ಶಿಗ್ಗಾಂವಿ: ಸಾವಿನಲ್ಲೂ ಒಂದಾದ ಗಂಡ-ಹೆಂಡತಿ..!

Kannadaprabha News   | Asianet News
Published : Aug 28, 2020, 01:34 PM IST
ಶಿಗ್ಗಾಂವಿ: ಸಾವಿನಲ್ಲೂ ಒಂದಾದ ಗಂಡ-ಹೆಂಡತಿ..!

ಸಾರಾಂಶ

ಬದುಕಿನಲ್ಲಿ ಜೋಡಿಯಾಗಿ ಜೀವನವನ್ನು ಸಾಗಿಸಿದರೆ ಮರಣದಲ್ಲಿಯೂ ಕೂಡ ಜೋಡಿಯಾಗಿ ಸಾಗಿದ ಗಂಡ-ಹೆಂಡತಿ| ಹಾವೇರಿ ಜಿಲ್ಲೆಯ ಶಿಗ್ಗಾಂವಿ ಕಬನೂರ ಗ್ರಾಮದಲ್ಲಿ ನಡೆದ ಘಟನೆ| ಚನ್ನಬಸಪ್ಪ ಗುಂಡಣ್ಣವರ (62) ಹಾಗೂ ಅವರ ಪತ್ನಿ ಪಾರ್ವತಿ ಸಾವಿನಲ್ಲೂ ಒಂದಾದ ದಂಪತಿ| 

ಶಿಗ್ಗಾಂವಿ(ಆ.28): ಮರಣದಲ್ಲಿಯೂ ಕೂಡ ಗಂಡ ಹೆಂಡತಿ ಒಂದಾದ ಅಪರೂಪದ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ  ಕಬನೂರ ಗ್ರಾಮದಲ್ಲಿ ನಡೆದಿದೆ. ಹೌದು, ಚನ್ನಬಸಪ್ಪ (ಮುದುಕಪ್ಪ) ಮಲ್ಲಪ್ಪ ಗುಂಡಣ್ಣವರ (62) ಹಾಗೂ ಅವರ ಪತ್ನಿ ಪಾರ್ವತಿ ಚನ್ನಬಸಪ್ಪ (ಮುದುಕಪ್ಪ) ಗುಂಡಣ್ಣವರ (53) ಬದುಕಿನಲ್ಲಿ ಜೋಡಿಯಾಗಿ ಜೀವನವನ್ನು ಸಾಗಿಸಿದರೆ ಸಾವಿನಲ್ಲೂ ಕೂಡ ಜೋಡಿಯಾಗಿ ಸಾಗಿದ್ದಾರೆ. 

ಇಬ್ಬರೂ ಗುರುವಾರ ನಿಧನರಾಗಿದ್ದಾರೆ. ಮೃತ ದಂಪತಿಗೆ ಇಬ್ಬರು ಪುತ್ರರು, ಮೂವರು ಪುತ್ರಿಯರು ಇದ್ದಾರೆ. 

ಗಂಗಾವತಿ: ಗಂಡನ ನಿಧನದ ಸುದ್ದಿ ಕೇಳಿ ಹೆಂಡತಿ ಸಾವು, ಸಾವಿನಲ್ಲೂ ಒಂದಾದ ವೃದ್ಧ ದಂಪತಿ

ಗುರುವಾರ ಚನ್ನಬಸಪ್ಪ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು, ಇದರಿಂದ ಪಾರ್ವತಿ ಸಹ ಅಸ್ವಸ್ಥರಾದರು. ಆಸ್ಪತ್ರೆಗೆ ಕರೆದುಕೊಂಡು ಹೋಗಲು ಮಕ್ಕಳು ಸಿದ್ಧರಾಗಿದ್ದರು. ಇದನ್ನು ನೋಡಿದ ಪತಿ ಹೃದಯಾಘಾತದಿಂದ ಮೃತರಾದರೆ, ಪತ್ನಿ ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯದಲ್ಲಿಯೇ ಕೊನೆಯುಸಿರೆಳೆದ್ದಾರೆ. ಈ ಮೂಲಕ ಸಾವಿನಲ್ಲೂ ದಂಪತಿ ಒಂದಾಗಿದ್ದಾರೆ.
 

PREV
click me!

Recommended Stories

ದರ್ಶನ್ ಗ್ಯಾಂಗ್‌ನಿಂದ ಕೊಲೆಗೀಡಾದ ರೇಣುಕಾಸ್ವಾಮಿಗೆ ಸತ್ತಮೇಲೂ ನೆಮ್ಮದಿಯಿಲ್ಲ! ಸಮಾಧಿ ಧ್ವಂಸಗೈದ ಡೆವಿಲ್ ಗ್ಯಾಂಗ್‌!
ಧರ್ಮಸ್ಥಳ ನೂರಾರು ಶವ ಹೂಳಿದ ಕೇಸ್: ಬುರುಡೆ ಗ್ಯಾಂಗ್ ಷಡ್ಯಂತ್ರ ಬಯಲು - SIT ವರದಿಯಲ್ಲಿ ಒಬ್ಬರಿಗೆ ಕ್ಲೀನ್ ಚಿಟ್!