ಚಿತ್ರದುರ್ಗ: ಫಲಪುಷ್ಪ ಪ್ರದರ್ಶನದಲ್ಲಿ ಅರಳಿದ ರಾಮ ಮಂದಿರ..!

By Girish Goudar  |  First Published Feb 4, 2024, 8:05 PM IST

ಪ್ರತಿ ವರ್ಷದಂತೆ ಈ ವರ್ಷವೂ ತೋಟಗಾರಿಗೆ ಇಲಾಖೆ ವತಿಯಿಂದ ಏರ್ಪಡಿಸುವ ಫಲಪುಷ್ಪ ಪ್ರದರ್ಶನ ಜನರನ್ನು ಕೈ ಬೀಸಿ ಕರೆಯುತ್ತಿದೆ. 
 


ವರದಿ: ಕಿರಣ್.ಎಲ್. ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ(ಫೆ.04): ವಿವಿಧ ಹೂವುಗಳಿಂದಲೇ ಮೂಡಿ ಬಂದಿವೆ ವಿಶೇಷ ಕಲಾಕೃತಿಗಳು. ರಾಮ ಮಂದಿರ, ಚಂದ್ರಯಾನ ಮಾದರಿಯಂತೂ ಪ್ರವಾಸಿಗರ ಅಚ್ಚು ಮೆಚ್ಚು. ಅಷ್ಟಕ್ಕೂ ಈ ಕಲೆ ಅರಳಿರೋದು ಎಲ್ಲಿ ಅನ್ನೋದ್ರಿ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ.

Tap to resize

Latest Videos

undefined

ಎಸ್ ಹೀಗೆ ಹೂವಿನ ಸಿಂಗಾರದಿಂದ ಕಂಗೊಳಿಸುತ್ತಿರುವ ತೋಟಗಾರಿಗೆ ಇಲಾಖೆ ಆವರಣ. ಮತ್ತೊಂದೆಡೆ ಜನರನ್ನ ತನ್ನತ್ತ ಕೈ ಬೀಸಿ ಕರೆಯುತ್ತಿರೋ ರಾಮ ಮಂದಿರ ಮಾದರಿ. ಈ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಚಿತ್ರದುರ್ಗ. ಪ್ರತಿ ವರ್ಷದಂತೆ ಈ ವರ್ಷವೂ ತೋಟಗಾರಿಗೆ ಇಲಾಖೆ ವತಿಯಿಂದ ಏರ್ಪಡಿಸುವ ಫಲಪುಷ್ಪ ಪ್ರದರ್ಶನ ಜನರನ್ನು ಕೈ ಬೀಸಿ ಕರೆಯುತ್ತಿದೆ. ಸತತ ೩೧ನೇ ವರ್ಷದ ಫಲ ಪುಷ್ಪ ಪ್ರದರ್ಶನವನ್ನು ನೋಡಲು ಜನ ಸಾಗರವೇ ಹರಿದು ಬರ್ತಿದೆ. ಅದ್ರಲ್ಲೂ ಹೂವಿನಲ್ಲಿಯೇ ಅರಳಿದ ಅನೇಕ ಕಲೆಗಳನ್ನು ಕಂಡು ಪುಳಕಿತರಾಗ್ತಿರೋ‌ ಜನರು. ತಮಗೆ ಇಷ್ಟ ಪಡುವ ಕಲೆಯ ಮುಂದೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಾ ಎಂಜಾಯ್ ಮಾಡ್ತಿರೋ ಪ್ರವಾಸಿಗರು. ಪ್ರತಿ ಬಾರಿಗಿಂತ ಈ ಬಾರಿ ತುಂಬಾ ವಿಶೇಷವಾಗಿದೆ. ರಾಮ ಮಂದಿರ ಮಾದರಿ, ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧನ ರಚನೆ ಮಾಡಿ ಪ್ರೆಸಿಡೆಂಟ್ ಗೆ ಕೊಡುತ್ತಿರುವ ಮಾದರಿ ಸೇರಿದಂತೆ, ಸಿದ್ದೇಶ್ವರ ಶ್ರೀಗಳು, ಸಿದ್ದಗಂಗಾ ಶ್ರೀಗಳ ಪ್ರತಿಮೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಲೈಟಿಂಗ್ಸ್ ವ್ಯವಸ್ಥೆ ಚೆನ್ನಾಗಿದ್ದು, ಜನರು ಕುಟುಂಬ ಸಮೇತ ಆಗಮಿಸಿ ಎಂಜಾಯ್ ಮಾಡ್ತಿದ್ದಾರೆ ಅಂತಾರೆ ಪ್ರವಾಸಿಗರು.

ಚಿತ್ರದುರ್ಗದಲ್ಲಿ ಬುಡಕಟ್ಟು ಸಂಸ್ಕೃತಿಯ ಮುಳ್ಳಿನ ಗುಡಿಕಟ್ಟಿ ಜಾತ್ರೆ

ಫಲ ಪುಷ್ಪ ಪ್ರದರ್ಶನ ನೋಡೋಕೆ‌ ಬರುವವರಿಗೆ ತುಂಬಾ ಖುಷಿ ಆಗುತ್ತೆ. ಹೂವಿನಿಂದಲೇ ವಿಶೇಷವಾಗಿ ಅಲಂಕಾರ ಮಾಡಿರೋದು ಜನರ ಕಣ್ಮನ ಸೆಳೆಯುತ್ತಿದೆ. ಜ್ಞಾನಪೀಠ ಪ್ರಶಸ್ತಿ ಪಡೆದಿರೋ‌ ಸಾಹಿತಿಗಳ ಪೋಟೋ ಪ್ರದರ್ಶನ ಚೆನ್ನಾಗಿದೆ. ಜನರಿಗೆ ಮಾಹಿತಿ ಊರಣ ತುಂಬಿದೆ. ಈ ರೀತಿಯ ವಿಶೇಷಗಳನ್ನು ನೋಡಲು ರಾಜಧಾನಿಯಂತಹ ಬೆಂಗಳೂರು, ಮೈಸೂರಿಗೆ ಹೋಗಬೇಕು. ಆದ್ರೆ ನಮ್ಮ ಜಿಲ್ಲೆಯಲ್ಲಿಯೇ ಫಲ ಪುಷ್ಪ ಪ್ರದರ್ಶನ ಇಷ್ಟೊಂದು ಗ್ರಾಂಡ್ ಆಗಿ ಆಯೋಜಿಸಿರೋದು ಖುಷಿ ತಂದಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿ,‌ಫಲ ಪುಷ್ಪ ಪ್ರದರ್ಶನವನ್ನು ನೋಡಿ ಕಣ್ತುಂಬಿಕೊಳ್ಳಿ ಎಂದು ಸ್ಥಳೀಯರು ಆಹ್ವಾನಿಸಿದರು.

ಒಂದು ಹೂವಿನ ಗುಚ್ಚವನ್ನು ನೋಡುವುದೇ ಖುಷಿ. ಅಂತದ್ರಲ್ಲಿ ವಿವಿಧ ಹೂವಿನ ರಾಶಿಯಲ್ಲಿಯೇ ಅರಳಿರುವ ಕಲೆಯನ್ನು ನೋಡೊದಂದ್ರೆ ಸುಮ್ನೇನಾ, ಅದೊಂದು ಪ್ರವಾಸಿಗರಿಗೆ ರಸದೌತಣ ಸವಿದಂತೆ ಅಂದ್ರೆ ತಪ್ಪಾಗಲಿಕ್ಕಿಲ್ಲ. ಅಂತಹ ಅನುಭವ ಇಂದು ಕೋಟೆನಾಡಿನ ಜನರಿಗೆ ಸಿಕ್ಕಿದ್ದೇ ಪುಣ್ಯ.

click me!