ಮಲೆನಾಡಲ್ಲಿ ಮುಂದುವರಿದ ಭೂ ಕುಸಿತ : ಹಲವು ಪ್ರದೇಶಗಳ ಸಂಪರ್ಕ ಕಡಿತ

By Web Desk  |  First Published Aug 16, 2019, 11:39 AM IST

ಮಲೆನಾಡಲ್ಲಿ ಮಳೆ ನಿಂತರೂ ಕೂಡ ಅದರಿಂದಾಗುತ್ತಿರುವ ಅನಾಹುತಗಳು ಮಾತ್ರ ತಗ್ಗುತ್ತಿಲ್ಲ. ಇನ್ನೂ ಕೆಲವೆಡೆ ಭೂ ಕುಸಿತವಾಗುತ್ತಿದ್ದು, ಸಂಪರ್ಕವೇ ಸಾಧ್ಯವಾಗುತ್ತಿಲ್ಲ. 


ಚಿಕ್ಕಮಗಳೂರು [ಆ.16]:  ಮಲೆನಾಡಲ್ಲಿ ಮಳೆ ನಿಂತರೂ ಕೂಡ ಅನಾಹುತಗಳು ಇನ್ನೂ ನಿಂತಿಲ್ಲ. ಕಳೆದ ಕೆಲ ದಿನಗಳಿಂದ ಸುರಿದ ಭಾರೀ ಮಳೆ ಮಲೆನಾಡಿಗರು ಸಂಪೂರ್ಣ ತತ್ತರಿಸಿ ಹೋಗುವಂತೆ ಮಾಡಿದೆ. 

ಹಲವು ಗುಡ್ಡ ಬೆಟ್ಟಗಳು ನಿರಂತರವಾಗಿ ಕುಸಿಯುತ್ತಿದ್ದು, ಇನ್ನೂ ಕೂಡ ಬದುಕು ಕಟ್ಟಿಕೊಳ್ಳುವುದು ಸಾಧ್ಯವಾಗುತ್ತಿಲ್ಲ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಭೂ ಕುಸಿತ ನಿರಂತರವಾಗಿದ್ದು, ಹಲವು ಮಾರ್ಗಗಳು ಬಂದ್ ಆಗಿವೆ. 

Tap to resize

Latest Videos

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇಲ್ಲಿನ ಕೊಟ್ಟಿಗೆಹಾರದ ಬಳಿ ಮತ್ತೆ ಭೂ ಕುಸಿತವಾಗಿದ್ದು, ಬಾಳೆ ಹೊಳೆ, ಕಳಸ, ಹಿರೇಬೈಲು ಸಂಪರ್ಕ ಕಡಿತಗೊಂಡಿದೆ. 

ಮೂಡಿಗೆರೆ ತಾಲೂಕಿನ ಬಾಳೆಹೊಳೆ ಸಮೀಪದಲ್ಲಿ ರಸ್ತೆಯು ಸಂಪೂರ್ಣ ಕುಸಿದ ಪರಿಣಾಮ ಮುನ್ನೆಚ್ಚರಿಕಾ ಕ್ರಮವಾಗಿ ಸಂಪರ್ಕ ಸ್ಥಗಿತ ಮಾಡಿ ಜಿಲ್ಲಾಡಳಿತ ಆದೇಶ ನೀಡಿದೆ. 

click me!