ಪ್ರಧಾನಿ ಮೋದಿಗೆ ಬಂದಿದೆ ರಾಮನ ಶಕ್ತಿ, ಅವರಿಗೆ ಸೋಲಿಲ್ಲ. ರಮಲಿಂಗ ಶ್ರೀ

By Kannadaprabha News  |  First Published Oct 10, 2023, 6:44 AM IST

ರಾಮನ ಶಕ್ತಿ ಅಪಾರ. ರಾಮನು 14 ವರ್ಷ ವನವಾಸ ಮಾಡಿದರೂ ಕೊನೆಗೆ ಸತ್ಯ ಹೊರಬಂದಂತೆ ಹಿಂದೂತ್ವದಲ್ಲಿ ಅಡಗಿರುವ ಶಕ್ತಿ ಕೂಡ ಸತ್ಯತೆಗಾಗಿ ಬಡದಾಡುತ್ತಿದೆ. ಭಾರತದಲ್ಲಿ ಸಾಧು, ಸಂತರು ಹಾಗೂ ಮಹಾತ್ಮರು ಆಗಿ ಹೋಗಿದ್ದಾರೆ. ಅವರಿಂದ ಸತ್ಯ ಜಯ ಪಡೆಯುತ್ತ ಇಲ್ಲಿಯವರೆಗೆ ಬಂದಿದೆ. ಆದ್ದರಿಂದ ಸತ್ಯಕ್ಕೆ ಜಯ ಇದೆ. ಬಜರಂಗ ಎನ್ನುವ ಹನಮಂತನ ಶಕ್ತಿ ಅಪಾರ. ಅಂತಹ ಶಕ್ತಿ ಪಡೆಯಲು ಎಲ್ಲ ಯುವಕರು ಮುಂದಾಗಿ ದುಶ್ಚಟಗಳಿಂದ ದೂರಾಗಿ ಎಂದು ಸಲಹೆ ನೀಡಿದ ಚಬನೂರಿನ ಜ್ಯೋತಿಷ್ಯ ರತ್ನ ಶ್ರೀ ರಮಲಿಂಗ ಮಹಾಸ್ವಾಮಿಗಳು 


ತಾಳಿಕೋಟೆ(ಅ.10): ಪ್ರಧಾನಿ ನರೇಂದ್ರ ಮೋದಿಗೆ ಶ್ರೀ ರಾಮನ ಶಕ್ತಿ ಬಂದಿದೆ. ಅವರಿಗೆ ಸೋಲು ಇಲ್ಲ. ಮೂಢನಂಬಿಕೆ ಹೋಗಲಾಡಿಸಿ ಸತ್ಯತೆಗೆ ಮುಂದಾಗಿರುವ ಅವರ ಸೇವಾ ಕಾರ್ಯ ಇಡೀ ಭಾರತದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಚಬನೂರಿನ ಜ್ಯೋತಿಷ್ಯ ರತ್ನ ಶ್ರೀ ರಮಲಿಂಗ ಮಹಾಸ್ವಾಮಿಗಳು ಹೇಳಿದರು.

ಸೋಮವಾರ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ನೇತೃತ್ವದಲ್ಲಿ ಪಟ್ಟಣಕ್ಕೆ ಆಗಮಿಸಿದ ಶೌರ್ಯ ಜಾಗರಣಾ ರಥಯಾತ್ರೆ ಸ್ವಾಗತಿಸಿ ಮಾತನಾಡಿದ ಅವರು, 1984 ರಲ್ಲಿ ಉತ್ತರ ಪ್ರದೇಶದಲ್ಲಿ ಜನ್ಮ ತಾಳಿದ ಭಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ರಾಮನ ಶಕ್ತಿಯಿಂದ ಮುನ್ನಡೆಯುತ್ತಿವೆ. ಇವುಗಳಲ್ಲಿ ಮಹಾ ಶಕ್ತಿ ಅಡಗಿದೆ ಎಂದು ನುಡಿದರು.

Latest Videos

undefined

ಗೋ ಶಾಲೆ ನಿರ್ವಹಣೆಗಿಲ್ಲ ಸರ್ಕಾರದ ಅನುದಾನ! ಬರದ ನಡುವೆ ಗೋಪಾಲಕರ ಗೋಳು ಕೇಳೋರಿಲ್ಲ

ರಾಮನ ಶಕ್ತಿ ಅಪಾರ. ರಾಮನು 14 ವರ್ಷ ವನವಾಸ ಮಾಡಿದರೂ ಕೊನೆಗೆ ಸತ್ಯ ಹೊರಬಂದಂತೆ ಹಿಂದೂತ್ವದಲ್ಲಿ ಅಡಗಿರುವ ಶಕ್ತಿ ಕೂಡ ಸತ್ಯತೆಗಾಗಿ ಬಡದಾಡುತ್ತಿದೆ. ಭಾರತದಲ್ಲಿ ಸಾಧು, ಸಂತರು ಹಾಗೂ ಮಹಾತ್ಮರು ಆಗಿ ಹೋಗಿದ್ದಾರೆ. ಅವರಿಂದ ಸತ್ಯ ಜಯ ಪಡೆಯುತ್ತ ಇಲ್ಲಿಯವರೆಗೆ ಬಂದಿದೆ. ಆದ್ದರಿಂದ ಸತ್ಯಕ್ಕೆ ಜಯ ಇದೆ. ಬಜರಂಗ ಎನ್ನುವ ಹನಮಂತನ ಶಕ್ತಿ ಅಪಾರ. ಅಂತಹ ಶಕ್ತಿ ಪಡೆಯಲು ಎಲ್ಲ ಯುವಕರು ಮುಂದಾಗಿ ದುಶ್ಚಟಗಳಿಂದ ದೂರಾಗಿ ಎಂದು ಸಲಹೆ ನೀಡಿದರು.

ನಾವದಗಿ ಹಿರೇಮಠದ ಶ್ರೀ ರಾಜೇಂದ್ರ ಒಡೆಯರ ಮಾತನಾಡಿ, ಭಾರತ ದೇವಸ್ಥಾನದಂತೆ. ಇಲ್ಲಿ ದೇವರ ಶಕ್ತಿ ಅಪಾರವಿದೆ. ಇಂತಹ ದೇಶದಲ್ಲಿ ಹಿಂದೂ ಧರ್ಮ ತನ್ನದೇ ಗೌರವದಿಂದ ಮುನ್ನಡೆದಿದೆ. ಭಾರತದಲ್ಲಿ 200 ವರ್ಷಕ್ಕೂ ಮೇಲ್ಪಟ್ಟು ಹಿಮಾಲಯ ಪರ್ವತದಲ್ಲಿ ಋಷಿಮುನಿಗಳು ವಾಸವಾಗಿದ್ದರು ಎಂದರು.

ದೇಶಕ್ಕೆ ಮತ್ತೆ ಮೋದಿ ನಾಯಕತ್ವ ಅವಶ್ಯಕ: ಚಕ್ರವರ್ತಿ ಸೂಲಿಬೆಲೆ

ವಿಶ್ವ ಹಿಂದೂ ಪರಿಷತ್‌ನ ರಾಜ್ಯ ಮಠ ಮಂದಿರಗಳ ಪ್ರಮುಖ ಬಸವರಾಜ ಮಾತನಾಡಿ, ಅನೇಕರು ಹಿಂದೂತ್ವ ಅಳಸಿ ಹಾಕಬೇಕು. ಸನಾತ ಧರ್ಮ ನಾಶ ಮಾಡಲು ಪ್ರಯತ್ನಿಸಿದರೂ ಅವರಿಂದ ಸಾಧ್ಯವಾಗಿಲ್ಲ. ಋಷಿಮುನಿಗಳಿಂದ ನಡೆದುಕೊಂಡು ಬಂದಿರುವ ಹಿಂದೂ ಧರ್ಮ ನಾಶವಾಗದೇ ನಮ್ಮೆಲ್ಲರ ರಕ್ಷಣೆ ಮಾಡುತ್ತಿದೆ ಎಂದರು.

ಈ ಸಮಯದಲ್ಲಿ ಬೆಳಗಾವಿ ವಿಶ್ವ ಹಿಂದೂ ಪರಿಷತ್‌ನ ಸಂಪರ್ಕ ಪ್ರಮುಖ ಶಿವಾನಂದ ನಾಗರಾಳ, ಜಿಲ್ಲಾ ಸಹಕಾರ್ಯದರ್ಶಿ ಸುನೀಲ ಜಮಖಂಡಿ, ಮುದ್ದೇಬಿಹಾಳ ತಾಲೂಕಾ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಶಿವಯೋಗಪ್ಪ ರಾಂಪೂರ, ತಾಳಿಕೋಟೆ ತಾಲೂಕಾ ಅಧ್ಯಕ್ಷ ಪ್ರಮೋದ ಅಗರವಾಲಾ, ಕಾಶಿನಾಥ ಅರಳಿಚಂಡಿ, ಸಮರ್ಥ ಲೋಕರೆ, ಸಿದ್ದೇಶ ಅಗರವಾಲಾ, ಪ್ರಸನ್ನ ಪೂಜಾರಿ, ಚೇತನಸಿಂಗ್ ಹಜೇರಿ, ಚಿದಂಬರ ಕರಮರಕರ, ಸಮರ್ಥ ಸಜ್ಜನ, ಆಕಾಶ ಪಿಂಪಳೆ, ಯಲ್ಲೇಶ ದಾಯಪುಲೆ, ಸಿದ್ದೇಶ ಗೊಟಗುಣಕಿ, ಮುದಕಪ್ಪ ಬಡಿಗೇರ, ಶಿವಶಂಕರ ಹಿರೇಮಠ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಜೈಸಿಂಗ್ ಮೂಲಿಮನಿ, ರಾಜಣ್ಣ ಸೊಂಡೂರ, ಶರಣು ಬಿಳೇಬಾವಿ, ನವೀನ ಗೌಡಗೇರಿ, ಮೊದಲಾದವರು ಪಾಲ್ಗೊಂಡಿದ್ದರು.

click me!