ರಾಮನಗರ, ಜಿಲ್ಲಾ ಕೇಂದ್ರವಾಗಿ ಹದಿನೈದು ವರ್ಷ ತುಂಬಿ ಹದಿನಾರನೇ ವಸಂತಕ್ಕೆ ಕಾಲಿಟ್ಟಿದೆ. ಜಿಲ್ಲೆಯಲ್ಲಿ ಇಷ್ಟು ವರ್ಷಗಳ ಕಾಲ ಅಭಿವೃದ್ದಿ ಎಂಬುದು ಅಷ್ಟಕಷ್ಟೇ. ಜಿಲ್ಲೆಯಲ್ಲಿ ಆಗಬೇಕಿರುವುದು ಸಾಕಷ್ಟು ಇದೆ.
ವರದಿ: ಜಗದೀಶ್ ಏಷ್ಯಾನೆಟ್ ಸುವರ್ಣನ್ಯೂಸ್
ರಾಮನಗರ (ಆ.23): ರಾಮನಗರ ಜಿಲ್ಲೆ. ಸಿಲಿಕಾನ್ ಸಿಟಿ ಬೆಂಗಳೂರಿನಿಂದ ಕೂಗಳತೆ ದೂರದಲ್ಲಿರೋ ಜಿಲ್ಲೆ, ಹೊಸ ಜಿಲ್ಲೆಯಾಗಿ ಇಂದಿಗೆ ಹದಿನೈದು ವರ್ಷ ತುಂಬಿ ಹದಿನಾರನೇ ವಸಂತಕ್ಕೆ ಕಾಲಿಟ್ಟಿದ್ದೆ. ಜಿಲ್ಲೆಯಾಗಿ ಮಾರ್ಪಟ್ಟಿ ಒಂದೂವರೆ ದಶಕಗಳು ಕಳೆದ್ರೂ, ಘಟಾನುಘಟಿ ನಾಯಕರುಗಳು ಇದ್ದರು, ಅಭಿವೃದ್ದಿ ಎಂಬುದು ಅಷ್ಟಕಷ್ಟೆ. ಜಿಲ್ಲೆ ಅಭಿವೃದ್ದಿ ಕಾಣಬೇಕಿರುವುದು ಸಾಕಷ್ಟಿದೆ. ರೇಷ್ಮೆನಗರಿ ರಾಮನಗರ, ಜಿಲ್ಲಾ ಕೇಂದ್ರವಾಗಿ ಇಂದಿಗೆ ಹದಿನೈದು ವರ್ಷ ತುಂಬಿ ಹದಿನಾರನೇ ವಸಂತಕ್ಕೆ ಕಾಲಿಟ್ಟಿದೆ. ಜಿಲ್ಲೆಯಲ್ಲಿ ಇಷ್ಟು ವರ್ಷಗಳ ಕಾಲ ಅಭಿವೃದ್ದಿ ಎಂಬುದು ಅಷ್ಟಕಷ್ಟೇ. ಜಿಲ್ಲೆಯಲ್ಲಿ ಆಗಬೇಕಿರುವುದು ಸಾಕಷ್ಟು ಇದೆ. ಅಂದಹಾಗೆ 2007ರ ಆಗಸ್ಟ್ 23ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ರಾಮನಗರ, ಚನ್ನಪಟ್ಟಣ,ಕನಕಪುರ ಹಾಗೂ ಮಾಗಡಿ ತಾಲೂಕುಗಳು ಬೇರ್ಪಟ್ಟು, ರಾಮನಗರವನ್ನ ಜಿಲ್ಲಾ ಕೇಂದ್ರವನ್ನಾಗಿ ಮಾಡಿ, ರಾಮನಗರ ಹೊಸ ಜಿಲ್ಲೆಯಾಗಿ ಜನ್ಮ ತಾಳಿತ್ತು. ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ನಿರ್ಧಾರದ ಫಲವಾಗಿ ಹೊಸ ಜಿಲ್ಲೆ ರೂಪಗೊಂಡಿತು. ಇನ್ನು ಜಿಲ್ಲೆಯಾಗಿ ಮಾರ್ಪಟ್ಟ ಮೇಲೆ ಜಿಲ್ಲಾ ಕಚೇರಿಗಳ ಸಂಕೀರ್ಣ ಸೇರಿದಂತೆ ನಾಲ್ಕಾರು ಭವನಗಳು ತಲೆ ಎತ್ತಿವೆ.
ಅಧಿಕಾರಿಗಳು ಜಿಲ್ಲಾ ಕೇಂದ್ರದಲ್ಲಿ ಕೈಗೆಟಕುವಂತೆ ಆಗಿದೆ. ಆದರೆ ಬೆಂಗಳೂರಿನ ಪಕ್ಕದಲ್ಲೇ ಇದ್ದರು ಜಿಲ್ಲೆಯ ಜನರು ನಿರೀಕ್ಷಿಸಿದಂತೆ ಅಭಿವೃದ್ದಿ ಮಾತ್ರ ಹೊಂದಲಿಲ್ಲ. ಅಂದಹಾಗೆ 2007ರ ಆಗಸ್ಟ್ 23ರಂದು ಜಿಲ್ಲಾ ಕೇಂದ್ರವಾಗಿ ರಾಮನಗರ ಜಿಲ್ಲೆ ಜನ್ಮತಾಳಿತು. ಪ್ರಾರಂಭದಲ್ಲಿ ರೇಷ್ಮೆನಗರಿ ಜನರ ಸಂತೋಷಕ್ಕೆ ಪಾರವೇ ಇರಲಿಲ್ಲ. ಜಿಲ್ಲಾ ಕೇಂದ್ರವಾದರೇ ಸಾಕಷ್ಟು ಅಭಿವೃದ್ದಿ ಕಾಣುತ್ತದೆ ಎಂಬುದು ಜನರ ಭಾವನೆಯಾಗಿತ್ತು. ಜಿಲ್ಲೆಯಿಂದ ಒಬ್ಬರು ಪ್ರಧಾನಮಂತ್ರಿ, ಮೂವರು ಮುಖ್ಯಮಂತ್ರಿಗಳನ್ನು ಕೊಟ್ಟಿದ್ದು, ಘಟಾನುಘಟಿ ನಾಯಕರು ಇರುವುದಿಂದ ಶರವೇಗದಲ್ಲಿ ಅಭಿವೃದ್ದಿ ಆಗುತ್ತದೆ ಎಂಬ ನಂಬಿಕೆ ಇತ್ತು.
ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಅಂಬೆಗಾಲು ಕೃಷ್ಣ ದೇವಾಲಯದಲ್ಲಿ ವಿಶೇಷ ಪೂಜೆ
ಆದರೆ ಜನರ ನೀರಿಕ್ಷೆಯಂತೆ ರಾಮನಗರ ಜಿಲ್ಲೆ ಅಭಿವೃದ್ದಿ ಕಾಣಲೇ ಇಲ್ಲ.ಜಿಲ್ಲಾ ಕೇಂದ್ರದಲ್ಲಿ ಸುಸುಜ್ಜಿತ ಬಸ್ ನಿಲ್ದಾಣವಿಲ್ಲ. ಹೈಟೆಕ್ ಆಸ್ಪತ್ರೆ ಇಲ್ಲ. ಪ್ರತಿಯೊಂದಕ್ಕೂ ಬೆಂಗಳೂರಿಗೆ ಅಲೆಯುವ ಪರಿಸ್ಥಿತಿ ರೋಗಿಗಳಿಗೆ. ಇನ್ನು ಈ ಹಿಂದೆ ಘೋಷಣೆ ಮಾಡಿದ ಅದೆಷ್ಟು ಯೋಜನೆಗಳು ಕಾರ್ಯರೂಪಕ್ಕೆ ಬಂದಿಲ್ಲ. ಕೆಲಸಕ್ಕೆಂದು ಪ್ರತಿನಿತ್ಯ ಸಾವಿರಾರು ಜನರು ಬೆಂಗಳೂರಿಗೆ ಹೋಗುವ ಸ್ಥಿತಿ. ಹೀಗಾಗಿ ನಾನಾ ವಿಚಾರಗಳಲ್ಲಿ ಬೇರೆ ಜಿಲ್ಲೆಗಳಿಗೆ ಓಲಿಸಿಕೊಂಡರೇ ಈ ಜಿಲ್ಲೆ ಅಭಿವೃದ್ದಿ ಮಾತ್ರ ಕಾಣಲೇ ಇಲ್ಲ.
Ramanagara ; ಜಾನಪದ ಲೋಕದಲ್ಲಿ‘ಸಂಜೀವಿನಿ ಗ್ರಾಮೀಣ ಸಂತೆ’
ಒಟ್ಟಾರೆ ರಾಮನಗರ ಜಿಲ್ಲೆ ಇಂದಿಗೆ ಹದಿನೈದು ವರ್ಷ ಪೂರೈಸಿ, ಹದಿನಾರನೇ ವಸಂತಕ್ಕೆ ಕಾಲಿಟ್ಟಿದೆ. ಅಭಿವೃದ್ದಿ ಎಂಬುದು ಸ್ವಲ್ಪಮಟ್ಟಿಗೆ ಆಗಿದ್ರೆ, ಆಗಬೇಕಿರುವುದು ಇನ್ನು ಸಾಕಷ್ಟು ಇದೆ. ಜನರು ಕೂಡ ಇದೇ ನಿರೀಕ್ಷೆಯಲ್ಲಿ ಇದ್ದಾರೆ.