ಮಂಡ್ಯ: ಕೆಆರ್‌ಎಸ್‌ನಲ್ಲಿ ಪರ್ಜನ್ಯ ಹೋಮ, ಭಾರೀ ಮಳೆ

By Kannadaprabha NewsFirst Published Jun 14, 2023, 8:29 AM IST
Highlights

ಅಣೆಕಟ್ಟೆ ಬಳಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ ಮಳೆರಾಯನಿಗಾಗಿ ಪ್ರಾರ್ಥನೆ ಸಲ್ಲಿಸಿ ಮಹಾ ಗಣಪತಿ ಪೂಜೆ, ಸಂಕಲ್ಪ ಯಾಗದ ಬಳಿಕ ವಿಶೇಷ ಜಪ ಮಾಡಲಾಯಿತು. ಶಾಸಕ ರಮೇಶ್‌ ಬಂಡಿಸಿದ್ದೇಗೌಡ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಡಾ.ಭಾನುಪ್ರಕಾಶ್‌ ಶರ್ಮ ನೇತೃತ್ವದಲ್ಲಿ 12 ವೈದಿಕರ ತಂಡ ಪೂಜೆ ನೆರವೇರಿಸಿತು. 

ಶ್ರೀರಂಗಪಟ್ಟಣ(ಜೂ.14):  ಮುಂಗಾರು ಮಳೆ ವಿಳಂಬ ಹಿನ್ನೆಲೆಯಲ್ಲಿ ಮಳೆಗಾಗಿ ಕೆಆರ್‌ಎಸ್‌ ಜಲಾಶಯದ ಕಾವೇರಿ ಪ್ರತಿಮೆಗೆ ಮಂಗಳವಾರ ವರುಣ ಕೃಪೆಗಾಗಿ ಪರ್ಜನ್ಯ ಹೋಮ ನಡೆಸಲಾಯಿತು. ಹೋಮ ಮುಕ್ತಾಯದ ಕೆಲ ಹೊತ್ತಿನಲ್ಲೇ ಧಾರಾಕಾರ ಮಳೆ ಸುರಿದಿದ್ದು ವಿಶೇಷವಾಗಿತ್ತು.

ಅಣೆಕಟ್ಟೆ ಬಳಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ ಮಳೆರಾಯನಿಗಾಗಿ ಪ್ರಾರ್ಥನೆ ಸಲ್ಲಿಸಿ ಮಹಾ ಗಣಪತಿ ಪೂಜೆ, ಸಂಕಲ್ಪ ಯಾಗದ ಬಳಿಕ ವಿಶೇಷ ಜಪ ಮಾಡಲಾಯಿತು. ಶಾಸಕ ರಮೇಶ್‌ ಬಂಡಿಸಿದ್ದೇಗೌಡ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಡಾ.ಭಾನುಪ್ರಕಾಶ್‌ ಶರ್ಮ ನೇತೃತ್ವದಲ್ಲಿ 12 ವೈದಿಕರ ತಂಡ ಪೂಜೆ ನೆರವೇರಿಸಿತು. ಜಲಾಶಯದ ಬಳಿ ಕಾವೇರಿ ನೀರು ತುಂಬಿದ ದೊಡ್ಡ ಪಾತ್ರೆಯೊಳಗೆ ಕುಳಿತು ಮೂವರು ಹಿರಿಯ ವೈದಿಕರಿಂದ ಮೂಲಮಂತ್ರ ಜಪ ಮಂತ್ರ ಪಠಣೆ ಮಾಡಿದರು.

Latest Videos

ಕಾವೇರಿ ಒಡಲು ಭರ್ತಿಗೆ ದೇವರ ಮೊರೆ ಹೋದ ನಿಗಮ: ಮಳೆಗಾಗಿ ಕೆಆರ್‌ಎಸ್‌ನಲ್ಲಿ ವಿಶೇಷ ಪೂಜೆ

ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ಕೆಆರ್‌ಎಸ್‌ ಅಣೆಕಟ್ಟೆಯಲ್ಲಿ ನೀರಿನ ಮಟ್ಟದಿನೇ ದಿನೆ ಕುಸಿಯುತ್ತಿದೆ. ಕೆಆರ್‌ಎಸ್‌ ಜಲಾಶಯದಲ್ಲಿ 124.80 ಅಡಿ ಗರಿಷ್ಠ ಮಟ್ಟದ ನೀರಿನಲ್ಲಿ 81ಅಡಿಗೆ ಕುಸಿತ ಕಂಡಿದ್ದು ಆತಂಕ ಉಂಟುಮಾಡಿದೆ.

click me!