ಗ್ರಾಪಂ ತೆರಿಗೆ ಸಂಗ್ರಹ: ರಾಮನಗರ ರಾಜ್ಯಕ್ಕೆ ಪ್ರಥಮ..!

By Kannadaprabha News  |  First Published Dec 21, 2023, 11:15 PM IST

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ತೆರಿಗೆ ಸಂಗ್ರಹದಲ್ಲಿ ರಾಜ್ಯದಲ್ಲಿ ಹಿಂದುಳಿದಿದ್ದ ರಾಮನಗರ ಜಿಲ್ಲೆ ಈಗ 1ನೇ ಸ್ಥಾನಕ್ಕೇರಿದೆ. ಈ ಮೂಲಕ ತೆರಿಗೆ ಸಂಗ್ರಹ ವಿಷಯದಲ್ಲೂ ರಾಮನಗರ ಜಿಲ್ಲೆಯು ಮುಂಚೂಣಿಗೆ ಬಂದಿದೆ.


ಎಂ.ಅಫ್ರೋಜ್ ಖಾನ್

ರಾಮನಗರ(ಡಿ.21):  ನರೇಗಾ ಅನುಷ್ಠಾನದಲ್ಲಿ ಉತ್ತಮ ಸಾಧನೆ ಮಾಡಿ ರಾಜ್ಯದ ಗಮನ ಸೆಳೆದಿರುವ ರಾಮನಗರ ಜಿಲ್ಲೆ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ತೆರಿಗೆ ವಸೂಲಿಯಲ್ಲೂ ಪ್ರಗತಿ ಪಥದತ್ತ ಸಾಗಿ ಮೊದಲ ಸ್ಥಾನದಲ್ಲಿದೆ.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ತೆರಿಗೆ ಸಂಗ್ರಹದಲ್ಲಿ ರಾಜ್ಯದಲ್ಲಿ ಹಿಂದುಳಿದಿದ್ದ ರಾಮನಗರ ಜಿಲ್ಲೆ ಈಗ 1ನೇ ಸ್ಥಾನಕ್ಕೇರಿದೆ. ಈ ಮೂಲಕ ತೆರಿಗೆ ಸಂಗ್ರಹ ವಿಷಯದಲ್ಲೂ ರಾಮನಗರ ಜಿಲ್ಲೆಯು ಮುಂಚೂಣಿಗೆ ಬಂದಿದೆ.

Tap to resize

Latest Videos

ಪ್ರಸ್ತುತ ಆರ್ಥಿಕ ವರ್ಷ ಮುಗಿಯಲು ಇನ್ನೂ ಮೂರು ತಿಂಗಳು ಬಾಕಿಯಿದ್ದು, ಈಗಾಗಲೇ ಜಿಲ್ಲಾ ವ್ಯಾಪ್ತಿಯ 126 ಗ್ರಾಮ ಪಂಚಾಯಿತಿಗಳು ತೆರಿಗೆ ಸಂಗ್ರಹದಲ್ಲಿ ಶೇಕಡ 62.45ರಷ್ಟು ಗುರಿ ಸಾಧಿಸಿವೆ. ಅಂದರೆ 49.56 ಕೋಟಿ ರುಪಾಯಿ ನಿರೀಕ್ಷೆಯಲ್ಲಿ 30.95ಕೋಟಿ ರುಪಾಯಿಯಷ್ಟು ತೆರಿಗೆ ಸಂಗ್ರಹ ಮಾಡಲಾಗಿದೆ. ತೆರಿಗೆ ವಸೂಲಿ ಮಾಡಿ ಆರ್ಥಿಕ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಗ್ರಾಪಂಗಳು ಅಸಡ್ಡೆ ತೋರುತ್ತಿರುವ ಆರೋಪ ಕೇಳಿ ಬರುತ್ತಿರುವಾಗಲೇ ಬಯಲುಸೀಮೆ ಜಿಲ್ಲೆಯ ಗ್ರಾಪಂಗಳು ದಾಖಲೆ ಮಟ್ಟದಲ್ಲಿ ತೆರಿಗೆ ಸಂಗ್ರಹ ಮಾಡಿರುವುದು ವಿಶೇಷ.

ಚನ್ನಪಟ್ಟಣ: ವರ್ಷ ತುಂಬಿದ ಮಗುವನ್ನು ನದಿಗೆ ಎಸೆದು ಕೊಂದ ನಿರ್ದಯಿ ತಾಯಿ..!

ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ರಾಜ್‌ ಕಾಯ್ದೆ 1993 ಯ‌ನ್ವಯ ಗ್ರಾಪಂಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಕೃಷಿಯೇತರ ಆಸ್ತಿಗಳ ಮೇಲೆ ತೆರಿಗೆ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಗ್ರಾಪಂಗಳು ತಮ್ಮ ಸ್ವಂತ ಸಂಪನ್ಮೂಲಗಳನ್ನು ಕ್ರೋಡೀಕರಿಸಿ ಸ್ವಾವಲಂಬಿಗಳಾಗಬೇಕು ಎಂಬುದು ಸರ್ಕಾರದ ಆಶಯ. ಆದರೆ ಹೆಚ್ಚಿನ ಗ್ರಾಪಂಗಳು ತಮಗೆ ನೀಡಲಾದ ಅಧಿಕಾರವನ್ನು ಸಮರ್ಪಕವಾಗಿ ಬಳಸಿಕೊಳ್ಳದೆ ತೆರಿಗೆ ನಿರ್ಧರಣೆ, ಪರಿಷ್ಕರಣೆ ಹಾಗೂ ವಸೂಲಾತಿಯಲ್ಲಿ ನಿರ್ಲಕ್ಷ್ಯವಹಿಸಿದ್ದವು. ಆದರೀಗ ರಾಮನಗರ ಜಿಲ್ಲೆಯ 126 ಗ್ರಾಪಂಗಳು ಕಳೆದ 3 ವರ್ಷಗಳಿಗೆ ಹೋಲಿಕೆ ಮಾಡಿದರೆ ಅತಿ ಹೆಚ್ಚು ತೆರಿಗೆ ವಸೂಲಿ ಮಾಡಿವೆ. ಇದು ಉಳಿದ ಜಿಲ್ಲೆಗಳಿಗಿಂತ ಹೆಚ್ಚು ಎನ್ನುತ್ತಾರೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಇಲಾಖೆ ಅಧಿಕಾರಿಗಳು.

ಪಿಒಎಸ್ ಬಳಕೆಯಲ್ಲಿ 3ನೇ ಸ್ಥಾನಕ್ಕೆ ಕುಸಿತ:

ಗ್ರಾಪಂಗಳ ತೆರಿಗೆ ವಸೂಲಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಹಾಗೂ ತೆರಿಗೆ, ದರ ಮತ್ತು ಇತರೆ ಶುಲ್ಕಗಳನ್ನು ವಸೂಲಿ ಮಾಡುವ ಸಲುವಾಗಿ ಜಾರಿಗೆ ತರಲಾಗಿರುವ ಪಿಒಎಸ್ (ಪಾಯಿಂಟ್ ಆಫ್ ಸೇಲ್ ) ಸಾಧನ (ಡಿವೈಸ್) ಬಳಕೆಯಲ್ಲಿ ರಾಮನಗರ ಜಿಲ್ಲೆ ರಾಜ್ಯದಲ್ಲಿ 2ರಿಂದ 3ನೇ ಸ್ಥಾನಕ್ಕೆ ಕುಸಿದಿದೆ.

ಗ್ರಾಪಂಗಳು ಸರ್ಕಾರದ ಅನುದಾನಕ್ಕಿಂತ ಸ್ಥಳೀಯವಾಗಿ ಸಂಗ್ರಹವಾಗುವ ಸಂಪನ್ಮೂಲಗಳ ಮೇಲೆ ನೌಕರರ ವೇತನ, ಕುಡಿಯುವ ನೀರು, ಬೀದಿ ದೀಪಗಳ ನಿರ್ವಹಣೆ, ಸ್ವಚ್ಛತೆ ಮತ್ತಿತರ ಕಾರ್ಯಗಳಿಗೆ ಅನುದಾನ ಬಳಸಬೇಕಾಗುತ್ತದೆ. ಹೀಗಾಗಿ ಗ್ರಾಪಂಗಳಿಗೆ ಸಾಕಷ್ಟು ವರಮಾನ ಇದ್ದರೂ ನಿರೀಕ್ಷಿತ ಮಟ್ಟದಲ್ಲಿ ತೆರಿಗೆ ಸಂಗ್ರಹವಾಗುತ್ತಿಲ್ಲ. ಜತೆಗೆ ತೆರಿಗೆ ಲೆಕ್ಕಾಚಾರವೂ ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಗದ ಹಿನ್ನೆಲೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಇಲಾಖೆ ಎಲ್ಲ ಗ್ರಾಪಂಗಳಿಗೆ ಪಿಒಎಸ್ ವ್ಯವಸ್ಥೆ ಜಾರಿಗೊಳಿಸಿತು.

ಈ ಸಾಧನವನ್ನು ಪರಿಚಯಿಸಿದ ಹೊಸದರಲ್ಲಿ ಜಿಲ್ಲೆಯ 126 ಗ್ರಾಮ ಪಂಚಾಯಿತಿಗಳಲ್ಲಿಯೂ ಬಳಕೆ ಮಾಡಿಕೊಂಡು ತೆರಿಗೆ ವಸೂಲಿ ಮಾಡಲಾಯಿತು. ಒಟ್ಟು 435 ವಹಿವಾಟು (ಟ್ರಾನ್ಸ್ ಆಕ್ಷನ್ ) ನಡೆಸಿ 2ನೇ ಸ್ಥಾನ ಪಡೆದಿತ್ತು. ಆದರೀಗ ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಮೊದಲ ಎರಡು ಸ್ಥಾನಗಳಿದ್ದರೆ, ರಾಮನಗರ ಜಿಲ್ಲೆ 3ನೇ ಸ್ಥಾನ ಅಲಂಕರಿಸಿದೆ.

ರಾಮನಗರ ಜಿಲ್ಲೆಯ 126 ಗ್ರಾಪಂಗಳಲ್ಲಿ ಪಿಒಎಸ್ ಮೂಲಕವೇ ತೆರಿಗೆ ವಸೂಲಿ ಮಾಡಲಾಗುತ್ತಿದೆ. ಈಗಾಗಲೇ ತೆರಿಗೆ ಗುರಿ 49.56 ಕೋಟಿ ರು. ಪೈಕಿ 30.95 ಕೋಟಿ ರುಪಾಯಿ ಸಂಗ್ರಹವಾಗಿದೆ. ಉಳಿಕೆ ಮೂರು ತಿಂಗಳಲ್ಲಿ ಶೇ.100ರಷ್ಟು ತೆರಿಗೆ ಸಂಗ್ರಹ ಗುರಿ ಸಾಧಿಸಲಾಗುವುದು ಎಂದು ರಾಮನಗರ  ಜಿಪಂ  ಸಿಇಒ ದಿಗ್ವಿಜಯ್ ಬೋಡ್ಕೆ ತಿಳಿಸಿದ್ದಾರೆ. 

ಚಾರಣಕ್ಕೆ ಬಂದು ದಾರಿ ತಪ್ಪಿ ಕಾಡಿನಲ್ಲಿ ಅಲೆದಾಟ; ಬೆಂಗಳೂರಿನ 6 ಜನ ಹುಡುಗಿಯರ ರಕ್ಷಣೆ

ರಾಮನಗರ ತಾಲೂಕು ಹೆಚ್ಚು ತೆರಿಗೆ ಸಂಗ್ರಹ

ರಾಮನಗರ ಜಿಲ್ಲೆಯಲ್ಲಿ ಅತಿ ಹೆಚ್ಚು ರಾಮನಗರ ತಾಲೂಕಿನ 20 ಗ್ರಾಪಂಗಳು 24.25 ಕೋಟಿರು.ಗಳಲ್ಲಿ 17.47 ಕೋಟಿ (ಶೇ.72.05)ರು.ಗಳಷ್ಟು ತೆರಿಗೆ ಸಂಗ್ರಹ ಮಾಡಿದ್ದರೆ, ಅತಿ ಕಡಿಮೆ ಮಾಗಡಿ ತಾಲೂಕಿನ 32 ಗ್ರಾಪಂಗಳು 6.58 ಕೋಟಿ ರು.ಗಳಲ್ಲಿ 2.96 ಕೋಟಿ (ಶೇ.45.06) ರು.ಗಳಷ್ಟು ತೆರಿಗೆ ಸಂಗ್ರಹಸಿವೆ. ಉಳಿದಂತೆ ಚನ್ನಪಟ್ಟಣ ತಾಲೂಕಿನ 32 ಗ್ರಾಪಂಗಳು 7.05 ಕೋಟಿ ರು.ಗಳಲ್ಲಿ 3.60 ಕೋಟಿ (ಶೇ.51.09) ಹಾಗೂ ಕನಕಪುರ ತಾಲೂಕಿನ 42 ಗ್ರಾಪಂಗಳು 11.66 ಕೋಟಿ ರು.ಗಳಲ್ಲಿ 6.90 ಕೋಟಿ ರು.(ಶೇ.59.17) ವಸೂಲಿ ಮಾಡಿವೆ.

ಗ್ರಾಪಂಗಳ ತೆರಿಗೆ ಸಂಗ್ರಹ ವಿವರ: ತಾಲೂಕು ಗ್ರಾಪಂಗಳು ಬೇಡಿಕೆ ಸಂಗ್ರಹ ಶೇ.ವಾರು ಪ್ರಗತಿ

ಚನ್ನಪಟ್ಟಣ 32 7,05,99,751.54 3,60,177.60 51.09
ಕನಕಪುರ 42 11,66,85,002.10 6,90,46,288.87 59.17
ಮಾಗಡಿ 32 6,58,68,804.56 2,96,83,041.42 45.06
ರಾಮನಗರ 20 24,25,02,979.36 17,47,21,265.07 72.05
ಒಟ್ಟು 126 49,56,56,537.56 30,95,21,772.96 62.45

click me!