ನವಲಗುಂದ: ಬೆಣ್ಣೆಹಳ್ಳದಲ್ಲಿ ಸಿಲುಕಿರುವ 200 ಕುರಿ, 7 ಕುರಿಗಾಯಿಗಳ ರಕ್ಷಣೆಗೆ ಕಾರ್ಯಾಚರಣೆ

Suvarna News   | Asianet News
Published : Jul 23, 2021, 04:07 PM IST
ನವಲಗುಂದ: ಬೆಣ್ಣೆಹಳ್ಳದಲ್ಲಿ ಸಿಲುಕಿರುವ 200 ಕುರಿ, 7 ಕುರಿಗಾಯಿಗಳ ರಕ್ಷಣೆಗೆ ಕಾರ್ಯಾಚರಣೆ

ಸಾರಾಂಶ

* ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಗುಮ್ಮಗೋಳ ಗ್ರಾಮದ ಬಳಿ ನಡೆದ ಘಟನೆ * ಕುರಿಗಳ ಸಮೇತ ಹಳ್ಳದಲ್ಲಿ ಸಿಲುಕಿದ ಕುರಿಗಾಯಿಗಳು * ತೊಂದರೆಯಾಗದ ಹಾಗೆ ರಕ್ಷಣೆ ಮಾಡುತ್ತಿರುವ ನವಲಗುಂದ ತಾಲೂಕಾಡಳಿತ

ಹುಬ್ಬಳ್ಳಿ(ಜು.23): ಪಶ್ಚಿಮ ಘಟ್ಟ ಹಾಗೂ ರಾಜ್ಯದಲ್ಲಿಯೂ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಹಳ್ಳ, ಕೊಳ್ಳ ಹಾಗೂ ನದಿಗಳು ತುಂಬಿ ಹರಿಯುತ್ತಿವೆ. ಹಾಗೆಯೇ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಗುಮ್ಮಗೋಳ ಗ್ರಾಮದ ಬಳಿ ಬೆಣ್ಣೆ ಹಳ್ಳದಲ್ಲಿ ಸುಮಾರು 200 ಕುರಿಗಳು ಹಾಗೂ 7 ಜನ ಕುರಿಗಾಯಿಗಳು ಸಿಲುಕಿಕೊಂಡಿದ್ದು, ಅವರ ರಕ್ಷಣೆಗೆ ತಾಲೂಕಾಡಳಿತ ಕಾರ್ಯಾಚರಣೆ ನಡೆಸಲಾಗುತ್ತಿದೆ.

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಹಳ್ಳ ತುಂಬಿ ಬಂದ ಪರಿಣಾಮ, ಕುರಿಗಳ ಸಮೇತ ಕುರಿಗಾಯಿಗಳು ಸಿಲುಕಿ ಸಹಾಯಕ್ಕಾಗಿ ಅಂಗಲಾಚಿ ಬೇಡಿಕೊಳ್ಳುತ್ತಿದ್ದಾರೆ. 

ವರುಣನ ಅಬ್ಬರ: ಆಲಮಟ್ಟಿ ಡ್ಯಾಂನಿಂದ 2.50 ಲಕ್ಷ ಕ್ಯುಸೆಕ್ ನೀರು ಬಿಡುಗಡೆ

ಅಲ್ಲಿರುವ ಕುರಿಗಳನ್ನು ಬೋಟಿನಲ್ಲಿ ಹೊರಗೆ ತರುವ ಕಾರ್ಯಾಚರಣೆ ನಡೆದಿದ್ದು, ಯಾರಿಗೂ ತೊಂದರೆಯಾಗದ ಹಾಗೇ ರಕ್ಷಣೆ ಮಾಡಲಾಗುತ್ತಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ನಿರತವಾಗಿದೆ.
 

PREV
click me!

Recommended Stories

ನ್ಯಾಷನಲ್ ಹೆರಾಲ್ಡ್ ಪ್ರಕರಣ ರೀತಿ RSS ವಿರುದ್ಧ ಯಾಕೆ ಕೇಸ್ ಇಲ್ಲ? ಕೇಂದ್ರದ ವಿರುದ್ಧ ಪ್ರಿಯಾಂಕ್ ಪ್ರಶ್ನೆಗಳ ಸುರಿಮಳೆ!
ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವ ಪೊಲೀಸ್ ಸಿಬ್ಬಂದಿಗೆ ಡಿಜಿ ಐಜಿಪಿ ಡಾ ಸಲೀಂ ಖಡಕ್ ಎಚ್ಚರಿಕೆ