ವಯೋ ಸಹಜ ಕಣ್ಣು ಪೊರೆ ಹಿನ್ನೆಲೆಯಲ್ಲಿ ಬಾಳೆಹೊನ್ನೂರಿನ ರಂಭಾಪುರಿ ಪೀಠದ ಡಾ.ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿಗೆ ನಗರದ ಪಿ.ಜೆ.ಬಡಾವಣೆಯ ದೃಷ್ಣಿ ಕಣ್ಣಿನ ಆಸ್ಪತ್ರೆಯಲ್ಲಿ ಗುರುವಾರ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. 64 ವರ್ಷ ವಯಸ್ಸಿನ ರಂಭಾಪುರಿ ಶ್ರೀಗಳಿಗೆ ಈಗ್ಗೆ ಐದಾರು ವರ್ಷದ ಹಿಂದೆ ಬಲಗಣ್ಣಿನ ಶಸ್ತ್ರಚಿಕಿತ್ಸೆಯನ್ನು ಇದೇ ಆಸ್ಪತ್ರೆಯಲ್ಲಿ ಮಾಡಲಾಗಿತ್ತು.
ದಾವಣಗೆರೆ(ಆ.02): ವಯೋ ಸಹಜ ಕಣ್ಣು ಪೊರೆ ಹಿನ್ನೆಲೆಯಲ್ಲಿ ಬಾಳೆಹೊನ್ನೂರಿನ ರಂಭಾಪುರಿ ಪೀಠದ ಡಾ.ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿಗೆ ನಗರದ ಪಿ.ಜೆ.ಬಡಾವಣೆಯ ದೃಷ್ಣಿ ಕಣ್ಣಿನ ಆಸ್ಪತ್ರೆಯಲ್ಲಿ ಗುರುವಾರ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ.
ಡಾ. ರವೀಂದ್ರನಾಥ್ ನೇತೃತ್ವದ ವೈದ್ಯರ ತಂಡವು ಶ್ರೀಗಳ ಎಡಗಣ್ಣಿನ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದೆ. ಸುಮಾರು 64 ವರ್ಷ ವಯಸ್ಸಿನ ರಂಭಾಪುರಿ ಶ್ರೀಗಳಿಗೆ ಈಗ್ಗೆ ಐದಾರು ವರ್ಷದ ಹಿಂದೆ ಬಲಗಣ್ಣಿನ ಶಸ್ತ್ರಚಿಕಿತ್ಸೆಯನ್ನು ಇದೇ ಆಸ್ಪತ್ರೆಯಲ್ಲಿ ಮಾಡಲಾಗಿತ್ತು.
ಕಾಂಗ್ರೆಸ್ ಸೋಲಿನ ಹಿಂದಿನ ಕಾರಣ ಬಿಚ್ಚಿಟ್ಟ ರಂಭಾಪುರಿ ಶ್ರೀ!
ವಯೋ ಸಹಜವಾಗಿ ಎಡಗಣ್ಣು ಪೊರೆ ಕಟ್ಟಿದ್ದರಿಂದ ದೃಷ್ಟಿಮಂದವಾಗಿತ್ತು ಎಂದು ತಿಳಿದು ಬಂದಿದೆ. ಮಕ್ಕಳ ತಜ್ಞ ಡಾ.ಎನ್.ಕೆ. ಕಾಳಪ್ಪನವರ್, ಡಾ. ಜ್ಯೋತಿಪ್ರಕಾಶ ಇತರರು ಇದ್ದರು.
ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ