ಹುಬ್ಬಳ್ಳಿ: ಕಾಂಕ್ರಿಟ್ ಹೈಜಾಕ್ ವಾಹನ ಹರಿದು ರೈಲ್ವೆ ಸಿಬ್ಬಂದಿ ದೇಹ ಛಿದ್ರ ಛಿದ್ರ..!

Published : Jun 14, 2023, 11:47 AM IST
ಹುಬ್ಬಳ್ಳಿ: ಕಾಂಕ್ರಿಟ್ ಹೈಜಾಕ್ ವಾಹನ ಹರಿದು ರೈಲ್ವೆ ಸಿಬ್ಬಂದಿ ದೇಹ ಛಿದ್ರ ಛಿದ್ರ..!

ಸಾರಾಂಶ

ಕಾಂಕ್ರಿಟ್ ಹೈಜಾಕ್ ವಾಹನ ಗುದ್ದಿದ ಪರಿಣಾಮ ರೈಲ್ವೆ ಸಿಬ್ಬಂದಿ ದೇಹ ಛಿದ್ರ ಛಿದ್ರವಾದ ಘಟನೆ ಹುಬ್ಬಳ್ಳಿ ನಗರದ ಗದಗ ರಸ್ತೆಯಲ್ಲಿರುವ ವರ್ಕ್ ಶಾಪ್ ಬಳಿ 

ಹುಬ್ಬಳ್ಳಿ(ಜೂ.14): ರೈಲ್ವೆ ಸಿಬ್ಬಂದಿ ಮೇಲೆ ಕಾಂಕ್ರಿಟ್ ಹೈಜಾಕ್ ವಾಹನ ಗುದ್ದಿದ ಪರಿಣಾಮ ರೈಲ್ವೆ ಸಿಬ್ಬಂದಿ ದೇಹ ಛಿದ್ರ ಛಿದ್ರವಾದ ಘಟನೆ ಹುಬ್ಬಳ್ಳಿ ನಗರದ ಗದಗ ರಸ್ತೆಯಲ್ಲಿರುವ ವರ್ಕ್ ಶಾಪ್ ಬಳಿ ಇಂದು(ಬುಧವಾರ) ನಡೆದಿದೆ. 

ರೈಲ್ವೆ ಇಲಾಖೆಯ ವರ್ಕ್ ಶಾಪ್‌ನಲ್ಲಿ ಜೂನಿಯರ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಶ್ರೀಹರಿ ಎಂಬ ಸಿಬ್ಬಂದಿಯೇ ಸಾವನ್ನಪ್ಪಿದ ದುರ್ದೈವಿಯಾಗಿದ್ದಾರೆ. ಇಲ್ಲಿ ಹೊಸದಾಗಿ ಕಟ್ಟಡ ಕಟ್ಟುತ್ತಿರುವಾಗ, ಕಾಂಕ್ರಿಟ್ ಹೈಜಾಕ್ ನಿಂದ ಚಾಲಕ ಜೋರಾಗಿ ಬಂದಿದ್ದಾನೆ. ಹಿಂದೆ ಕಾರ್ಯ ನಿರ್ವಹಿಸುತ್ತಿದ್ದ ಶ್ರೀಹರಿ ಮೇಲೆ ವಾಹನ ಹರಿದ ಪರಿಣಾಮ ಸ್ಥಳದಲ್ಲೇ ಶ್ರೀಹರಿ ಸಾವನ್ನಪ್ಪಿದ್ದಾರೆ.

ಚಿಕ್ಕೋಡಿ: ಬೈಕ್-ಟೆಂಪೋ ಮಧ್ಯೆ ಭೀಕರ ಅಪಘಾತ, ಮೂವರು ಯುವಕರ ದುರ್ಮರಣ

ಸ್ಥಳಕ್ಕೆ ಭೇಟಿ ನೀಡಿದ ಪೂರ್ವ ಸಂಚಾರಿ ಪೊಲೀಸರು ಮತ್ತು ಎಸಿಪಿ ಪರಿಶೀಲನೆ ನಡೆಸಿ ಮರಣೋತ್ತಾರ ಪರೀಕ್ಷೆಗೆ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಶ್ರೀಹರಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. 

PREV
Read more Articles on
click me!

Recommended Stories

ಉತ್ಖನನ ವೇಳೆ ನಿಧಿ ದೊರೆತರೆ ಲಕ್ಕುಂಡಿ ಗ್ರಾಮವೇ ಸ್ಥಳಾಂತರ?
Breaking: ಕನ್ನಡ ನಾಡಿನ ಭೀಷ್ಮ ಭೀಮಣ್ಣ ಖಂಡ್ರೆ ಇನ್ನಿಲ್ಲ: ಕಳಚಿಬಿದ್ದ ಸ್ವಾತಂತ್ರ್ಯ ಹೋರಾಟ ಮತ್ತು ಏಕೀಕರಣದ ಕೊಂಡಿ!