ರಾಮನಗರ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದ ಬಳಿಯ ಇಂಡಿಯಾ-1 ಎಟಿಎಂನಲ್ಲಿ 500 ರೂ. ಬದಲಾಗಿ 20 ರೂ. ನೋಟುಗಳು ಬಂದಿವೆ.
ರಾಮನಗರ (ಮೇ 23): ರಾಮನಗರ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದ ಬಳಿಯಿರುವ ಇಂಡಿಯಾ-1 ಎಟಿಎಂನಿಂದ 500 ರೂ. ಬದಲಾಗಿ 20 ರೂ. ನೋಟುಗಳು ಬಂದಿವೆ. ಆದರೆ, ಮೊಬೈಲ್‌ಗೆ ಬಂದ ಸಂದೇಶದಲ್ಲಿ ಪ್ರತಿ 20 ರೂ. ನೋಟಿಗೂ 500 ರೂ. ಪಡೆದುಕೊಂಡಿದ್ದೀರಿ ಎಂದು ಮೆಸೇಜ್ ಬಂದಿದೆ.
ಸಾಮಾನ್ಯವಾಗಿ ಅತ್ಯಂತ ಜನನಿಬಿಡ ಪ್ರದೇಶಗಳು, ಬಸ್ ನಿಲ್ದಾಣಗಳು, ರೈಲು ನಿಲ್ದಾಣಗಳ ಬಳಿ ಸ್ಥಾಪನೆ ಮಾಡಲಾಗುತ್ತಿರುವ ಇಂಡಿಯಾ-1 ಎಟಿಎಂ ತುರ್ತಾಗಿ ಹಣ ವಿತ್‌ಡ್ರಾ ಮಾಡುವವರಿಗೆ ಅನುಕೂಲವಾಗಿದೆ. ಆದರೆ, ರಾಮನಗರ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದ ಬಳಿಯಿರುವ ಇಂಡಿಯಾ-1 ಎಟಿಎಂನಿಂದ 500 ರೂ. ಬದಲಾಗಿ 20 ರೂ. ನೋಟುಗಳು ಬಂದಿವೆ. ಆದರೆ, ಮೊಬೈಲ್‌ಗೆ ಬಂದ ಸಂದೇಶದಲ್ಲಿ ಪ್ರತಿ 20 ರೂ. ನೋಟಿಗೂ 500 ರೂ. ಪಡೆದುಕೊಂಡಿದ್ದೀರಿ ಎಂದು ಮೆಸೇಜ್ ಬಂದಿದೆ. ಈ ಘಟನೆಯಿಂದ ಎಟಿಎಂನಿಂದ ಹಣ ವಿಥ್‌ಡ್ರಾ ಮಾಡಿದ ಯುವತಿ ಸಂಕಷ್ಟಕ್ಕೆ ಸಿಲುಕಿ ಅಲ್ಲಿದ್ದ ಕೆಎಸ್‌ಆರ್‌ಟಿಸಿ ಸಿಬ್ಬಂದಿಯ ನೆರವಿನ ಮೊರೆ ಹೋಗಿದ್ದಾಳೆ.
ಜೈಲಿನಲ್ಲಿದ್ದರೂ ಹಪ್ತಾ ವಸೂಲಿ ಕೈಬಿಡದ ವಿಲ್ಸನ್ ಗಾರ್ಡನ್ ನಾಗ; ಬಿಲ್ಡರ್‌ಗಳಿಗೆ ಜೀವ ಬೆದರಿಕೆ
ಇಂಡಿಯಾ -1 ಎಟಿಎಂನಲ್ಲಿ ಹಣ ವಿಥ್‌ಡ್ರಾ ಯುವತಿ ಪರದಾಡುತ್ತಿದ್ದುದನ್ನು ನೋಡಿದ ಕೆಎಸ್‌ಆರ್‌ಟಿಸಿ ಬಸ್ ಚಾಲಕರು ಮತ್ತು ಕಂಡಕ್ಟರ್‌ಗಳು ನೆರವುಗೆ ಬಂದಿದ್ದಾರೆ. ಯುವತಿಯನ್ನು ಎಟಿಎಂನಲ್ಲಿ ಇರಿಸಿ ವಿಡಿಯೋ ಮಾಡಿದ್ದಾರೆ. ಆಗ ಘಟನೆಯ ಬಗ್ಗೆ ಮಾಹಿತಿ ಕೇಳಿದ್ದಾರೆ. ಆಗ ಯುವತಿ ನಾನು ಎಟಿಎಂಗೆ ಬಂದು 5000 ರೂ. ಹಣವನ್ನು ಡ್ರಾ ಮಾಡಲು ಮುಂದಾಗಿದ್ದೆನು. ಆಗ ಎಟಿಎಂ ಕಾರ್ಡ್ ಹಾಕಿ 5000 ರೂ. ನಮೂದಿಸಿ ಹಣ ಪಡೆಯುವಾಗ ಮಷಿನ್‌ನಿಂದ ಎಂಟು 500 ರೂ. ನೋಟುಗಳು ಹಾಗೂ ಎರಡು 20 ರೂ. ನೋಟುಗಳು ಬಂದಿವೆ.
ಪ್ರೀತಿಸಿದ ಹುಡುಗಿಯನ್ನು ಮದುವೆಯಾಗುತ್ತಿದ್ದ ವರನಿಗೆ ಚಾಕು ಇರಿದ ಮಾಜಿ ಪ್ರೇಮಿ
ಇನ್ನು ಹಣ ಪಡೆದ ನಂತರ ಮೊಬೈಲ್‌ಗೆ ಬಂದ ಮೆಸೇಜ್ ನೋಡಿದರೆ 5,000 ರೂ. ಕಡಿತ ಆಗಿರುವುದು ಕಂಡುಬಂದಿದೆ. ಆದರೆ, ನನ್ನ ಕೈಗೆ ಬಂದಿರುವುದು ಕೇವಲ 4,040 ರೂ. ಮಾತ್ರ. ಇದರಿಂದ ಕೂಡಲೇ ಗಾಬರಿಯಾಗಿ ನಿಮ್ಮ ನೆರವು ಕೇಳಿದ್ದೇನೆ ಎಂದು ಯುವತಿ ಹೇಳಿದ್ದಾರೆ. ಬಸ್ ಚಾಲಕ ಮತ್ತು ನಿರ್ವಾಹಕರ ಸಲಹೆ ಮೇರೆಗೆ ಯುವತಿ ಎಟಿಎಂ ಸಿಬ್ಬಂದಿ ವಿರುದ್ಧ ದೂರು ಕೊಡಲು ಮುಂದಾಗಿದ್ದಾಳೆ. ತನಗೆ ಅಗತ್ಯವಿದ್ದಾಗ ಎಟಿಎಂನಿಂದ ಕಡಿಮೆ ಹಣ ಬಂದಿದ್ದಕ್ಕೆ ಆಕ್ರೋಶ ಹೊರ ಹಾಕಿದ್ದಾಳೆ.