ಕೂಡ್ಲಿಗಿಗೂ ಬರಲಿದೆ ರೈಲು ಮಾರ್ಗ; 5 ದಶಕಗಳ ಬೇಡಿಕೆ ಈಡೇರಿಕೆಗೆ ಕಾಲ ಸನ್ನಿಹಿತ

By Kannadaprabha News  |  First Published Oct 30, 2022, 11:35 AM IST
  • ಕೂಡ್ಲಿಗಿಗೂ ಬರಲಿದೆ ರೈಲು ಮಾರ್ಗ!
  • ತಾಲೂಕಿನ ಜನರ 5 ದಶಕಗಳ ಬೇಡಿಕೆ ಈಡೇರಿಕೆಗೆ ಕಾಲ ಸನ್ನಿಹಿತ
  • ಚಿತ್ರದುರ್ಗ-ಆಲಮಟ್ಟಿಹೊಸ ರೈಲು ಮಾರ್ಗದ ಸಮೀಕ್ಷಾ ವರದಿ ಸಲ್ಲಿಕೆ
  • ಕೇಂದ್ರದ ಮುಂದಿನ ಬಜೆಟ್‌ನಲ್ಲಿ ಅನುದಾನ ಸಿಗುವ ನಿರೀಕ್ಷೆ

ಭೀಮಣ್ಣ ಗಜಾಪುರ

ಕೂಡ್ಲಿಗಿ (ಅ.30) : ಅತ್ಯಂತ ಹಿಂದುಳಿದ ತಾಲೂಕೆಂಬ ಹಣೆಪಟ್ಟಿಹೊತ್ತಿದ್ದ ಕೂಡ್ಲಿಗಿ ತಾಲೂಕಿನ ಜನರ 5 ದಶಕಗಳ ಕನಸಿನ ರೈಲು ಸಂಚಾರ ಮಾರ್ಗದ ಬೇಡಿಕೆಯು ಕೊನೆಗೂ ಈಡೇರುವ ಕಾಲ ಸನ್ನಿಹಿತವಾಗಿದೆ ಎಂದೇ ಹೇಳಬಹುದು

Tap to resize

Latest Videos

Pune Bangalore Expressway: ಊರಿಲ್ಲದ ಜಾಗದಲ್ಲಿ ಸಾಗುವ ಹೆದ್ದಾರಿ!

ಹೌದು,ಬೆಂಗಳೂರು-ಸೊಲ್ಲಾಪುರ ರೈಲು ಮಾರ್ಗದ ಅಂತರ ಕಡಿಮೆಗೊಳಿಸುವ ಮಹತ್ತರ ನಿರ್ಧಾರದಿಂದ ರೂಪಿಸಲಾಗಿರುವ ಚಿತ್ರದುರ್ಗ-ಆಲಮಟ್ಟಿಹೊಸ ರೈಲು ಮಾರ್ಗದಲ್ಲಿ ಕೂಡ್ಲಿಗಿ ತಾಲೂಕು ಸೇರಿರುವುದು ಸಂತಸವೇ ಸರಿ. 264 ಕಿಮೀ ಉದ್ದದ ಈ ಹೊಸ ರೈಲು ಮಾರ್ಗವು ಚಿತ್ರದುರ್ಗದಿಂದ ವಿಜಯನಗರ ಜಿಲ್ಲೆಯ ಕಾನಹೊಸಹಳ್ಳಿ,ಕೂಡ್ಲಿಗಿ ಮಾರ್ಗವಾಗಿ ಕೊಪ್ಪಳ,ಕುಷ್ಟಗಿ, ಹುನಗುಂದ ಹಾಗೂ ಕೂಡಲಸಂಗಮ ಮೂಲಕ ಹಾದು ಆಲಮಟ್ಟಿಗೆ ಸಂಪರ್ಕಿಸುವುದರಿಂದ ಕೂಡ್ಲಿಗಿ ತಾಲೂಕಿಗೆ ದೊರೆಯುವ ದೊಡ್ಡ ವರವೆಂದೇ ಭಾವಿಸಬಹುದು.

ಚಿತ್ರದುರ್ಗ-ಆಲಮಟ್ಟಿಹೊಸ ರೈಲು ಮಾರ್ಗದ ಎಂಜಿನಿಯರಿಂಗ್‌ ಮತ್ತು ಪ್ರಾಥಮಿಕ ಸಂಚಾರ ಸಮೀಕ್ಷೆ ಕಾರ್ಯವೂ ಮುಗಿದಿದೆ. ಅಲ್ಲದೆ,ಈ ಸಮೀಕ್ಷಾ ವರದಿ ಹಾಗೂ ಈ ಯೋಜನೆಗೆ ತಗಲುವ ಅಂದಾಜು .8,431.44 ಕೋಟಿ ವೆಚ್ಚದ ಪಟ್ಟಿಯನ್ನೂ ರೈಲ್ವೆ ಮಂಡಳಿಗೆ ಹುಬ್ಬಳ್ಳಿ ನೈಋುತ್ಯ ರೈಲ್ವೆ ವಲಯದ ಮುಖ್ಯ ಎಂಜಿನಿಯರ್‌ ಜಿ.ಮುರಳಿ ಕೃಷ್ಣ ಈಗಾಗಲೇ ಸಲ್ಲಿಸಿದ್ದಾರೆ.

ಮಾರ್ಗದ ಆಳ- ಅಗಲ:

ಚಿತ್ರದುರ್ಗ-ಆಲಮಟ್ಟಿಹೊಸ ರೈಲು ಮಾರ್ಗ ಸಮೀಕ್ಷಾ ಕಾರ್ಯ ಮುಗಿದಿದ್ದು, 279.94 ಕಿಮೀ ಉದ್ದದ ರೈಲು ಮಾರ್ಗದಲ್ಲಿ ಪ್ರಸ್ತುತ ಇರುವ 13.5ಕಿ.ಮೀ ಮಾರ್ಗವನ್ನೂ ಬಳಸಿಕೊಳ್ಳಲಾಗುತ್ತಿದೆ.ಪ್ರತಿ ಕಿಮೀ ರೈಲು ಮಾರ್ಗ ನಿರ್ಮಾಣಕ್ಕೆ .30.11 ಕೋಟಿ ಅಂದಾಜು ವೆಚ್ಚವಾಗಲಿದೆ. ಹೀಗಾಗಿ, .8431.44 ಕೋಟಿ ಅಂದಾಜು ವೆಚ್ಚದ ಯೋಜನೆ ಇದಾಗಿದೆ. ಈ ರೈಲು ಮಾರ್ಗಕ್ಕೆ 1,397 ಹೆಕ್ಟೇರ್‌ ಒಣಭೂಮಿ, 644.88 ಹೆಕ್ಟೇರ್‌ ನೀರಾವರಿ ಹಾಗೂ 107.48 ಹೆಕ್ಟೇರ್‌ ನಗರ ಪ್ರದೇಶದ ಭೂಮಿ ಸೇರಿ ಒಟ್ಟು 2,149.36 ಹೆಕ್ಟೇರ್‌ ಭೂಮಿ ಸ್ವಾಧೀನ ಪಡಿಸಿಕೊಳ್ಳಬೇಕಾಗಿದೆ.

ಕೇಂದ್ರ ಸರ್ಕಾರದ ನೆರವಿನ ಭರವಸೆ:

ಬಹು ನಿರೀಕ್ಷಿತ ಚಿತ್ರದುರ್ಗ-ಆಲಮಟ್ಟಿಹೊಸ ರೈಲು ಮಾರ್ಗಕ್ಕೆ ಕೇಂದ್ರ ಸರ್ಕಾರದ ಅನುದಾನದ ನೆರವು ನೀಡುವ ಭರವಸೆಯನ್ನು ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಖಾತೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ, ಸಂಸದರಾದ ಕರಡಿ ಸಂಗಣ್ಣ, ರಮೇಶ್‌ ಜಿಗಜಿಣಗಿ, ವೈ.ದೇವೇಂದ್ರಪ್ಪ, ಪಿ.ಸಿ.ಗದ್ದಿಗೌಡರ ಸಹ ಒತ್ತಡ ಹೇರಿದ್ದಾರೆನ್ನಲಾಗಿದೆ.

ಕೊಪ್ಪಳ ಮಾರ್ಗವಾಗಿ ಪುಣೆ- ಬೆಂಗಳೂರು ಎಕ್ಸ್‌ಪ್ರೆಸ್‌ ಹೈವೆ!

ಬೆಂಗಳೂರು-ಸೊಲ್ಲಾಪುರ ರೈಲು ಮಾರ್ಗದ ಅಂತರ ಕಡಿಮೆಗೊಳಿಸಲು ಚಿತ್ರದುರ್ಗ -ಆಲಮಟ್ಟಿಹೊಸ ರೈಲು ಮಾರ್ಗದ ಸಮೀಕ್ಷಾ ಕಾರ್ಯ ಮುಗಿದಿದ್ದು, ಸಮೀಕ್ಷೆ ವರದಿ ರೈಲ್ವೆ ಮಂಡಳಿಗೆ ಸಲ್ಲಿಕೆಯಾಗಿದೆ. ಈ ಮಾರ್ಗದಿಂದ ವಿಜಯನಗರ, ಕೊಪ್ಪಳ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಯ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ. ಯೋಜನೆಗೆ ಕೇಂದ್ರ ಸರ್ಕಾರದಿಂದ ಮುಂದಿನ ಬಜೆಟ್‌ನಲ್ಲಿ ಅನುದಾನ ಲಭ್ಯವಾಗುವ ಭರವಸೆಯಿದೆ.

ಸಂಗಣ್ಣ ಕರಡಿ, ಸಂಸದರು, ಕೊಪ್ಪಳ.

ಚಿತ್ರದುರ್ಗ-ಆಲಮಟ್ಟಿಹೊಸ ರೈಲು ಮಾರ್ಗವು ಅತ್ಯಂತ ಹಿಂದುಳಿದ ಕೂಡ್ಲಿಗಿ, ಕಾನಹೊಸಹಳ್ಳಿ ಸೇರಿ ತಾಲೂಕಿನ ಇತರೆ ಹಳ್ಳಿಗಳಲ್ಲಿ ಸಂಪರ್ಕ ಇರುವುದು ಈ ಭಾಗದ ಜನರಿಗೆ ಅನುಕೂಲವಾಗಲಿದೆ.

ದಯಾನಂದ ಸಜ್ಜನ್‌, ಹುಲಿಕೆರೆ.ಕೂಡ್ಲಿಗಿ ತಾಲೂಕು

ಕೂಡ್ಲಿಗಿ ತಾಲೂಕಿಗೇನು ಉಪಯೋಗ..?

ಕೂಡ್ಲಿಗಿ ತಾಲೂಕಿನಲ್ಲಿ ಈಗಾಗಲೇ ರಾಷ್ಟ್ರೀಯ ಹೆದ್ದಾರಿ 50 ಹಾದು ಹೋಗಿರುವುದರಿಂದ ತಾಲೂಕಿನ ಬಹುಭಾಗಕ್ಕೆ ಸರಕು ಸಾಗಣೆಗೆ ಉತ್ತಮ ಅನುಕೂಲ ದೊರಕಿದಂತಾಗಿದೆ. ಇದರಿಂದ ವ್ಯಾಪಾರ, ವಹಿವಾಟಿಗೂ ಅನುಕೂಲವಾಗಿದೆ. ಇದೀಗ, ಚಿತ್ರದುರ್ಗ -ಆಲಮಟ್ಟಿಹೊಸ ರೈಲು ಮಾರ್ಗವು ಕೂಡ್ಲಿಗಿ ತಾಲೂಕಿನಲ್ಲಿ ಹಾದು ಹೋಗುವುದರಿಂದ ಹೆಚ್ಚಿನ ಕೈಗಾರಿಕೋದ್ಯಮಿಗಳು ತಮ್ಮ ಉದ್ಯಮವನ್ನು ಸ್ಥಾಪಿಸುವ ಅವಕಾಶ ಇರಲಿದೆ.ಇನ್ನು, ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ಬಡವರು, ಮಧ್ಯಮ ವರ್ಗದವರು ತಮ್ಮ ಹೊಟ್ಟೆಪಾಡಿಗಾಗಿ ಬೆಂಗಳೂರು, ಮಂಗಳೂರು ಸೇರಿ ಇತರೆಡೆಗಳಿಗೆ ವಲಸೆ ಹೋಗುವುದು ಸಾಮಾನ್ಯವಾಗಿದೆ.ಹೀಗಾಗಿ, ರೈಲಿನಲ್ಲಿ ಪ್ರಯಾಣ ಮಾಡುವುದಕ್ಕೆ ಕಡಿಮೆ ದರ ಇರುವುದರಿಂದ ಅದರಲ್ಲಿ ಸಂಚರಿಸುವ ಬಡವರು ಸೇರಿ ಎಲ್ಲರಿಗೂ ಆರ್ಥಿಕ ಹೊರೆ ತಗ್ಗಲಿದೆ.

click me!