ರಾಯಚೂರು/ಮಾನ್ವಿ (ಆ.12) : ಕೃಷ್ಣಾ ಮತ್ತು ತುಂಗಭದ್ರಾ ನದಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ನದಿ ಪಾತ್ರದಲ್ಲಿ ನೆರೆ ಆತಂಕವು ಜಾಸ್ತಿಯಾಗುತ್ತಿದ್ದು ಇದರಿಂದಾಗಿ ಜಿಲ್ಲೆಯ ವ್ಯಾಪ್ತಿಯ ಉಭಯ ನದಿ ತೀರದ ಸಾರ್ವಜನಿಕರಲ್ಲಿ ನೆರೆ ಆತಂಕ ಜೀವಂತಗೊಂಡಿದೆ. ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಗುರುವಾರ 2 ಲಕ್ಷ 18 ಸಾವಿರ ಕ್ಯುಸೆಕ್ ನೀರು ಹರಿಸಿದ್ದು ಇದರಿಂದಾಗಿ ದೇವದುರ್ಗ ತಾಲೂಕಿನ ಹೂವಿನೆಡಗಿ ಸೇತುವೆ ಸಮೀಪಕ್ಕೆ ನೀರು ಬಂದಿವೆ. ಈಗಾಗಲೇ 1.5 ಲಕ್ಷ ಕ್ಯುಸೆಕ್ ನೀರು ಬಂದಿದ್ದರಿಂದ ಲಿಂಗಸುಗೂರು ತಾಲೂಕಿನ ಶೀಲಹಳ್ಳಿ ಸೇತುವೆ ಮುಳುಗಡೆಯಾಗಿ ನಡುಗಡ್ಡೆ ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದ್ದು, ನೀರಿನ ಪ್ರಮಾಣವು 2.8 ಲಕ್ಷ ಕ್ಯುಸೆಕ್‌ಗೂ ಮೇಲೆ ಬಂದಲ್ಲಿ ಹೂವಿನೆಡಗಿ ಸೇತುವೆ ಸಹ ಮುಳುಗಡೆಯಾಗಲಿದೆ.\
ತುಂಗಾಭದ್ರಾ ಡ್ಯಾಂನಿಂದ ನೀರು ಬಿಡುಗಡೆ: ಬಳ್ಳಾರಿ, ವಿಜಯನಗರದಲ್ಲಿ ಪ್ರವಾಹ ಭೀತಿ
undefined
ವಿಜಯದಾಸರ ಕಟ್ಟೆ(Vijayadasara Katte)ವರೆಗೆ ನೀರು:ತುಂಗಭದ್ರ(Tunga Bhadra)ನದಿಗೆ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ನದಿಗೆ ಬಿಟ್ಟಿರುವುದರಿಂದ ತಾಲೂಕಿನ ಚೀಕಲಪರ್ವಿ(Chikalaparvi) ಗ್ರಾಮದ ಐತಿಹಾಸಿಕ ವಿಜಯದಾಸರ ಕಟ್ಟೆಯ ಆವರಣದವರೆಗೂ ನದಿ ನೀರು ಬಂದಿವೆ. ತುಂಗಭದ್ರ ಜಲಾಶಯಕ್ಕೆ ಹೆಚ್ಚುವರಿ ನೀರು ಬರುವುದರಿಂದ 1.62 ಕ್ಯುಸೆಕ್ ನದಿಗೆ ನೀರು ಬಿಟ್ಟಿದ್ದರಿಂದ ತಾಲೂಕಿನ ನದಿ ಪಾತ್ರದ ಗ್ರಾಮಗಳಾದ ಚೀಕಲಪರ್ವಿ, ಕಾತರಕಿ, ಜಾಗೀರಪನ್ನೂರು, ಹರನಹಳ್ಳಿ, ಯಡಿವಾಳ ಇತರೆ ಗ್ರಾಮಗಳ ಹತ್ತಿರ ನೀರು ಬಂದಿದ್ದು ಹೆಚ್ಚುವರಿ ನೀರಿನಿಂದ ನೂರಾರು ಎಕರೆ ಜಮೀನುಗಳಲ್ಲಿ ಭತ್ತ,ಹತ್ತಿ,ಸೇರಿದಂತೆ ಇತರ ಬೆಳೆಗಳು ನೀರಿನಲ್ಲಿ ಮುಳುಗಿ ರೈತರಿಗೆ ಅಪಾರ ನಷ್ಟವಾಗಿದೆ.
ನದಿ ಪಕ್ಕದಲ್ಲಿನ ಜೆಸ್ಕಾಂ ಇಲಾಖೆಯ ವಿದ್ಯುತ್ ಪರಿವರ್ತಕಗಳು ಹಾಗೂ ವಿದ್ಯುತ್ ಕಂಬಗಳು ನೀರಿನಲ್ಲಿ ಮುಳುಗಿವೆ. ನದಿಯಲ್ಲಿ ನೀರಿನ ಪ್ರವಾಹ ಹೆಚ್ಚಾಗಿರುವುದರಿಂದ ಜಿಲ್ಲಾಡಳಿತ ಆಡಳಿತದಿಂದ ಕಟ್ಟೆಚ್ಚರ ವಹಿಸಲಾಗಿದೆ, ಸಾರ್ವಜನಿಕರು ನದಿಯ ಕಡೆ ಮತ್ತು ದನಕರುಗಳನ್ನು ಬಿಡದಂತೆ ಸೂಚಿಸಿದ್ದಾರೆ. ತುಂಗಭದ್ರಾ ನದಿಯಲ್ಲಿ ನೀರಿನ ಮಟ್ಟಹೆಚ್ಚಿದ್ದರಿಂದ ರಾಯಚೂರು ತಾಲೂಕಿನ ಬಿಚ್ಚಾಲಿಯಲ್ಲಿರುವ ರಾಯರ ಜಪದಕಟ್ಟೆಯನ್ನು ನೀರು ಆವರಿಸಿದೆ. ಇನ್ನು ಮಂತ್ರಾಲಯದಲ್ಲಿ ರಾಯರ 351 ನೇ ಆರಾಧನಾ ಮಹೋತ್ಸವ ನಡೆಯುತ್ತಿರುವ ಸಮಯದಲ್ಲಿಯೇ ತುಂಗಭದ್ರಾ ನದಿಯಲ್ಲಿ ಪ್ರವಾಹ ಕಂಡುಬಂದಿದ್ದರಿಂದ ಅಗತ್ಯ ಮುಂಜಾಗೃತಾ ಕ್ರಮಗಳನ್ನು ವಹಿಸಿರುವ ಶ್ರೀಮಠವು ಭಕ್ತರು ನದಿಗಿಳಿಯಂತೆ ನಿರ್ಭಂದ ಹೇರಿದೆ.
ರಾಯಚೂರು: ಆರ್ಟಿಪಿಎಸ್ ಬಂಕರ್ ಕುಸಿತ, ತಪ್ಪಿದ ಅನಾಹುತ
:ರಾಯಚೂರು ಜಿಲ್ಲೆ ಕೃಷ್ಣಾ ನದಿಗೆ ಎರಡು ಲಕ್ಷಕ್ಕು ಹೆಚ್ಚಿನ ಪ್ರಮಾಣದ ಕ್ಯುಸೆಕ್ ನೀರನ್ನು ಹರಿಸಿದ್ದರಿಂದ ದೇವದುರ್ಗ ತಾಲೂಕಿನ ಹೂವಿನೆಡಗಿ ಸೇತುವೆ ಸಮೀಪಕ್ಕೆ ನೀರು ಬಂದಿರುವುದು.11ಮಾನ್ವಿ4 - ಮಾನ್ವಿ ತಾಲೂಕಿನ ಚೀಕಲಪರ್ವಿ ಗ್ರಾಮದ ಐತಿಹಾಸಿಕ ವಿಜಯದಾಸರ ಕಟ್ಟೆಗೆ ಬಂದ ನದಿ ನೀರು.