ಇಂದಿನಿಂದ ರಾಯಚೂರಿನಲ್ಲಿ ಆರ್‌ಎಸ್‌ಎಸ್ ಬೈಠಕ್ ನಡೆಯಲಿದೆ. ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ನೇತೃತ್ವದಲ್ಲಿ ನಡೆಯುವ ಈ ಬೈಠಕ್‌ಗೆ ಅಮಿತ್ ಶಾ ಕೂಡಾ ಆಗಮಿಸಲಿದ್ದಾರೆ.
ರಾಯಚೂರು (ಆ. 28): ಆರ್ ಎಸ್ ಎಸ್ ಬೈಠಕ್ ಹಾಗೂ ಕಾರ್ಯಕಾರಿಣಿ ಸಭೆಗೆ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ರಾಯಚೂರಿಗೆ ಆಗಮಿಸಿದ್ದಾರೆ.
ದೆಹಲಿಯಿಂದ ರಾಜಧಾನಿ ಎಕ್ಸಪ್ರೆಸ್ ರೈಲಿನ ಮೂಲಕ ರಾಯಚೂರಿಗೆ ಆಗಮಿಸಿದ್ದು ಝಡ್ ಫ್ಲಸ್, ಸಿಐಎಸ್ ಎಫ್ ಸೆಕ್ಯೂರಿಟಿ ಭದ್ರತೆ ಒದಗಿಸಲಾಗಿದೆ.
undefined
ಮೂರು ದಿನ ರಾಯಚೂರು ಹಾಗೂ ಎರಡು ದಿನ ಮಂತ್ರಾಲಯದಲ್ಲಿ ಬೈಠಕ್ ನಡೆಯಲಿದೆ. ರಾಯಚೂರು ನಗರದ ಗಂಜ್ ಎರಿಯಾದ ವರ್ಧಮಾನ ಸ್ಕೂಲ್ ಪಕ್ಕದ ಲಾಲ್ ಜೀ ಪಟೇಲ್ ಮನೆಯಲ್ಲಿ ಮೋಹನ್ ಭಾಗವತ್ ತಂಗಿದ್ದಾರೆ.
ಇಂದಿನಿಂದ ಮೂರುದಿನ ಶಾಂತಿ ಸ್ಟೀಲ್ಸ್ ಟ್ರೇಡರ್ಸ್ ಉದ್ಯಮಿ ಲಾಲ್ ಜೀ ಮನೆಯಲ್ಲಿಯೇ ಆರ್ ಎಸ್ ಎಸ್ ಕಾರ್ಯಕಾರಿಣಿ ಸಭೆ ನಡೆಯಲಿದೆ. ಬಳಿಕ ಸೆಪ್ಟಂಬರ್ 1 ರಿಂದ ಎರಡು ದಿನ ಮಂತ್ರಾಲಯದ ತಿರುಮಲ ವಸತಿ ಗೃಹದಲ್ಲಿ ಬೈಠಕ್ ನಡೆಯಲಿದೆ.
ಮಂತ್ರಾಲಯದ ಬೈಠಕ್ ನಲ್ಲಿ ಸುಮಾರು 300 ಜನ ವಿವಿಧ ಹಿಂದೂ ಪರ ಸಂಘಟನೆಗಳ ಮುಖ್ಯಸ್ಥರು ಭಾಗಿಯಾಗಲಿದ್ದಾರೆ. ಮಂತ್ರಾಲಯದ ಬೈಠಕ್ ನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ್ಯ ಅಮಿತ್ ಶಾ ಕೂಡ ಭಾಗಿಯಾಗಲಿದ್ದಾರೆ.
ಬೈಠಕ್ ನಲ್ಲಿ ಸಂಘ ಪರಿವಾರದ ಅಭಿವೃದ್ಧಿ ಕೆಲಸಗಳು ಹಾಗೂ ಮುಂದಿನ ಪ್ಲ್ಯಾನ್ ಗಳ ಕುರಿತು ಚರ್ಚೆ ನಡೆಯಲಿದೆ. ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬೈಠಕ್ ಮಹತ್ವ ಪಡೆದಿದೆ.
ಲಾಲ್ ಜೀ ಮನೆ ಸುತ್ತಮುತ್ತ ಭಾರಿ ಬಿಗಿ ಭದ್ರತೆ ಒದಗಿಸಲಾಗಿದೆ.