ಬೆಳಗಾವಿಯಲ್ಲಿ ಎನ್‌ಎ ವಿಳಂಬಕ್ಕೆ ಬೇಸತ್ತು ಕಚೇರಿಯಲ್ಲೇ ವಿಷ ಸೇವಿಸಿದ ವ್ಯಕ್ತಿ: ಮುಂದೆನಾಯ್ತು?

Published : Apr 30, 2026, 04:45 PM IST
Belagavi news

ಸಾರಾಂಶ

ಭೂ ಪರಿವರ್ತನೆ (ಎನ್‌ಎ) ಪ್ರಕ್ರಿಯೆಯಲ್ಲಿ ವಿಳಂಬವಾಗಿರುವುದರಿಂದ ಬೇಸತ್ತು ವ್ಯಕ್ತಿಯೊಬ್ಬರು ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲೇ ವಿಷ ಸೇವಿಸಿ ಆ*ತ್ಮಹ*ತ್ಯೆಗೆ ಯತ್ನಿಸಿದ ಘಟನೆ ನಡೆದಿದ್ದು, ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬೆಳಗಾವಿ (ಏ.30): ಭೂ ಪರಿವರ್ತನೆ (ಎನ್‌ಎ) ಪ್ರಕ್ರಿಯೆಯಲ್ಲಿ ವಿಳಂಬವಾಗಿರುವುದರಿಂದ ಬೇಸತ್ತು ವ್ಯಕ್ತಿಯೊಬ್ಬರು ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲೇ ವಿಷ ಸೇವಿಸಿ ಆ*ತ್ಮಹ*ತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ ರುದ್ರಯ್ಯ ಅಮ್ಮಿನಬಾವಿಮಠ (50) ಆ*ತ್ಮಹ*ತ್ಯೆಗೆ ಯತ್ನಿಸಿದ ವ್ಯಕ್ತಿ ಎಂದು ತಿಳಿದುಬಂದಿದೆ. ತಮ್ಮ ಜಮೀನಿನ ಎನ್‌ಎ ವಿಚಾರವಾಗಿ ಪ್ರಾದೇಶಿಕ ಆಯುಕ್ತರನ್ನು ಭೇಟಿ ಮಾಡಲು ಕಚೇರಿಗೆ ಬಂದಿದ್ದರು.

ಆದರೆ ಆಯುಕ್ತರು ಕಚೇರಿಯಲ್ಲಿ ಲಭ್ಯವಿರದ ಹಿನ್ನೆಲೆಯಲ್ಲಿ ಬೇಸರಗೊಂಡ ಅವರು ಕಚೇರಿಯಲ್ಲೇ ವಿಷ ಸೇವಿಸಿ ಆ*ತ್ಮಹ*ತ್ಯೆಗೆ ಯತ್ನಿಸಿದ್ದಾರೆ. ತಕ್ಷಣ ಅಸ್ವಸ್ಥಗೊಂಡ ರುದ್ರಯ್ಯರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸಾಗಿಸಲಾಗಿದೆ. ಈ ಘಟನೆ ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಸಾಲಬಾಧೆ ತಾಳಲಾರದೆ ರೈತ ಆ*ತ್ಮಹ*ತ್ಯೆ

ಸಾಲಬಾಧೆ ತಾಳಲಾರದೆ ರೈತರೊಬ್ಬರು ಮನೆಯಲ್ಲಿ ನೇಣು ಬಿಗಿದುಕೊಂಡು ಆ*ತ್ಮಹ*ತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಚಿಕ್ಕಲಿಂಗದಹಳ್ಳಿ ಗ್ರಾಮದಲ್ಲಿ ನಡೆದಿದೆ. ಲಿಂಗರಾಜ ಫಕ್ಕೀರಪ್ಪ ಹುಲ್ಲಾಳ (38) ಮೃತ ರೈತ. ಈ ರೈತ ತನ್ನ ತಾಯಿ ಹಾಗೂ ಚಿಕ್ಕಪ್ಪ ಹೆಸರಿನಲ್ಲಿ ಜಂಟಿ ಇದ್ದ ಜಮೀನಿನಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ವಿವಿಧೆಡೆ ಲಕ್ಷಾಂತರ ರು. ಸಾಲ ಮಾಡಿಕೊಂಡಿದ್ದರು.

ಎರಡ್ಮೂರು ವರ್ಷಗಳಿಂದ ಬೆಳೆ ಸರಿಯಾಗಿ ಬಾರದ ಹಿನ್ನೆಲೆ ಮನನೊಂದು, ಮಾಡಿದ ಸಾಲವನ್ನು ತೀರಿಸುವುದು ಹೇಗೆ ಎಂಬ ಚಿಂತೆಗೀಡಾಗಿ ತನ್ನಷ್ಟಕ್ಕೆ ತಾನೆ ಮನೆಯಲಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾನೆ ಎಂದು ಮೃತರ ಪತ್ನಿ ಮಂಜುಳಾ ಹುಲ್ಲಾಳ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
Read more Articles on
click me!

Recommended Stories

Football: ಗ್ರಾಮೀಣ ಫುಟ್ಬಾಲ್ ಪ್ರತಿಭೆಗಳಿಗೆ ಸ್ಥಾಪಿಸಿದ್ದ ಬಳ್ಳಾರಿ ಕ್ರೀಡಾ ವಸತಿ ನಿಲಯ ಬೆಂಗಳೂರಿಗೆ ಶಿಫ್ಟ್!
Karnataka Rain: ರಾಜ್ಯದಲ್ಲಿ ಜೂ.18ರವರೆಗೆ ಮಳೆ ಮುಂದುವರಿಕೆ, ಬೆಂಗಳೂರಿನಲ್ಲಿ ಮಧ್ಯಾಹ್ನ ನಂತರ ಬಿರುಗಾಳಿ ಮಳೆ!