ಆರತಕ್ಷತೆಯಲ್ಲಿ ದೇಹದಾನಕ್ಕೆ ಸಹಿ ಮಾಡಿದ ಹೊಸಜೋಡಿ

By Kannadaprabha News  |  First Published Nov 9, 2020, 7:04 AM IST

ಅರತಕ್ಷತೆ ದಿನದಂದೇ ಹೊಸ ಜೋಡಿಯೊಂದು ನಿರ್ಧಾರ ಒಂದನ್ನು ತೆಗೆದುಕೊಂಡಿದೆ.. ಅದೇನದು..?


ಸೋಮವಾರಪೇಟೆ (ನ.09): ಆರತಕ್ಷತೆ ಕಾರ್ಯಕ್ರಮದಲ್ಲಿ ಜೋಡಿಯೊಂದು ಕುಟುಂಬಸ್ಥರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ದೇಹದಾನಕ್ಕೆ ಸಹಿ ಮಾಡಿ ಮಾದರಿಯಾಗಿದ್ದಾರೆ. 

ಸೋಮವಾರಪೇಟೆಯ ಗೌತಮ್, ಅರಕಲಗೂಡುವಿನ ಸುಮನಾ ಅವರ ಆರತಕ್ಷತೆ ಭಾನುವಾರ ನಡೆಯಿತು. ಏ. 26ರಂದು ವಿವಾಹವಾಗಿತ್ತು. ಲಾಕ್‌ಡೌನ್‌ ಕಾರಣದಿಂದ ಆರತಕ್ಷತೆ ಮುಂದೂಡಲ್ಪಟ್ಟು, ಭಾನುವಾರ ನಡೆಯಿತು. 

Tap to resize

Latest Videos

ಕಾರ್ಯಕ್ರಮದಲ್ಲಿ ನೇತ್ರದಾನದ ಬಗ್ಗೆಯೂ ಜಾಗೃತಿ ಕಾರ್ಯ ನಡೆಯಿತು. ಸುಮನಾ ವಿರಚಿತ ಪರಿಣಯ ಕವನ ಸಂಕಲನವೂ ಬಿಡುಗಡೆಗೊಂಡಿತು. 

ಕಾರ್ಯಕ್ರಮಕ್ಕೆ ಬಂದವರಿಗೆ ಒಂದೊಂದು ಸಸಿ, ಪುಸ್ತಕ ವಿತರಿಸಲಾಯಿತು. ಯುವ ಸಮೂಹ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಳ್ಳುವಂತೆ ನವ ದಂಪತಿ ಕರೆ ನೀಡಿದರು. ಸುಮನಾ, ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದು, ಗೌತಮ್‌ ಕೃಷಿಕರಾಗಿದ್ದಾರೆ.

click me!