ಚಿಕ್ಕೋಡಿ ಪಟ್ಟಣದ ಹೊರವಲಯದ ಬಸನಾಳ ಗಡ್ಡೆ ಬಳಿ ಚಿಕ್ಕೋಡಿ-ವಿಜಯಪುರ ರಾಜ್ಯ ಹೆದ್ದಾರಿ ಮೇಲೆ ನಡೆದ ಅಪಘಾತ.
ಚಿಕ್ಕೋಡಿ(ಜೂ.14): ಬೈಕ್-ಟೆಂಪೋ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಯುವಕರ ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬಸವನಾಳಗಡ್ಡೆ ಬಳಿ ನಿನ್ನೆ(ಮಂಗಳವಾರ) ರಾತ್ರಿ ನಡೆದಿದೆ. ಮೃತ ಯುವಕರನ್ನ ಚಿಕ್ಕೋಡಿ ತಾಲೂಕಿನ ಕೇರೂರ ಗ್ರಾಮದ ಪ್ರಶಾಂತ ಬೈರು ಖೋತ(22), ಸತೀಶ ಕಲ್ಲಪ್ಪ ಹಿರೇಕೊಡಿ(23) ಹಾಗೂ ಬೆಳಗಾವಿಯ ನಿವಾಸಿ ಯಲಗೌಡ ಚಂದ್ರಕಾಂತ ಪಾಟೀಲ(22) ಅಂತ ಗುರುತಿಸಲಾಗಿದೆ.
ಮೂವರು ಯುವಕರು ಬೈಕ್ ಮೇಲೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಇಬ್ಬರು ಸ್ಥಳದಲ್ಲಿ ಮೃತಪಟ್ಟರೆ ಮತ್ತೋರ್ವ ಯುವಕ ಆಸ್ಪತ್ರೆಗೆ ತೆರಳುವ ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದಾನೆ.
ನಿಶ್ಚಿತಾರ್ಥಕ್ಕೆ ತೆರಳುತ್ತಿದ್ದ ಕುಟುಂಬ ಕಾರಿಗೆ ಟ್ರಕ್ ಡಿಕ್ಕಿ; ಯುವತಿ ಸಾವು, 9 ಮಂದಿ ಗಂಭೀರ!
ಚಿಕ್ಕೋಡಿ ಪಟ್ಟಣದ ಹೊರವಲಯದ ಬಸನಾಳ ಗಡ್ಡೆ ಬಳಿ ಚಿಕ್ಕೋಡಿ-ವಿಜಯಪುರ ರಾಜ್ಯ ಹೆದ್ದಾರಿ ಮೇಲೆ ಅಪಘಾತ ನಡೆದಿದೆ. ಘಟನಾ ಸ್ಥಳಕ್ಕೆ ಚಿಕ್ಕೋಡಿ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂದ ಚಿಕ್ಕೋಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.