ಕ್ಷೇತ್ರದ ಜನರ ಕಷ್ಟ ಸ್ಪಂದಿಸುವ ಸಮರ್ಥ ಜನ ನಾಯಕ ರಾಜಣ್ಣ

By Kannadaprabha NewsFirst Published Mar 16, 2024, 10:30 AM IST
Highlights

ಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವ ಹಾಗೂ ಅಭಿವೃದ್ಧಿಗೆ ಶ್ರಮಿಸುವ ಸಮರ್ಥ ಜನ ನಾಯಕ ಕೆ.ಎನ್‌.ರಾಜಣ್ಣ ಎಂದು ವಿಧಾನ ಪರಿಷತ್‌ ಸದಸ್ಯ ಆರ್.ರಾಜೇಂದ್ರ ಅಭಿಪ್ರಾಯಪಟ್ಟರು.

 ಮಧುಗಿರಿ :  ಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವ ಹಾಗೂ ಅಭಿವೃದ್ಧಿಗೆ ಶ್ರಮಿಸುವ ಸಮರ್ಥ ಜನ ನಾಯಕ ಕೆ.ಎನ್‌.ರಾಜಣ್ಣ ಎಂದು ವಿಧಾನ ಪರಿಷತ್‌ ಸದಸ್ಯ ಆರ್.ರಾಜೇಂದ್ರ ಅಭಿಪ್ರಾಯಪಟ್ಟರು.

ಶುಕ್ರವಾರ ತಾಲೂಕಿನ ಕೊಡಿಗೇನಹಳ್ಳಿ ಖಾಸಗಿ ನಿಲ್ದಾಣದಲ್ಲಿ ತಾಪಂನಿಂದ ಆಯೋಜಿಸಿದ್ದ ವಸತಿ ಯೋಜನೆಯ ಕಾರ್ಯಾದೇಶ ಹಕ್ಕು ಪತ್ರ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೃಷಿ ,ರೇಷ್ಮೆ, ತೋಟಗಾರಿಕೆ, ಪಶು ಸಂಗೋಪನಾ, ಆರೋಗ್ಯ ಇತರೆ ಇಲಾಖೆಗಳಿಂದ ಸವಲತ್ತುಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಂಬೇಡ್ಕರ್‌ ಮತ್ತು ಬಸವ ವಸತಿ ಯೋಜನೆಯಡಿ 1510 ಸೂರಿಲ್ಲದ ಬಡ ಫಲಾನುಭವಿಗಳಿಗೆ ಮನೆಗಳನ್ನು ಮೊದಲ ಬಾರಿ ವಿತರಣೆ ಮಾಡಲಾಗುತ್ತಿದೆ. ಪೂರ್ವದಲ್ಲಿ ನಮ್ಮ ತಂದೆ ರಾಜಣ್ಣ ಮಧುಗಿರಿ ತಾಲೂಕನ್ನು ಗುಡಿಸಲು ಮುಕ್ತ ತಾಲೂಕು ಮಾಡುತ್ತೇನೆಂದು ಭರವಸೆ ನೀಡಿದ್ದರು. ಅದರಂತೆ ಸಾಕಷ್ಟು ಮನೆ ತರುವ ಜೊತೆಗೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಸಂಸತ್‌ ಚುನಾವಣೆ ಬಳಿಕ 4 ಸಾವಿರ ಮನೆಗಳನ್ನು ತಂದು ಬಡವರಿಗೆ ಹಂಚುವ ಗುರಿ ಇದೆ ಎಂದರು.

ರಾಜ್ಯದಲ್ಲಿ ಸಿಎಂ ಸಿದ್ದಾರಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ 8 ತಿಂಗಳಲ್ಲಿ ನಮ್ಮ ತಾಲೂಕಿನಲ್ಲಿ 400 ಕೋಟಿಗೂ ಅಧಿಕ ಕೆಲಸ ಕಾರ್ಯಗಳು ಪ್ರಗತಿಯಲ್ಲಿವೆ. ಕೊಡಿಗೇನಹಳ್ಳಿ ಹೋಬಳಿಯಲ್ಲೇ 90 ಕೋಟಿಗೂ ಅಧಿಕ ಕಾಮ ಗಾರಿಗಳು ನಡೆಯುತ್ತಿವೆ ಎಂದರು.

ಕೊಡಿಗೇನಹಳ್ಳಿಗೆ ಡಿಗ್ರಿ ಕಾಲೇಜು--

ಕೊಡಿಗೇನಹಳ್ಳಿ ಹೋಬಳಿ ವಿದ್ಯಾರ್ಥಿಗಳು ಡಿಗ್ರಿ ಓದಲು ನಗರ ಪ್ರದೇಶಗಳಿಗೆ ತೆರಳುತ್ತಿದ್ದರು. ಕೊಡಿಗೇನಹಳ್ಳಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾರಂಭಿಸಲು ರಾಜಣ್ಣ ಸರ್ಕಾರದಿಂದ ಮಾನ್ಯತೆ ದೊರಕಿಸಿ ಕೊಟ್ಟಿದ್ದಾರೆ. ಸದ್ಯಕ್ಕೆ ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪ್ರಾರಂಭ ಮಾಡಿ ನಂತರ 3 ಎಕರೆ ಜಾಗದಲ್ಲಿ ಸ್ವಂತ ಕಟ್ಟಡ ಕಟ್ಟಿ ಶಾಸಕರೆ ಲೋಕಾರ್ಪಣೆ ಮಾಡುವರು ಎಂದರು.

2013 ರಿಂದ 2018ರ ನಡುವೆ ರಾಜಣ್ಣ ಶಾಕರಾಗಿದ್ದಾಗ 16,450 ಮನೆಗಳನ್ನು ಬಡವರಿಗೆ ಮನೆ ತಂದು ಕೊಟ್ಟಿದ್ದರು. ಪ್ರಸ್ತುತ ಶಾಸಕರ ಕೈಬಲ ಪಡಿಸಲು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಎಸ್‌.ಪಿ.ಮುದ್ದಹನುಮೇಗೌಡರಿಗೆ 1 ಲಕ್ಷಕ್ಕೂ ಅಧಿಕ ಮತ ಹಾಕುವ ಮೂಲಕ ಅಭಿವೃದ್ಧಿಗೆ ಶಕ್ತಿ ನೀಡಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ, ತಹಸೀಲ್ದಾರ್‌ ಸಿಬ್ಗತ್‌ ವುಲ್ಲಾ ,ಇಒ ಶಶಿಧರ್‌, ಎಡಿಒ ಮಧು ಸೂದನ್‌, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಟಿ.ಲಕ್ಷ್ಮೀನರಸಯ್ಯ, ಅರಣ್ಯ ಇಲಾಖೆ ಅಧಿಕಾರಿ ಸುರೇಶ್‌, ಮುತ್ತುರಾಜ್‌, ವಕೀಲರ ಸಂಘದ ಅಧ್ಯಕ್ಷ ಪಿ.ಸಿ.ಕೃಷ್ಣಾರೆಡ್ಡಿ, ಸಿಡಿಪಿಒ ಕಮಲಾ ಗ್ರಾಪಂ ಅಧ್ಯಕ್ಷೆ ಮಂಜುಳಾ ಕೃಷ್ಣಪ್ಪ, ಪಿಡಿಒ ಚಿರಂಜೀವಿ, ಕೃಷಿ ಇಲಾಖೆ ಡಿಡಿ ಚಂದ್ರಕುಮಾರ್‌, ಎಡಿಎಸ್ ಹನುಮಂತರಾಯಪ್ಪ, ಬೆಸ್ಕಾಂ ಎಇಇ ಕೃಷ್ಣಮೂರ್ತಿ, ಕೆಎಂಎಫ್‌ ನಿರ್ದೇಶಕ ಮೈದನಹಳ್ಳಿ ಕಾಂತರಾಜು ,ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಜಿ.ಜೆ.ರಾಜಣ್ಣ, ನಿರ್ದೇಶಕ ಬಿ.ನಾಗೇಶ್‌ ಬಾಬು, ಕೆಪಿಸಿಸಿ ಸದಸ್ಯ ಮಲ್ಲಿಕಾರ್ಜುನಯ್ಯ, ಬ್ಲಾಕ್‌ ಕಾಂಗ್ರೆಸ್ ಆದಿನಾರಾಯಣರೆಡ್ಡಿ, ಪುರಸಭೆ ಮಾಜಿ ಅಧ್ಯಕ್ಷ ಎಂ.ಕೆ.ನಂಜುಂಡಯ್ಯ , ಮುಖಂಡರಾದ ಕೆ.ವಿ.ವೆಂಕಟೇಶ್‌, ಶಾಮೀರ್‌, ಸಂಜೀವಗೌಡ, ಜೆ.ಡಿ.ವೆಂಕಟೇಶ್‌, ತಿಮ್ಮಾರೆಡ್ಡಿ , ಶ್ರೀನಿವಾಸಮೂರ್ತಿ ಸೇರಿ ಇತರರು ಇದ್ದರು.

click me!