯುತ್ತದೆ ಮತ್ತು ಕೇರಳದಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ.

PREV
Read more Articles on
click me!

Recommended Stories

KSRTC ಬಸ್ ಸೀಟು ಹಿಡಿಯಲು ಹೋಗಿ ಚಕ್ರದಡಿಗೆ ಸಿಲುಕಿದ ಮಹಿಳೆ: ನಜ್ಜುಗುಜ್ಜಾದ ಕೈ, ಆಸ್ಪತ್ರೆಗೆ ದಾಖಲು!
ಉದ್ಯಮಿ ಸುದೀಪ್ ಶೆಟ್ಟಿ ಕೇಸಲ್ಲಿ ಬಿಗ್ ಟ್ವಿಸ್ಟ್: ಅತ್ತೆ-ಮಾವ ಹಾಗೂ ವೇಣು ರಹಸ್ಯ ಬಿಚ್ಚಿಟ್ಟ ನಟಿ ಸೌಮ್ಯಾ ಶೆಟ್ಟಿ!