ಕೈಗೆ ಬಂದ ತುತ್ತು ಬಾಯಿಗಿಲ್ಲ : ಕಂಗಾಲಾದ ಅನ್ನದಾತ

By Kannadaprabha NewsFirst Published Sep 3, 2020, 8:36 AM IST
Highlights

ಇಷ್ಟು ದಿನ ಮಳೆ ಇಲ್ಲದೇ ಕಂಗಾಲಾಗಿದ್ದ ಅನ್ನದಾತರು ಇದೀಗ ಮಳೆಯಿಂದ ಕಂಗಾಲಾಗಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

ಪಾವಗಡ (ಸೆ.03): ಕಳೆದ ಎರಡು ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿದ್ದ ಪರಿಣಾಮ ಕಟಾವು ಮಾಡಿ ಜಮೀನಿನಲ್ಲಿಯೇ ಬಿಟ್ಟಶೇಂಗಾ ಬೆಳೆ ಸಂಪೂರ್ಣ ನಷ್ಕಕೀಡಾಗಿದ್ದು, ಇದರಿಂದ ತಾಲೂಕಿನ ಬಹುತೇಕ ರೈತರು ಕಂಗಾಲಾಗಿದ್ದಾರೆ.

ಕಳೆದ ಎರಡು ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿದ್ದು ತಾಲೂಕಿನ ಕಸಬಾ ಮತ್ತು ನಿಡಗಲ್‌ ಹೋಬಳಿ ವ್ಯಾಪ್ತಿಗಳ ಬಹುತೇಕ ಕೆರೆಗಳಿಗೆ ನೀರು ಬಂದಿದ್ದು ಹಳ್ಳಕೊಳ್ಳಗಳಲ್ಲಿ ನೀರು ಸಂಗ್ರಹವಾಗಿ ಭರ್ತಿಯಾಗಿ ಹರಿಯುತ್ತಿವೆ. ಈಗಾಗಲೇ ಕಟಾವು ಮಾಡಿದ ಶೇಂಗಾ ಬೆಳೆ ನಷ್ಟಕ್ಕಿಡಾಗಿದ್ದು, ಇದರಿಂದ ತಾಲೂಕಿನ ಬಹುತೇಕ ರೈತರು ಆತಂಕಕ್ಕಿಡಾಗಿದ್ದಾರೆ.

'ರೈತರೇ ಚೀನಾದ ಬೀಜದ ಪೊಟ್ಟಣ ಬಂದರೆ ದೂರು ಕೊಡಿ' ...

ಶೇ.30ರಷ್ಟುಮಂದಿ ಮೇ, ಜೂನ್‌ನಲ್ಲಿಯೇ ಶೇಂಗಾ ಬಿತ್ತನೆ ಮಾಡಿದ್ದರು. ಇಳುವರಿ ಕಡಿಮೆಯಾಗಿದ್ದರೂ ಗಿಡಗಳ ಬೆಳವಣಿಗೆ ಚೆನ್ನಾಗಿಯೇ ಇತ್ತು. ಇದು ಜಾನುವಾರುಗಳ ಮೇವಿಗೆ ಹೆಚ್ಚು ಸಹಕಾರಿಯಾಗುವ ನಿರೀಕ್ಷೆ ಹೊಂದಲಾಗಿತ್ತು. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಜಮೀನಿಗಳಲ್ಲಿಯೇ ನೀರು ಶೇಖರಣೆಯಾಗಿ ಬೆಳೆ ಕೊಳೆತ ಸ್ಥಿತಿಗೆ ತಲುಪುತ್ತಿದೆ.

click me!