ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವ ಆಚರಣೆ

Published : Jan 26, 2023, 09:29 AM ISTUpdated : Jan 26, 2023, 09:33 AM IST
ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ  ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವ ಆಚರಣೆ

ಸಾರಾಂಶ

ಚಾಮರಾಜಪೇಟೆ ನಾಗರೀಕರು ಭಾರತಮಾತೆಗೆ ಜೈಕಾರ ಕೂಗಿದ್ದು, ಪೊಲೀಸ್ ಭದ್ರತೆಯಲ್ಲಿ ಈದ್ಗಾ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಲಾಗಿದೆ.

ಬೆಂಗಳೂರು( ಜನವರಿ 26, 2023): ಇಂದು 74ನೇ ಗಣರಾಜ್ಯೋತ್ಸವ ಹಿನ್ನೆಲೆ ರಾಜ್ಯ ರಾಜಧಾನಿಯ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಲಾಗಿದೆ. ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವ ದಿನದಂದು ಚಾಮರಾಜಪೇಟೆಯ ಈದ್ಗಾ ಮೈದಾನದದಲ್ಲಿ ಧ್ವಜಾರೋಹಣ ನೆರವೇರಿಸಿರುವುದು ವಿಶೇಷ. ಬೆಂಗಳೂರು ಉತ್ತರ ಉಪವಿಭಾಗ ಅಧಿಕಾರಿ ಡಾ. ಎಂ.ಜೆ ಶಿವಣ್ಣ ಅವರು ಧ್ವಜಾರೋಹಣ ನೆರವೇರಿಸಿದರು. ಚಾಮರಾಜಪೇಟೆಯಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಬೆಂಗಳೂರು ಕೇಂದ್ರ ಸಂಸದ ಪಿಸಿ‌‌ ಮೋಹನ್, ಚಾಮರಾಜಪೇಟೆ ಶಾಸಕ ಜಮೀರ್‌ ಅಹ್ಮದ್ ಖಾನ್ ಉಪಸ್ಥಿತಿ ಇದ್ದರು. 

ಇನ್ನು, ಧ್ವಜಾರೋಹಣ ಬಳಿಕ ರಾಷ್ಟಗೀತೆ, ನಾಡಗೀತೆಯನ್ನು ನುಡಿಸಲಾಯ್ತು. ಶ್ರೀರಾಮ ಸೇನೆ,ಹಾಗೂ ಚಾಮರಾಜ ನಾಗರಿಕರ ಒಕ್ಕೂಟ ಸಹ 74ನೇ ಗಣರಾಜೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿತ್ತು. ಈ ವೇಳೆ ಮೈದಾನದಲ್ಲಿ‌ ರೈತಗೀತೆ ಸಿರಿನಾದ ಸಹ ಕೇಳಿಬಂದಿದ್ದು, ಸನಾತನ ಹಿಂದೂಧರ್ಮಕ್ಕೆ ಜೈಕಾರ ಹಾಕಲಾಗಿದೆ. 

ಇದನ್ನು ಓದಿ: Republic Day parade Tableau: ಕರ್ನಾಟಕದ ಸ್ತಬ್ಧಚಿತ್ರಕ್ಕೆ ಕೊನೆಗೂ ಅನುಮತಿ

ಚಾಮರಾಜಪೇಟೆ ನಾಗರೀಕರು ಭಾರತಮಾತೆಗೆ ಜೈಕಾರ ಕೂಗಿದ್ದು, ಪೊಲೀಸ್ ಭದ್ರತೆಯಲ್ಲಿ ಈದ್ಗಾ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಲಾಗಿದೆ. ಬೆಂಗಳೂರು ಕೇಂದ್ರ ಸಂಸದ ಪಿ.ಸಿ.ಮೋಹನ್, ಶಾಸಕ ಜಮೀರ್ ಅಹಮದ್ ಧ್ವಜಕ್ಕೆ ಪುಷ್ಪ ನಮನ ಸಲ್ಲಿಸಿದ್ದಾರೆ. 

ಈ ಮಧ್ಯೆ, ಚಾಮರಾಜಪೇಟೆ ಮೈದಾನದಲ್ಲಿ‌ ಮಕ್ಕಳ ಕಾರ್ಯಕ್ರಮ ಸಹ ನಡೆಯುತ್ತಿದ್ದು, ಬಾಲಕಿಯರ ಪ್ರೌಢಶಾಲೆ ಮಕ್ಕಳು ಹೂಪ್ಸ್ ಪ್ರದರ್ಶನ ನೀಡುತ್ತಿದ್ದಾರೆ. 


ಇದನ್ನೂ ಓದಿ: Republic Day 20 ರಿಂದ 10 ದಿನ ಲಾಲ್‌ಬಾಗಲ್ಲಿ ಪುಷ್ಪ ಪ್ರದರ್ಶನ

PREV
Read more Articles on
click me!

Recommended Stories

ಸಿಸೇರಿಯನ್‌ ಹೆರಿಗೆ ಹೆಚ್ಚಳ ಏಕೆ ಎಂದು ತಿಳಿಯಲು ಆಡಿಟ್‌: ಸಚಿವ ದಿನೇಶ್‌ ಗುಂಡೂರಾವ್
ಮಂಗಳಮುಖಿಯರಿಂದ ಯುವಕನ ಅಪಹರಣ; ಶಸ್ತ್ರಚಿಕಿತ್ಸೆ ನಡೆಸಿ ಪರಿವರ್ತನೆಗೆ ಯತ್ನ?