* ಕರ್ನಾಟಕದಲ್ಲಿ ಮಳೆಯ ಅಬ್ಬರ
* ಪರಿಹಾರ ಕ್ರಮಗಳ ವಿವರಣೆ ನೀಡಿದ ಸಚಿವ ಅಶೋಕ
* ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ
* ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲು ಸೂಚನೆ ನೀಡಿದ್ದೇವೆ
ಬೆಂಗಳೂರು(ಜು. 23) ಕಳೆದ 24 ಗಂಟೆಗಳಲ್ಲಿ ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಕಡೆಗಳಲ್ಲಿ ದಾಖಲೆ ಮಳೆ ಆಗಿದೆ. ಮಹಾರಾಷ್ಟ್ರ ದಲ್ಲಿ ನಿರಂತರ ಮಳೆ ಸುರಿಯುತ್ತಿದೆ. ಕೃಷ್ಣಾ ನದಿ ತುಂಬಿ ಹರಿಯುತ್ತಿದೆ. ಈ ನದಿ ಪಾತ್ರದಲ್ಲಿ ಕಟ್ಟೆಚ್ಚರ ವಹಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ ತಿಳಿಸಿದ್ದಾರೆ.
ರಾಯಚೂರು, ಬೆಳಗಾವಿ,ಶಿವಮೊಗ್ಗ ಕಡೆಗಳಲ್ಲಿ ಎನ್ ಡಿ ಆರ್ ಎಫ್ ತಂಡವನ್ನು ಕಳಿಸಲಾಗಿದೆ. ಜನರನ್ನು ಸುರಕ್ಷಿತ ಜಾಗಗಳಿಗೆ ತೆರಳಲು ಸೂಚನೆ ನೀಡಲಾಗಿದೆ. ಮೂರು ಸಾವು, ಎರಡು ನಾಪತ್ತೆ ಪ್ರಕರಣಗಳು ವರದಿ ಆಗಿವೆ.. ಕಾಳಜಿ ಕೇಂದ್ರಗಳಿಗೆ ಜನರನ್ನು ಸ್ಥಳಾಂತರಗೊಳಿಸಲಾಗಿದೆ. ಆರ್ ಅಶೋಕ ತಿಳಿಸಿದ್ದಾರೆ.
ಮುಳುಗಡೆಯಾಗಿದ್ದ ಪ್ರದೇಶ ನೀರಿನಿಂದ ಎದ್ದು ಬಂತು
ಶನಿವಾರ ನಾಳೆ ಜಿಲ್ಲಾ ಮಂತ್ರಿಗಳ ಜೊತೆ ಶಿರಾಡಿ ಘಾಟ್ ಗೆ ಭೇಟಿ ನೀಡಲಿದ್ದೇನೆ. ಸಂಜೆ ಸಿಎಂ ಜೊತೆ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಲಿದ್ದೇನೆ. ಒಂದು ಸಾವಿರ ಕೋಟಿ ಹಣ ಎಲ್ಲಾ ಜಿಲ್ಲಾಧಿಕಾರಿ ಗಳ ಅಕೌಂಟ್ ನಲ್ಲಿ ಇದೆ. ಅದನ್ನು ಮಳೆ ಹಾನಿ ಪ್ರದೇಶಗಳಿಗೆ ಖರ್ಚು ಮಾಡಲು ಸೂಚನೆ ನೀಡಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ ಕಳೆದ ಎರಡು ದಿನಗಳಿಂದ ಸುರಿಯುತ್ತಿದೆ. ಬೆಳಗಾವಿಯಲ್ಲಿಯೂ ವರಣುನ ಆರ್ಭಟ ಜೋರಾಘಿದೆ. ನದಿಗಳು ತುಂಬಿ ಹರಿಯುತ್ತಿದ್ದು ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆ ಆತಂಕ ತಂದಿದೆ.