ಜು.26ರವರೆಗೆ ಬೆಂಗಳೂರಿನಲ್ಲಿ ಚಳಿಗಾಳಿ, ಮಳೆ

By Kannadaprabha NewsFirst Published Jul 21, 2021, 10:25 AM IST
Highlights
  •  ನಗರದಲ್ಲಿ ಮಂಗಳವಾರ ಹಲವು ಕಡೆಗಳಲ್ಲಿ ತುಂತುರು ಮಳೆ 
  • ತುಂತುರು ಮಳೆ ಸುರಿದಿದ್ದು ಇಡೀ ದಿನ ಚಳಿಯ ವಾತಾವರಣ
  •  ನಗರದಾದ್ಯಂತ ತಂಪು ಗಾಳಿ ಬೀಸುವಿಕೆ ವಾತಾವರಣ

ಬೆಂಗಳೂರು (ಜು.21): ನಗರದಲ್ಲಿ ಮಂಗಳವಾರ ಹಲವು ಕಡೆಗಳಲ್ಲಿ ತುಂತುರು ಮಳೆ ಸುರಿದಿದ್ದು ಇಡೀ ದಿನ ಚಳಿಯ ವಾತಾವರಣ ಕಂಡು ಬಂತು. 

ಬೆಳಗ್ಗೆ ಆಗಾಗ ಬಿಸಿಲಿನ ದರ್ಶನವಾದರೂ ಕೂಡ ನಗರದಾದ್ಯಂತ ತಂಪು ಗಾಳಿ ಬೀಸುವಿಕೆ ಹೆಚ್ಚಾಗಿತ್ತು. ರಾತ್ರಿ ವೇಳೆಗೆ ಯಲಹಂಕ ಮಹದೇವಪುರ  ಹಾಗೂ ದಾಸರಹಳ್ಳಿ ವಲಯದಲ್ಲಿ ಕೆಲವೆಡೆ ಮಳೆ ತುಸು ಜೋರಾಗಿತ್ತು. 

ಕರಾವಳಿ, ಮಲೆನಾಡಲ್ಲಿ ಭಾರೀ ಮಳೆ: ಗುಡ್ಡಕುಸಿತ

ಜೆಪಿ ಪಾರ್ಕ್, ನಾಗೇನಹಳ್ಳಿ, ವಿದ್ಯಾರಣ್ಯಪುರ, ದೊಡ್ಡಬೊಮ್ಮಸಂದ್ರ, ಕುಡಿಗೆಹಳ್ಳಿ, ಬಸವನಪುರ, ಹೂಡಿ, ಹೊರಮಾವು ಸೇರಿದಂತೆ ಅನೇಕ ಕಡೆ  ಹೆಚ್ಚು ಮಳೆಯಾಗಿದೆ. ಎಲ್ಲಿಯೂ ಧಾರಾಕಾರ ಮಳೆ ಬಿದ್ದಿಲ್ಲ.

ಅರಬ್ಬಿ ಸಮುದ್ರ ಹಾಗು ಬಂಗಾಳಕೊಲ್ಲಿಯಲ್ಲಿ ಉಂಟಾದ ಹವಾಮಾನ ವೈಪರೀತ್ಯದಿಂದ ತಾಪಮಾನ ಕಡಿಮೆ ಆಗಿ ಚಳಿಗಾಳಿ ಹೆಚ್ಚಾಗಿದೆ. ಚು.24ರವರೆಗೆ ಇದೇ ರೀತಿ ತುಂತು ಮಳೆ ಮೋಡ ಕವಿದ ವಾತಾವರಣ ಇರಲಿದೆ. 

click me!