ತಾಲೂಕಿನ ಕಬಿನಿ ಜಲಾಶಯದಿಂದ ತಮಿಳುನಾಡಿಗೆ ನೀರನ್ನು ಬಿಡುತ್ತಿರುವುದನ್ನು ಖಂಡಿಸಿ, ಬಿಜೆಪಿ ರೈತ ಮೋರ್ಚಾ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಿ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ನಡೆಯಿತು.
ಎಚ್.ಡಿ. ಕೋಟೆ : ತಾಲೂಕಿನ ಕಬಿನಿ ಜಲಾಶಯದಿಂದ ತಮಿಳುನಾಡಿಗೆ ನೀರನ್ನು ಬಿಡುತ್ತಿರುವುದನ್ನು ಖಂಡಿಸಿ, ಬಿಜೆಪಿ ರೈತ ಮೋರ್ಚಾ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಿ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ನಡೆಯಿತು.
ರೈತ ಮೋರ್ಚಾ ಮತ್ತು ತಾಲ್ಲೂಕು ಮಂಡಲ ಬಿಜೆಪಿ ವತಿಯಿಂದ ಬೀಚನಹಳ್ಳಿ ಅತಿಥಿ ಗೃಹದಿಂದ ಹೊರಟ ಪ್ರತಿಭಟನೆಯು ಜಲಾಶಯದ ಮುಂಭಾಗವಿರುವ ಹುತಾತ್ಮ ಗುರುಸ್ವಾಮಿ ಅವರ ಪ್ರತಿಮೆವರೆಗೆ ತೆರಳಿ, ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಜಲಾಶಯಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು.
ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಮುತ್ತಿಗೆ ಹಾಕುವವರನ್ನು ತಡೆದು ಬಂಧಿಸಿದರು. ನಂತರ ಬೀಚನಹಳ್ಳಿ ಅತಿಥಿ ಗೃಹಕ್ಕೆ ಕರೆದುಕೊಂಡು ಹೋಗಿ ಆ ಬಳಿಕ ಬಿಡುಗಡೆಗೊಳಿಸಿದರು.
ಬಿಡುಗಡೆ ಬಳಿಕ ಬಿಜೆಪಿ ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಡಾ. ನವೀನ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಜಲಾಶಯಗಳಿಂದ ತಮಿಳುನಾಡಿಗೆ ಕದ್ದುಮುಚ್ಚಿ ನೀರನ್ನು ಬಿಡುತ್ತಿದೆ. ಬಿಜೆಪಿ ಸರ್ಕಾರವು ಹಿಂದೆ ಅಸ್ತಿತ್ವದಲ್ಲಿದ್ದಾಗ ಮೇಕೆದಾಟು ಯೋಜನೆಯ ಬಗ್ಗೆ ಕಾಲ್ನಡಿಗೆ ಜಾಥವನ್ನು ಮಾಡಿದ್ದರು. ಅದು ಕಾಲ್ನಡಿಗೆಯ ಜಾಥಾವನ್ನು ತಿಂದದನ್ನು ಕರಗಿಸಿಕೊಳ್ಳುವ ಒಂದು ವಾಕಿಂಗ್ ಆಗಿತ್ತು. ಇಂದು ಅವರದೇ ಸರ್ಕಾರ ಅಸ್ತಿತ್ವದಲ್ಲಿದೆ, ಆದರೂ ಸಹ ಮೇಕೆದಾಟು ಯೋಜನೆಯ ಬಗ್ಗೆ ಬಾಯಿ ಬಿಡುತ್ತಿಲ್ಲದಿರುವುದು ಹಾಸ್ಯಾಸ್ಪದ ಸಂಗತಿ ಎಂದು ಲೇವಡಿ ಮಾಡಿದರು. ಮೇಕೆದಾಟು ಜಾಥಾ ವೇಳೆ ರಾಜ್ಯ ಸರ್ಕಾರದ ಅನುಮತಿ ಇದ್ದರೆ ಸಾಕು ಅನುಷ್ಠಾನ ತರಬಹುದು ಎಂದು ಹೇಳಿದ್ದ ಕಾಂಗ್ರೆಸ್, ಇಂದು ಅಧಿಕಾರಿದಲ್ಲಿದ್ದರೂ ಸಹ ಕಣ್ಮುಚ್ಚಿ ಕುಳಿತಿದೆ ಎಂದರು.
ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್ ಮಾತನಾಡಿ, ರಾಜ್ಯ ರೈತರನ್ನು ಎದುರಾಕಿಕೊಂಡು ನೀರನ್ನು ಇದೇ ರೀತಿ ಬಿಡುವುದನ್ನು ಮುಂದುವರಿಸಿದರೆ ಯಾವುದೇ ಕಾರಣಕ್ಕೂ ರೈತ ಕ್ಷಮಿಸಲಾರ, ರೈತ ಧಂಗೆ ಏಳುವ ದಿನಗಳು ದೂರವಿಲ್ಲ ಎಂದರು.
ಕಬಿನಿ ಎಇ ಚಂದ್ರಶೇಖರ್ ಅವರ ಮೂಲಕ ಕಬಿನಿ ಬಿಡದಂತೆ ಮುಖ್ಯಮಂತ್ರಿಗಳಿಗೆ ಮನಿವಿ ಸಲ್ಲಿಸಿದರು.
ರೈತ ಮೋರ್ಚಾ ಜಿಲ್ಲಾಧ್ಯಕ್ಷ ರಮೇಶ್ ಕುಮಾರ್, ಮಂಡಲ ಅಧ್ಯಕ್ಷ ಗುರುಸ್ವಾಮಿ, ಜಿಪಂ ಮಾಜಿ ಸದಸ್ಯ ವೆಂಕಟಸ್ವಾಮಿ, ಮಂಡಲ ಮಾಜಿ ಅಧ್ಯಕ್ಷ ಗಿರೀಶ್, ಮಾದಾಪುರ ನಂದೀಶ್, ಶಿವರಾಜಪ್ಪ, ಟಿಎಪಿಸಿಎಂಎಸ್ ಅಧ್ಯಕ್ಷ ಮೊತ್ತ ಬಸವರಾಜಪ್ಪ, ಸತೀಶ್ ಬಹದ್ದೂರ್, ಚನ್ನಪ್ಪ, ಮಹದೇವು, ಲೋಕೇಶ್, ಕೆಂಡಗಣ್ಣಸ್ವಾಮಿ, ಗುರುಸ್ವಾಮಿ, ಕೆಂಡಗಣ್ಣಸ್ವಾಮಿ, ಜೆ.ಪಿ. ಶಿವರಾಜು, ಸೋಮಾಚಾರ್, ಮುರಳಿ, ಅನಿಲ್, ನಾಗೇಶ್, ಪಪಂ ಅಧ್ಯಕ್ಷೆ ರಾಧಿಕಾ ಶ್ರೀನಾಥ್, ಶಿವಕುಮಾರ್, ರೇಚಣ್ಣ ಇದ್ದರು.
ಪೊಲೀಸ್ ಇಲಾಖೆಯಿಂದ ಜಲಾಶಯಕ್ಕೆ ಸೂಕ್ತ ಬಂದೋಬಸ್ತ್ ಮಾಡಲಾಗಿತ್ತು.
ಬಿಜೆಪಿ ಜೊತೆ ವಿಲೀನ ಆಗಿದ್ಯಾ
ಮಂಡ್ಯ(ಅ.04): ಜೆಡಿಎಸ್ ಪಕ್ಷ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದೆಯೇ ವಿನಃ ವಿಲೀನ ಮಾಡಿಲ್ಲ. ನಮ್ಮ ಹೊಂದಾಣಿಕೆ ಲೋಕಸಭಾ ಚುನಾವಣೆಗಷ್ಟೇ ಸೀಮಿತ ಎಂದು ಮಾಜಿ ಶಾಸಕ ಡಾ.ಕೆ.ಅನ್ನದಾನಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮಂಗಳವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡರೂ ನಮ್ಮ ಪಕ್ಷದ ಸೆಕ್ಯುಲರ್ ಸಿದ್ಧಾಂತ ಇದ್ದೇ ಇರುತ್ತದೆ. ಅದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಮುಸಲ್ಮಾನರು ಆತಂಕಗೊಳ್ಳುವುದು ಬೇಡ. ನಮ್ಮ ಜೊತೆಯಲ್ಲೇ ಇರಿ. ನಿಮ್ಮನ್ನ ರಕ್ಷಣೆ ಮಾಡೋದಕ್ಕೆ ದೇವೇಗೌಡರು, ಕುಮಾರಸ್ವಾಮಿ ಇದ್ದಾರೆ. ಕಾಂಗ್ರೆಸ್‌ನವರು ಅಧಿಕಾರಕ್ಕೆ ಬಂದ ತಕ್ಷಣ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ ಕೊಡುವುದಾಗಿ ನಂಬಿಸಿದ್ದರು. ಆದರೆ, ಇದುವರೆಗೂ ಮೀಸಲಾತಿ ಕೊಡಲಿಲ್ಲ. ಮುಸಲ್ಮಾನರು ಕಾಂಗ್ರೆಸ್ ಪರವಾಗಿಲ್ಲ ಎಂದರು.
ಜೆಡಿಎಸ್ ಜಾತ್ಯಾತೀತ ಪಕ್ಷ, ಈಗ ಜನತಾನೂ ಇಲ್ಲ, ಜನರೂ ಇಲ್ಲ: ಹೆಚ್‌ಡಿಕೆ ವಿರುದ್ಧ ಹರಿಹಾಯ್ದ ಪ್ರಿಯಾಂಕ್ ಖರ್ಗೆ
ಮುಸಲ್ಮಾನರನ್ನು ನಂಬಿಕೊಂಡು ರಾಜಕೀಯ ಮಾಡುತ್ತಿಲ್ಲ ಎಂಬ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಕೇಳಿದಾಗ, ಚುನಾವಣಾ ರಾಜಕಾರಣದಲ್ಲಿ ಎಲ್ಲ ಸಮುದಾಯಗಳು ಬೇಕು. ಕಸ ಗುಡಿಸುವವರಿಂದ ಹಿಡಿದು ಮೇಲ್ಮಟ್ಟದ ಸಮಾಜವೂ ಬೇಕು. ಎಲ್ಲಾ ಸಮಾಜವನ್ನು ಕಟ್ಟಿಕೊಂಡು ರಾಜಕೀಯ ಮಾಡಬೇಕು ಎಂಬ ಅರ್ಥದಲ್ಲಿ ಕುಮಾರಸ್ವಾಮಿ ಹೇಳಿದ್ದಾರೆ. ಬೇರೆ ಅರ್ಥದಲ್ಲಿ ಹೇಳಿಕೆ ನೀಡಿಲ್ಲ ಎಂದು ಸಮರ್ಥಿಸಿಕೊಂಡರು.
ಕುಮಾರಸ್ವಾಮಿ ಪ್ಯಾಂಟ್ ಒಳಗೆ ಚಡ್ಡಿ ಇದೆ ಎಂದು ಗೊತ್ತಾಯ್ತು ಎಂಬ ಜಮೀರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅನ್ನದಾನಿ, 2006ರಲ್ಲಿ ಜಮೀರ್ ಖಾಕಿ ಚಡ್ಡಿ ಹಾಕಿಕೊಂಡು ಬಿಜೆಪಿ ಜೊತೆ ಮಂತ್ರಿ ಆಗಿದ್ದಿರಾ. ಈಗ ಕುಮಾರಸ್ವಾಮಿ ಖಾಕಿ ಚಡ್ಡಿ ಬಗ್ಗೆ ಮಾತನಾಡುತ್ತೀರಿ. ಆಗ ನಿಮ್ಮ ಸಿದ್ಧಾಂತ ಎಲ್ಲಿ ಹೋಗಿತ್ತು ಎಂದು ಟೀಕಿಸಿದರು.
ಕಾಂಗ್ರೆಸ್‌ಗೆ ಹೆದರಿ ಜೆಡಿಎಸ್ ಜೊತೆ ಬಿಜೆಪಿ ಹೊಂದಾಣಿಕೆ: ಸಚಿವ ಶರಣಬಸಪ್ಪ ದರ್ಶನಾಪೂರ್
ಬಿಜೆಪಿ ಜೊತೆ ಮೈತ್ರಿಗೆ ದೇವೇಗೌಡನ್ನ ಹಿಂಸೆ ಕೊಟ್ಟು ಒಪ್ಪಿಸಿದ್ದಾರೆಂಬ ಟೀಕೆಗೆ, ದೇವೇಗೌಡರು ರಾಜಕೀಯ ಭಂಡಾರ, ದೊಡ್ಡ ವಿಶ್ವವಿದ್ಯಾಲಯ. ಹಿಂಸೆ ತೆಗೆದುಕೊಂಡು ಮೈತ್ರಿ ಒಪ್ಪಿಕೊಳ್ಳುವವರಲ್ಲ. ಯಾವ ಸಮಯಕ್ಕೆ ಏನು ನಿರ್ಧಾರ ತೆಗೆದುಕೊಳ್ಳಬೇಕೋ ಅದನ್ನೇ ತೆಗೆದುಕೊಳ್ಳುತ್ತಾರೆ. ಈ ದೇಶ ಆಳಿದವರಿಗೆ ಏನು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಿಸಿಕೊಳ್ಳುವ ಅಗತ್ಯವಿಲ್ಲ. ಅವರ ನಿರ್ದೇಶನದಲ್ಲೇ ಪಕ್ಷವನ್ನು ಮುನ್ನಡೆಸಲಾಗುತ್ತಿದೆ ಎಂದರು.