ಈ ರೈಲು ನಿಲ್ದಾಣದಲ್ಲಿ ಎಲ್ಲೆಲ್ಲಿ ನೋಡಿದ್ರೂ ಗಾಂಧೀಜಿ!

By Web Desk  |  First Published Oct 3, 2018, 4:46 PM IST

ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಮಿಶನ್ ಹಾಗೂ ಸ್ವಚ್ಛ ರೈಲು ಯೋಜನೆಗೆ ರಾಯಚೂರು ರೈಲ್ವೆ ನಿಲ್ದಾಣ ಆಯ್ಕೆ | ನಿಲ್ದಾಣದ ಗೋಡೆಗಳ ಮೇಲೆ ಮಹಾತ್ಮ ಗಾಂಧಿಜೀ ಅವರ ಜೀವನ-ಹೋರಾಟ ಮತ್ತು ಸಾಧನೆಯನ್ನು ನೆನಪಿಸುವ ಮತ್ತು ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವ ಚಿತ್ರಗಳು 


ರಾಯಚೂರು (ಅ. 03):  ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಮಿಶನ್ ಹಾಗೂ ಸ್ವಚ್ಛ ರೈಲು ಯೋಜನೆಗೆ ರಾಯಚೂರು ರೈಲ್ವೆ ನಿಲ್ದಾಣ ಆಯ್ಕೆಯಾಗಿದ್ದು, ಈ ಹಿನ್ನೆಲೆಯಲ್ಲಿ ನಿಲ್ದಾಣದ ಗೋಡೆಗಳ ಮೇಲೆ ಮಹಾತ್ಮ ಗಾಂಧಿಜೀ ಅವರ ಜೀವನ-ಹೋರಾಟ ಮತ್ತು ಸಾಧನೆಯನ್ನು ನೆನಪಿಸುವ ಮತ್ತು ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವ ಚಿತ್ರಗಳು, ಬರಹಗಳು ಸಾರ್ವಜನಿಕರ ಗಮನ ಸೆಳೆಯುತ್ತಿವೆ.

ಕೇಂದ್ರದ ರೈಲ್ವೆ ಸಚಿವ ಪೀಯೂಶ್ ಗೋಯೆಲ್ ಅವರ ಸೂಚನೆಯನ್ನು ದಕ್ಷಿಣ ಮಧ್ಯೆ ರೈಲ್ವೆ  ವಿಭಾಗದಲ್ಲಿನ ಪ್ರಮುಖ ನಿಲ್ದಾಣಗಳ ಸ್ವಚ್ಚತೆಗೆ ಕಟ್ಟುನಿಟ್ಟಿನ ಆದೇಶ ನೀಡಿದ ಹಿನ್ನೆಲೆಯಲ್ಲಿ ಮಹಾತ್ಮ ಗಾಂಧಿಜೀ ಅವರ 150 ನೇ ಜಯಂತಿ ನಿಮಿತ್ತ ಗೋಡೆಗಳಲೆಲ್ಲಾ ಗಾಂಧಿಜೀ ಚಿತ್ರಗಳನ್ನು ಬಿಡಿಸಲಾಗಿದೆ. ಗಾಂಧಿಜೀ ಅವರು ಸ್ವಾತಂತ್ರ್ಯ ಹೋರಾಟದ ಸನ್ನಿವೇಶಗಳು, ರಾಯಚೂರು ಮಾರ್ಗವಾಗಿ ಮಹಾರಾಷ್ಟ್ರಕ್ಕೆ ತೆರಳಿದ ನೆನಪುಗಳ ಜೊತೆಗೆ ಅವರ ಜೀವನಾಧಾರಿತ ಚಿತ್ರಗಳನ್ನು ಸೊಗಸಾಗಿ ಬಿಡಿಸಲಾಗಿದೆ.

Latest Videos

undefined

ಇದರ ಜೊತೆಗೆ ಸ್ವಚ್ಛ ಭಾರತ್ ಮಿಶನ್ ಯೋಜನೆಯ ಆಶಯ, ಸ್ವಚ್ಛತೆಯಲ್ಲಿ ಸಾರ್ವಜನಿಕರ ಪಾತ್ರ ಸೇರಿ ಇತರೆ ವಿಷಯಗಳ ಕುರಿತ ಘೋಷಣೆ ವ್ಯಾಕ್ಯಗಳನ್ನು ರೈಲು ನಿಲ್ದಾಣದ ಸುತ್ತಲು ಬರೆಯುವುದರ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗಿದೆ.

ಗಣ್ಯರ ವೀಕ್ಷಣೆ : ರಾಯಚೂರು ರೈಲ್ವೆ ನಿಲ್ದಾಣವು ಸ್ವಚ್ಛ ಭಾರತ್ ಹಾಗೂ ಸ್ವಚ್ಛ ರೈಲು ಯೋಜನೆಗೆ ಆಯ್ಕೆಯಾಗಿರುವುದು, ಇದೇ ಸಮಯದಲ್ಲಿ ಮಹಾತ್ಮ ಗಾಂಧಿಜೀ ಅವರ 150 ನೇ ಜಯಂತ್ಯುತ್ಸವ ಆಗಮಿಸಿದ್ದರಿಂದ ನಿಲ್ದಾಣದಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

click me!