ರಾಮನಗರ : ಕುಗ್ರಾಮಗಳ ಅಭಿವೃದ್ಧಿಗೆ 20 ಕೋಟಿ ಅನುದಾನ

By Kannadaprabha News  |  First Published Jan 20, 2024, 1:19 PM IST

ಮಾಗಡಿ ಕ್ಷೇತ್ರ ವ್ಯಾಪ್ತಿಯ ಕೂಟಗಲ್ ಹೋಬಳಿ ವ್ಯಾಪ್ತಿಯ ಕುಗ್ರಾಮಗಳ ಅಭಿವೃದ್ಧಿಗೆ ಸರ್ಕಾರ 20 ಕೋಟಿ ರು. ಅನುದಾನ ಬಿಡುಗಡೆಗೊಳಿಸುವ ಮೂಲಕ ಅಭಿವೃದ್ಧಿ ಪರ್ವಕ್ಕೆ ಚಾಲನೆ ನೀಡಿದೆ ಎಂದು ಬಿಡದಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಾಣಕಲ್ ನಟರಾಜು ತಿಳಿಸಿದರು.


 ರಾಮನಗರ :  ಮಾಗಡಿ ಕ್ಷೇತ್ರ ವ್ಯಾಪ್ತಿಯ ಕೂಟಗಲ್ ಹೋಬಳಿ ವ್ಯಾಪ್ತಿಯ ಕುಗ್ರಾಮಗಳ ಅಭಿವೃದ್ಧಿಗೆ ಸರ್ಕಾರ 20 ಕೋಟಿ ರು. ಅನುದಾನ ಬಿಡುಗಡೆಗೊಳಿಸುವ ಮೂಲಕ ಅಭಿವೃದ್ಧಿ ಪರ್ವಕ್ಕೆ ಚಾಲನೆ ನೀಡಿದೆ ಎಂದು ಬಿಡದಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಾಣಕಲ್ ನಟರಾಜು ತಿಳಿಸಿದರು.

ಕೂಟಗಲ್ ಹೋಬಳಿ ಲಕ್ಷ್ಮೀಪುರ ಗ್ರಾಪಂ ವ್ಯಾಪ್ತಿಯ ದೊಡ್ಡ ಸೂಲಿಕೆರೆ ಗ್ರಾಮದಲ್ಲಿರುವ ದ ಸಮೀಪ ಗ್ರಾಮಸ್ಥರೊಂದಿಗೆ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಅವರು, ಹಿಂದುಳಿದ ಹೋಬಳಿಯಾಗಿ ಗುರುತಿಸಿಕೊಂಡಿದ್ದ ಕೂಟಗಲ್ ಹೋಬಳಿಯ ಸಮಗ್ರ ಅಭಿವೃದ್ಧಿ  ಪಡಿಸುವ ನಿಟ್ಟಿನಲ್ಲಿ ವಿವಿಧ ಗ್ರಾಮಗಳಲ್ಲಿ 20 ಕೋಟಿ ರು.ಗಳ ವೆಚ್ಚದಲ್ಲಿ ನೀರಾವರಿ ಅಭಿವದ್ದಿ ಕಾರ್ಯಗಳು ಸಾಕಾರವಾಗುತ್ತಿವೆ. ಸಾರ್ವಜನಿಕರ ಅಹವಾಲನ್ನು ಪರಿಗಣಿಸಿ ಗ್ರಾಮಸ್ಥರ ನೆರವಿನಲ್ಲಿ ಕೆಲಸಗಳು ನಡೆಯುತ್ತಿವೆ ಎಂದರು.

Tap to resize

Latest Videos

ರಾಮಲಲ್ಲಾ ಪ್ರಾಣಪ್ರತಿಷ್ಠೆ ಹಿನ್ನೆಲೆಯಲ್ಲಿ ದೇಗುಲದ ಆವರಣವನ್ನು ತಿಕ್ಕಿತಿಕ್ಕಿ ತೊಳೆದ ನಟ ಜಾಕಿ ಶ್ರಾಫ್​

ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಚಿಂತನೆಯ ದೂರದೃಷ್ಟಿಯಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಹಾಗೂ ಶಾಸಕ ಎಚ್.ಸಿ.ಬಾಲಕೃಷ್ಣ ಅವರ ಸಹಕಾರದಲ್ಲಿ ಹೋಬಳಿಯ 6 ಗ್ರಾಪಂ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದು ತಿಳಿಸಿದರು.

ಚಿಕ್ಕಗಂಗವಾಡಿ ಗ್ರಾಮಕ್ಕೆ 1 ಕೋಟಿ ರು., ಅಂಕನಹಳ್ಳಿ, ಯರೇಹಳ್ಳಿ ಗ್ರಾಮಗಳಿಗೆ ತಲಾ 2 ಕೋಟಿ ರು., ದೊಡ್ಡಸೂಲಿಕೆರೆಗೆ 1 ಕೋಟಿ ರು., ಲಕ್ಷ್ಮೀಪುರ 1 ಕೋಟಿ, ತಿಮ್ಮಸಂದ್ರ, ಕೂಟಗಲ್ 1.30 ಕೋಟಿ, ಶ್ಯಾನುಭೋಗನಹಳ್ಳಿ ಮತ್ತು ಕಣ್ವಕ್ಕೆ 1 ಕೋಟಿ ಸೇರಿದಂತೆ ಒಟ್ಟು 20 ಕೋಟಿ ರು. ಮೊತ್ತದ ಅಭಿವದ್ಧಿ ಯೋಜನೆಗಳು ಸಾಕಾರವಾಗುತ್ತಿವೆ ಎಂದು ತಿಳಿಸಿದರು.

ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ಜನರಿಗೆ ಕೊಟ್ಟ ಮಾತಿನಂತೆ 5 ಗ್ಯಾರಂಟಿಗಳನ್ನು ನೀಡಿರುವುದು ಜನಪ್ರಿಯವಾಗಿವೆ. ಜನರು ಯೋಜನೆಗಳ ಲಾಭವನ್ನು ಪಡೆಯುತ್ತಿದ್ದು, ರೈತರು, ಮಹಿಳೆಯರು, ಯುವಕರು ಹೆಚ್ಚಿನ ಪ್ರಮಾಣದಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿದ್ದಾರೆ. ಅಲ್ಲದೆ ಸಂಸದ ಡಿ.ಕೆ.ಸುರೇಶ್ ಕ್ಷೇತ್ರದ ಸಮಸ್ಯೆಗಳನ್ನು ಅರಿತು ಸ್ಥಳದಲ್ಲಿಯೇ ಬಗೆಹರಿಸಿ ಜನರಿಗೆ ಹತ್ತಿರವಾಗಿ ಜನಪ್ರಿಯತೆ ಗಳಿಸಿದ್ದು ಜನ ಬೆಂಬಲ ಗಳಿಸಿದ್ದಾರೆ. ಇದು ಮುಂದಿನ ಲೋಕಸಭಾ ಚುನಾವಣೆಗೆ ನೆರವಾಗಲಿದೆ ಎಂದು ಹೇಳಿದರು.

ಅಭಿವೃದ್ಧಿ ಕಾಮಗಾರಿಗಳು ನಿಲ್ಲಬಾರದು ಎನ್ನುವ ಕಾರಣದಿಂದ ಸಂಸದ ಡಿ.ಕೆ.ಸುರೇಶ್‌ರವರ ಸೂಚನೆ ಮೇರೆಗೆ ಮೂಲ ಸೌಕರ್ಯಗಳ ಅನುಷ್ಠಾನವಾಗುತ್ತಿದೆ. ಗ್ರಾಮೀಣರಿಗೆ ಸ್ಪಂದಿಸುವ ಮೂಲಕ ಸಮಗ್ರ ಅಭಿವೃದ್ಧಿಗೆ ಸಹಕರಿಸಿರುವ ಸಂಸದ ಡಿ.ಕೆ.ಸುರೇಶ್ ಜನರ ಮನಸ್ಸಿನಲ್ಲಿದ್ದು ಮತ್ತೊಮ್ಮೆ ಬೆಂಗಳೂರು ಗ್ರಾಮಾಂತರ ಸಂಸತ್ ಕ್ಷೇತ್ರದ ಸದಸ್ಯರಾಗಿ ಆಯ್ಕೆಯಾಗಲಿದ್ದಾರೆ ಎಂದು ಗಾಣಕಲ್ ನಟರಾಜು ವಿಶ್ವಾಸ ವ್ಯಕ್ತಪಡಿಸಿದರು.

ಈ ವೇಳೆ ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಯರೇಹಳ್ಳಿ ಮಂಜು, ಕೂಟಗಲ್ ಪಿಎಸಿಎಂಎಸ್ ಅಧ್ಯಕ್ಷ ಗಂಗಾಧರ್‌ ಗೌಡ, ಗ್ರಾಪಂ ಸದಸ್ಯ ಬಸವರಾಜು, ನರಸಿಂಹಯ್ಯ, ಮುಖಂಡರಾದ ಶ್ರೀಧರ್ ಮೆಳೆಹಳ್ಳಿ, ಹೇಮಂತ್‌ಗೌಡ, ಮೂರ್ತಿ, ಬಸವ, ಮಹದೇವ, ಆಂಜನಪ್ಪ, ರಮೇಶ್, ಗೋಪಿ, ರಂಗರವಿ ಮತ್ತಿತರರು ಹಾಜರಿದ್ದರು.

click me!