ರಾಮ ಬಿಜೆಪಿಯ ಸ್ವತ್ತೂ ಅಲ್ಲ, ಕಾಂಗ್ರೆಸ್ ಸ್ವತ್ತೂ ಅಲ್ಲ, ಸಮಾಜದ ಸ್ವತ್ತು. ರಾಮಮಂದಿರ ನಿರ್ಮಾಣದ ಕೆಲಸವನ್ನು ಪ್ರಮಾಣಿಕವಾಗಿ ಮಾಡುತ್ತೇವೆ: ಶಾಸಕ ಬಾಲಕೃಷ್ಣ
ಮಾಗಡಿ(ಜ.14): ರಾಮನಗರ ಶಾಸಕರು ಹಾಗೂ ಸಂಸದ ಡಿ.ಕೆ. ಸುರೇಶ್ ಅವರು ರಾಮನಗರದಲ್ಲಿ 20 ಎಕರೆ ಜಾಗ ಗುರುತಿ ಸುತ್ತಿದ್ದು, ಅಲ್ಲಿರಾಮಮಂದಿರ ದೇವಸ್ಥಾನ ನಿರ್ಮಾಣ ಮಾಡುತ್ತೇವೆ ಎಂದು ಶಾಸಕ ಬಾಲಕೃಷ್ಣ ಹೇಳಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಮ ಬಿಜೆಪಿಯ ಸ್ವತ್ತೂ ಅಲ್ಲ, ಕಾಂಗ್ರೆಸ್ ಸ್ವತ್ತೂ ಅಲ್ಲ, ಸಮಾಜದ ಸ್ವತ್ತು. ರಾಮಮಂದಿರ ನಿರ್ಮಾಣದ ಕೆಲಸವನ್ನು ಪ್ರಮಾಣಿಕವಾಗಿ ಮಾಡುತ್ತೇವೆ ಎಂದು ಅವರು ತಿಳಿಸಿದರು.
ಬಿಜೆಪಿಯವರಿಗೆ ರಾಮನೊಬ್ಬನೇ ದೇವರಾ?: ಸಚಿವ ತಿಮ್ಮಾಪುರ ಕಿಡಿ
ಈ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆ ಸಂಸದರು ಚರ್ಚೆ ಮಾಡಿದ್ದು, ಎರಡು ಎಕರೆ ಜಾಗ ಬದಲು 20 ಎಕರೆ ವಿಶಾಲವಾದ ಶ್ರೀರಾಮನ ನಿರ್ಮಾಣ ಜಾಗದಲ್ಲಿ ದೇವಸ್ಥಾನ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಎಚ್.ಡಿ. ಕುಮಾರಸ್ವಾಮಿ ಅವರ ಸ್ಪರ್ಧೆ ಕುರಿತು ಮಾತನಾಡಿ, ಮೊದಲು ಅವರು ಅಧಿಕೃತ ಘೋಷಣೆ ಮಾಡಲಿ. ಬಳಿಕ ಆ ಬಗ್ಗೆ ನಾನು ಮಾತನಾಡುತ್ತೇನೆ. ಕುಮಾರಸ್ವಾಮಿ ಅವರು ಮಂಡ್ಯದಿಂದ ಸ್ಪರ್ಧೆ ಮಾಡಲು ಸರ್ವೆಮಾಡಿಸಿದ್ದಾರೆ.ಅವರುಬೆಂಗಳೂರು ಗ್ರಾಮಾಂತರಕ್ಕೆ ಬಂದಾಗ ನೋಡೋಣ ಎಂದು ಹೇಳಿದರು.