ಬಸವಣ್ಣನ ಪ್ರತಿಮೆ ಭಗ್ನ: ಶಾಂತಿ ಕಾಪಾಡಲು ಮನವಿ

Kannadaprabha News   | Asianet News
Published : Nov 09, 2020, 07:12 AM IST
ಬಸವಣ್ಣನ ಪ್ರತಿಮೆ ಭಗ್ನ: ಶಾಂತಿ ಕಾಪಾಡಲು ಮನವಿ

ಸಾರಾಂಶ

ಜಗಜ್ಯೋತಿ ಬಸವಣ್ಣ ಅವರ ಪ್ರತಿಮೆ ತಡ ರಾತ್ರಿ ಭಗ್ನಗೊಂಡಿದೆ ಎಂಬ ಸುದ್ದಿ ತಿಳಿದಿದೆ.  ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆ. 

ರಾಮದುರ್ಗ (ನ.9): ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಬಿಚಗುಪ್ಪ ಗ್ರಾಮದಲ್ಲಿನ ಜಗಜ್ಯೋತಿ ಬಸವಣ್ಣ ಅವರ ಪ್ರತಿಮೆ ತಡ ರಾತ್ರಿ ಭಗ್ನಗೊಂಡಿದೆ ಎಂಬ ಸುದ್ದಿ ತಿಳಿದಿದೆ.

 ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಮಹಾದೇವಪ್ಪ ಯಾದವಾಡ ಗ್ರಾಮಗಳಲ್ಲಿ ಶಾಂತಿ ಕದಡಲು ಕೆಲ ಸಮಾಜಘಾತುಕ ಶಕ್ತಿಗಳು ಇಂತಹ ಕೃತ್ಯವೆಸಗಿದ್ದಾರೆ. ಆರೋಪಿಗಳನ್ನು ಒಂದು ವಾರದಲ್ಲಿ ಬಂಧಿಸಿ ಶಿಕ್ಷೆಗೆ ಗುರಿಪಡಿಸಬೇಕೆಂದು ಶಾಸಕರು ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಂಚಮಸಾಲಿ ಸ್ವಾಮೀಜಿ ವಿರುದ್ಧ ಪ್ರಮೋದ್ ಮುತಾಲಿಕ್ ಆಕ್ರೋಶ..!

ಜಿಲ್ಲೆಯಲ್ಲಿಯೇ ನಮ್ಮ ತಾಲೂಕು ಶಾಂತಿ, ಸಾಮರಸ್ಯ ಮತ್ತು ಸಹೋದರತ್ವದಡಿ ಎಲ್ಲರೂ ನಮ್ಮವರೆ ಎಂಬ ಬಸವಣ್ಣವರ ತತ್ವದಂತೆ ಜೀವನ ನಡೆಸುತ್ತಿದ್ದಾರೆ. ಆದರೆ, ಇಂತಹ ಘಟನೆ ಸಂಭವಿಸಿದ್ದು ಖಂಡನೀಯ ಎಂದು ವಿಷಾದ ವ್ಯಕ್ತಪಡಿಸಿದರು. ಸಮಾಜದ ಮುಖಂಡರು ಹಾಗೂ ಯುವಕರು ಶಾಂತತೆ ಕಾಪಾಡಿಕೊಳ್ಳಬೇಕೆಂದು ಮನವಿ ಮಾಡಿದರು.

PREV
click me!

Recommended Stories

ಸಿದ್ದರಾಮಯ್ಯ ಹೆಲಿಕಾಪ್ಟರ್‌ ಪ್ರಯಾಣಕ್ಕೆ ರಾಜ್ಯದ ಬೊಕ್ಕಸದಿಂದ ಕೋಟ್ಯಂತರ ಖರ್ಚು!
ಬಸವತತ್ವ ಪ್ರಚಾರಕ, ವಚನ ಶಿಲಾ ಮಂಟಪದ ರೂವಾರಿ ಚನ್ನಬಸವ ಶ್ರೀಗಳು ಲಿಂಗೈಕ್ಯ