ಡಿ.ಕೆ ಸಹೋದರರ ಮಾತಿನಂತೆ ಮುಖಂಡರೋರ್ವರು ತಮ್ಮ ಹುದ್ದೆ ರಾಜೀನಾಮೆ ನೀಡಿ ಕೆಳಕ್ಕೆ ಇಳಿದಿದ್ದಾರೆ. ಈ ಮೊದಲು ನಡೆದ ಮಾತಿನಂತೆ ನಡೆದುಕೊಂಡಿದ್ದಾರೆ.
ರಾಮನಗರ (ಆ.28): ಕಾಂಗ್ರೆಸ್ ಪಕ್ಷದಲ್ಲಿ ನಡೆದಿದ್ದ ಅಧಿಕಾರ ಹಂಚಿಕೆ ಸೂತ್ರದಂತೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಎಚ್.ಬಸಪ್ಪ ಸಲ್ಲಿಸಿದ್ದ ರಾಜೀನಾಮೆ ಅಂಗೀಕಾರಗೊಂಡಿದೆ.
ಕಳೆದ ಆಗಸ್ಟ್ 10ರಂದು ಬಸಪ್ಪ ರವರು ಜಿಪಂ ಅಧ್ಯಕ್ಷ ಸ್ಥಾನಕ್ಕೆ ಸ್ವಯಿಚ್ಛೆಯಿಂದ ಸಲ್ಲಿಸುತ್ತಿರುವ ರಾಜೀನಾಮೆಯನ್ನು ಅಂಗೀಕರಿಸುವಂತೆ ಕೋರಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ (ಪಂ.ರಾಜ್)ಗಳಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದರು.
ಅಶೋಕ್ ಆಯ್ಕೆ ಖಚಿತ:
ಈ ಹಿಂದೆ ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ನಡೆದಿದ್ದ ಒಡಂಬಡಿಕೆಯಂತೆ ಎಚ್.ಬಸಪ್ಪ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಮಾತು ಉಳಿಸಿಕೊಂಡಿದ್ದಾರೆ. ಅವರಿಂದ ತೆರವಾಗಿರುವ ಸ್ಥಾನಕ್ಕೆ ಕೂಟಗಲ್ ಕ್ಷೇತ್ರದ ಸದಸ್ಯ ಎಚ್.ಎನ್.ಅಶೋಕ್(ತಮ್ಮಾಜಿ) ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಜಿಪಂನ ಅಧಿಕಾರದ ಅವಧಿ ಇನ್ನೂ 8 ತಿಂಗಳು ಮಾತ್ರ ಬಾಕಿ ಉಳಿದಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಸಂಸದ ಡಿ.ಕೆ.ಸುರೇಶ್ ಅಧಿಕಾರ ಹಂಚಿಕೆ ವೇಳೆ ಕೊಟ್ಟಿದ್ದ ಮಾತಿನಂತೆ ನಡೆದುಕೊಳ್ಳಲು ಮುಂದಾಗಿದ್ದಾರೆ.
ಬಿಜೆಪಿ ಸೇರಲು ಸಜ್ಜಾದ್ರು ಜೆಡಿಎಸ್ ಹಾಗೂ ಕೈ ಮುಖಂಡರು
ಮಾಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಕೂಟಗಲ್ ಕ್ಷೇತ್ರ ಸದಸ್ಯ ಎಚ್ .ಎನ್.ಅಶೋಕ್ ಅವರಿಗೆ ಅಧಿಕಾರ ನೀಡಲು ಬಯಸಿದ್ದಾರೆ. ಆದರೆ, ಅಧ್ಯಕ್ಷ ಸ್ಥಾನದ ಕಣ್ಣಿಟ್ಟಿರುವ ಡಿಕೆ ಸಹೋದರರ ಸಂಬಂಧಿಯಾಗಿರುವ ದೊಡ್ಡಾಲಹಳ್ಳಿ ಕ್ಷೇತ್ರದ ಶಿವಕುಮಾರ್ ಕೂಡ ಪೈಪೋಟಿ ನಡೆಸಿದರು ಅಚ್ಚರಿ ಎನ್ನುತ್ತಿವೆ ಕಾಂಗ್ರೆಸ್ ಪಕ್ಷದ ಮೂಲಗಳು.
ಸಮಾನವಾಗಿ ಅಧಿಕಾರ ಹಂಚಿಕೆ :
ಮಳೂರು ಕ್ಷೇತ್ರ ಸದಸ್ಯ ಸಿ.ಪಿ.ರಾಜೇಶ್ ಅವರನ್ನು ಹೊರತು ಪಡಿಸಿದರೆ ಉಳಿದಂತೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಅಧಿಕಾರ ಹಂಚಿಕೆ ಸೂತ್ರದಂತೆ ಆಡಳಿತ ನಡೆಸಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದರು. ಇದೀಗ ಬಸಪ್ಪ ಅವರ ಬೆನ್ನ ಹಿಂದೆಯೇ ಉಪಾಧ್ಯಕ್ಷೆ ಸ್ಥಾನಕ್ಕೆ ಉಷಾ ರವಿ ಅವರು ರಾಜೀನಾಮೆ ನೀಡಲಿದ್ದಾರೆ.
ಕಾಂಗ್ರೆಸ್ ಭಿನ್ನರಿಗೆ ಸೋನಿಯಾ ಪರೋಕ್ಷ ಸಂದೇಶ ರವಾನೆ
ಸಹೋದರ ಸಿ.ಪಿ.ಯೋಗೇಶ್ವರ್ ಅವರೊಂದಿಗೆ ಬಿಜೆಪಿ ಪಾಳಯದಲ್ಲಿ ಗುರುತಿಸಿಕೊಂಡು ಕಾಂಗ್ರೆಸ್ ಸದಸ್ಯ ಸಿ.ಪಿ.ರಾಜೇಶ್ ನಾಯಕರಿಗೆ ಸೆಡ್ಡು ಹೊಡೆದು 30 ತಿಂಗಳು ಅಧಿಕಾರ ಅನುಭವಿಸಿ ರಾಜಿನಾಮೆ ಸಲ್ಲಿಸಿದರು. ಬಾಕಿ ಉಳಿದ 30 ತಿಂಗಳ ಅಧಿಕಾರವನ್ನು ಮೂವರಿಗೆ ಸಮಾನವಾಗಿ ಹಂಚಲು ಕಾಂಗ್ರೆಸ್ ವರಿಷ್ಠರು ತೀರ್ಮಾನಿಸಿದರು.ದೊಡ್ಡಮರಳವಾಡಿ ಕ್ಷೇತ್ರದ ಎಂ.ಎನ್.ನಾಗರಾಜು 12 ತಿಂಗಳು, ಬಸಪ್ಪ 10 ತಿಂಗಳು ಆಡಳಿತ ನಡೆಸಿದ್ದಾರೆ. ಬಾಕಿ ಉಳಿದ ಅವಧಿಗೆ ಎಚ್.ಎನ್.ಅಶೋಕ್ ಹಾಗೂ ಶಿವಕುಮಾರ್ ಅವರ ಪೈಕಿ ಯಾರು ಅಧ್ಯಕ್ಷರಾಗಬೇಕು ಎಂಬ ವಿಚಾರದಲ್ಲಿ ಡಿಕೆ ಸಹೋದರರ ತೀರ್ಮಾನವೇ ಅಂತಿಮವಾಗಲಿದೆ.