ಶಿವಶರಣರಿಂದ ಆರೋಗ್ಯ ಪೂರ್ಣ ಸಮಾಜ ಕಟ್ಟಲು ಶ್ರಮ : ಎಂ. ಬಸವರಾಜಪ್ಪ

By Kannadaprabha News  |  First Published Jan 30, 2024, 9:00 AM IST

ಹನ್ನೆರಡನೇ ಶತಮಾನದ ಶಿವಶರಣರು ಬಸವಣ್ಣನವರ ನೇತೃತ್ವದಲ್ಲಿ ಅನುಭವ ಮಂಟಪ ಸ್ಥಾಪಿಸಿ ಸಮಾಜದಲ್ಲಿ ಮನೆಮಾಡಿದ್ದ ಅನಿಷ್ಠ ಪದ್ಧತಿಗಳನ್ನು ಹೋಗಲಾಡಿಸಿ ಆರೋಗ್ಯ ಪೂರ್ಣ ಸಮಾಜ ಕಟ್ಟಲು ಶ್ರಮಿಸಿದ್ದರು ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಎಂ. ಬಸವರಾಜಪ್ಪ ತಿಳಿಸಿದರು.


 ತಿಪಟೂರು :  ಹನ್ನೆರಡನೇ ಶತಮಾನದ ಶಿವಶರಣರು ಬಸವಣ್ಣನವರ ನೇತೃತ್ವದಲ್ಲಿ ಅನುಭವ ಮಂಟಪ ಸ್ಥಾಪಿಸಿ ಸಮಾಜದಲ್ಲಿ ಮನೆಮಾಡಿದ್ದ ಅನಿಷ್ಠ ಪದ್ಧತಿಗಳನ್ನು ಹೋಗಲಾಡಿಸಿ ಆರೋಗ್ಯ ಪೂರ್ಣ ಸಮಾಜ ಕಟ್ಟಲು ಶ್ರಮಿಸಿದ್ದರು ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಎಂ. ಬಸವರಾಜಪ್ಪ ತಿಳಿಸಿದರು.

ತಾಲೂಕಿನ ಕೆ.ಬಿ. ಕ್ರಾಸ್‌ನ ಗೋಡೆಕೆರೆ ಶ್ರೀಮದ್ ರಂಭಾಪುರಿ ವಿದ್ಯಾಸಂಸ್ಥೆಯಲ್ಲಿ ತಾಲೂಕು ಪರಿಷತ್ತು, ಯುವ ಘಟಕ, ಕದಳಿ ಮಹಿಳಾ ವೇದಿಕೆ ವತಿಯಿಂದ ಸಿದ್ಧರಾಮ ಜಯಂತಿ, ವಚನ ಗಾಯನ ಮತ್ತು ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

Latest Videos

undefined

ದ ಮೂಲಕ ಸಾವಿರಾರು ಶರಣರು ಆಧ್ಯಾತ್ಮ ಚಿಂತನೆಗಳ ಮೂಲಕ ಸಮಾಜ ಕಟ್ಟುವ ಕೆಲಸ ಮಾಡಿ ಲಕ್ಷಾಂತರ ವಚನಗಳನ್ನು ಜನಸಾಮಾನ್ಯರಿಗೆ ತಿಳಿಯುವ ರೀತಿಯಲ್ಲಿ ಬರೆದು ಸಮಾಜಮುಖಿ ಚಿಂತನೆಗಳನ್ನು ಅವುಗಳಲ್ಲಿ ಅಡಕ ಮಾಡಿ ವಚನ ಸಾಹಿತ್ಯ ರಚಿಸಿದರು. ಈ ವಚನಗಳು ಸಾಹಿತ್ಯವು ಇಂದಿಗೂ ನಮ್ಮ ಸಮಾಜಕ್ಕೆ ದಾರಿದೀಪವಾಗಿವೆ. ವಚನಗಳ ಮೂಲಕ ಮಾನವನ ಬದುಕಿನ ಸಾರ್ಥಕತೆ ಹೇಗಿರಬೇಕೆಂಬುದನ್ನು ತಿಳಿಸಿಕೊಟ್ಟವರು ಶರಣರು. ಇಂತಹ ಶರಣರ ವಚನ ಸಾಹಿತ್ಯವನ್ನು ಯುವಪೀಳಿಗೆ ಅಧ್ಯಯನ ಮಾಡುವ ಮೂಲಕ ಉತ್ತಮ ವ್ಯಕ್ತಿಗಳಾಗಿ ಸಮಾಜಕ್ಕೆ ಸೇವೆ ಸಲ್ಲಿಸಬೇಕು. ತಾ. ಶಸಾಪ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡು ಮುನ್ನಡೆಯುತ್ತಿರುವುದು ಸ್ವಾಗತಾರ್ಹ ಎಂದರು.

ಶಸಾಪ ಜಿಲ್ಲಾ ಉಪಾಧ್ಯಕ್ಷ ರವೀಂದ್ರನಾಥ ಠಾಕೂರ್ ಮಾತನಾಡಿ, ಯುವಪೀಳಿಗೆ ಶರಣರಂತೆ ನಿಸ್ವಾರ್ಥವಾಗಿ ಕಾಯಕದಲ್ಲಿ ತೊಡಗಿಸಿಕೊಂಡು ಸಮಾಜ ತಿದ್ದುವ ಕೆಲಸ ಮಾಡಬೇಕು. ಸಿದ್ಧರಾಮೇಶ್ವರರು ಪಶುಪಕ್ಷಿಗಳು ಸೇರಿದಂತೆ ಜೀವರಾಶಿಗಳಿಗೆಲ್ಲಾ ಅನುಕೂಲವಾಗಲೆಂದು ಕೆರೆಕಟ್ಟೆ, ಕಲ್ಯಾಣಿ, ಉದ್ಯಾನವನಗಳನ್ನು ಕಟ್ಟಿದರು. ಜೊತೆಗೆ ದೇವಾಲಯಗಳನ್ನು ನಿರ್ಮಿಸಿ ಅಜ್ಞಾನದಲ್ಲಿದ್ದ ಜನರಿಗೆ ಜ್ಞಾನದ ಬೆಳಕನ್ನ ನೀಡಿದರು. ಕಾಯಕದಿಂದ ಕಾಯಶುದ್ಧಿ, ಮನಶುದ್ಧಿಯಾಗುತ್ತದೆ, ನಿರ್ಮಲ ನೆಮ್ಮದಿ ಸಿಗುತ್ತದೆಂಬ ತತ್ವವನ್ನು ಬಿತ್ತರಿಸಿದರು. ವಿದ್ಯಾರ್ಥಿಗಳಾದ ನೀವು ಶರಣರ ಆದರ್ಶಗಳನ್ನು ಮೈಗೂಡಿಸಿಕೊಂಡು ಕಾಯಕದಲ್ಲಿ ನಿರತರಾಗಬೇಕೆಂದರು.

ಅಧ್ಯಕ್ಷತೆ ವಹಿಸಿದ್ದ ಶಸಾಪ ಜಿಲ್ಲಾ ಅಧ್ಯಕ್ಷ ವಿದ್ವಾನ್ ಎಂ.ಜಿ. ಸಿದ್ದರಾಮಯ್ಯ ಮಾತನಾಡಿ, ಸಿದ್ಧರಾಮರ ಕಾಯಕ ತತ್ವ ಅಳವಡಿಸಿಕೊಳ್ಳುವ ಜೊತೆಗೆ ಆತನ ಶಿವಯೋಗ ಸಾಧನೆಯನ್ನೂ ಅಳವಡಿಸಿಕೊಂಡು ಪರಿಪೂರ್ಣ ಮಾನವರಾಗಬೇಕೆಂದರು.

ಶಸಾಪ ತಾಲೂಕು ಅಧ್ಯಕ್ಷ ಕೆ.ಎಂ. ಪರಮೇಶ್ವರಯ್ಯ ಮಾತನಾಡಿ, ಶಿವಯೋಗಿಶ ಸಿದ್ಧರಾಮೇಶ್ವರರು ಕಾಯಕ ಹಾಗೂ ಶಿವಯೋಗದ ಜೊತೆಗೆ ಸಮಾಜದಲ್ಲಿ ನೈತಿಕ ಮೌಲ್ಯಗಳಿಗೆ ಒತ್ತು ಕಟ್ಟು ಮೌಲಿಕ ವಚನಗಳ ರಚನೆ ಮಾಡಿ ವಚನಕಾರ ಸಿದ್ಧರಾಮ ಎಂಬ ಹೆಸರನ್ನೂ ಪಡೆದರು. ಕಲ್ಯಾಣ ಕ್ರಾಂತಿಯ ನಂತರ ಬೇರೆ ಬೇರೆ ಕಡೆ ಸಂಚರಿಸಿ ಶರಣ ಧರ್ಮ ಪ್ರಚುರ ಪಡಿಸಿ ವಚನಗಳ ಸಂರಕ್ಷಕರು ಆದರು ಎಂದು ಸಿದ್ಧರಾಮ ಕಾಯಕ, ಜೀವನ ಸಾಧನೆ ಬಗ್ಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಶಸಾಪ ಯುವ ಘಟಕದ ಅಧ್ಯಕ್ಷ ಡಾ. ಎಲ್.ಎಂ. ವೆಂಕಟೇಶ್, ಸಾಹಿತಿ ದಿಬ್ಬದಹಳ್ಳಿ ಶ್ಯಾಮಸುಂದರ್‌, ದತ್ತಿದಾನಿಗಳಾದ ಎಸ್. ಚನ್ನಬಸವಯ್ಯ, ಎಸ್. ದಕ್ಷಿಣಾಮೂರ್ತಿ, ವಿಜಯಕುಮಾರ್, ಮುಖ್ಯಶಿಕ್ಷಕ ಸಿ.ಎಂ. ನವೀನ್, ಕಸಾಪ ಕಾರ್ಯದರ್ಶಿ ಮಂಜಪ್ಪ, ವಿದ್ಯಾಸಂಸ್ಥೆ ಅಧ್ಯಕ್ಷ ಕೆ.ಜಿ. ಸದಾಶಿವಯ್ಯ, ಚಿದಾನಂದ, ಪ್ರಭು ಸೇರಿದಂತೆ ವಿದ್ಯಾರ್ಥಿಗಳು, ಶ್ರೀಮಠದ ಭಕ್ತರು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

click me!