ಸಾರ್ವಜನಿಕರ ದೂರು ಆಲಿಸಲು ಕಾರು ಖರೀದಿಸಿದ ಮಸ್ಕಿ ಶಾಸಕ ತುರ್ಮಿಹಾಳ, ಕರೆ ಮಾಡಿದ್ರೆ ಮನೆ ಬಾಗಿಲಿಗೆ ವಾಹನ!

Gowthami K   | Kannada Prabha
Published : Nov 09, 2026, 08:03 AM IST
Maski MLA R Basanagouda

ಸಾರಾಂಶ

ಸಾರ್ವಜನಿಕರು ತಮ್ಮ ನಿತ್ಯದ ಕುಂದುಕೊರತೆಗಳು ಹಾಗೂ ವಿವಿಧ ಸರ್ಕಾರಿ ಕೆಲಸಗಳಿಗಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡುವುದನ್ನು ತಪ್ಪಿಸುವ ಉದ್ದೇಶದಿಂದ ಮಸ್ಕಿ ವಿಧಾನಸಭಾ ಕ್ಷೇತ್ರದ ಶಾಸಕ ಆರ್. ಬಸನಗೌಡ ತುರ್ವಿಹಾಳ ಅವರು ಅತ್ಯಂತ ಮಾದರಿಯಾದ ಹಾಗೂ ವಿನೂತನ ಪ್ರಜಾಸೇವಾ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ

ಮಸ್ಕಿ: ಸರ್ಕಾರಿ ಕಚೇರಿಗಳಿಗೆ ಅಲೆದಾಡಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುವ ಬದಲು ಇನ್ನು ಮುಂದೆ ಗ್ರಾಮಗಳಿಗೆ ಅನ್ವೇಷಣೆ ಪ್ರಜಾಸೇವಾ ವಾಹನ ಬರಲಿದೆ. ಮನೆ ಬಾಗಿಲಿಗೆ ತೆರಳಿ ಜನರ ಕುಂದುಕೊರತೆಗಳನ್ನು ನೇರವಾಗಿ ಆಲಿಸಿ, ಸಂಬಂಧಪಟ್ಟ ಇಲಾಖೆಗಳ ಮೂಲಕ ಪರಿಹಾರ ಒದಗಿಸುವ ಉದ್ದೇಶದಿಂದ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ‘ಅನ್ವೇಷಣೆ’ ಹೆಸರಿನ ವಿನೂತನ ಪ್ರಜಾಸೇವಾ ಅಭಿಯಾನ ಆರಂಭಿಸಲಾಗಿದೆ ಎಂದು ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಆರ್.ಬಸನಗೌಡ ತುರ್ವಿಹಾಳ ಹೇಳಿದರು.

ಪಟ್ಟಣದಲ್ಲಿ ಭಾನುವಾರ ಅನ್ವೇಷಣೆ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅನ್ವೇಷಣೆ ವಾಹನಕ್ಕೆ ದೀಪಾವಳಿ ಸಂದರ್ಭದಲ್ಲಿ ಚಾಲನೆ ನೀಡಲಾಗಿದ್ದು, ಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೂ ವಾಹನ ತೆರಳಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ, ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕಲ್ಪಿಸುವುದು ಯೋಜನೆಯ ಉದ್ದೇಶವಾಗಿದ್ದು, ಸಾರ್ವಜನಿಕರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ ಮಾತನಾಡಿ, ಕಾಂಗ್ರೆಸ್ ಪಕ್ಷ ಬಡವರ ಪರವಾಗಿದೆ ಅದರಂತೆ ನಮ್ಮ ಕ್ಷೇತ್ರದ ಶಾಸಕರು ಸಹ ಬಡವರ ಬಗ್ಗೆ ಅಪಾರ ಕಾಳಜಿ ವಹಿಸಿ ಇಂತಹ ಯೋಜನೆಯನ್ನು ಜಾರಿಗೆ ತಂದು ಬಡವರ ಸೇವೆ ಮಾಡಲು ಮುಂದಾಗಿದ್ದಾರೆ ಎಂದು ಹೇಳಿದರು.

ತಹಸೀಲ್ದಾರ್ ಮಂಜುನಾಥ್ ಭೋಗಾವತಿ, ಮುಖಂಡರಾದ ಎಚ್.ಬಿ.ಮುರಾರಿ, ನಿರೂಪಾದೆಪ್ಪ ವಕೀಲರು ಮಾತನಾಡಿದರು. ಈ ಸಂದರ್ಭದಲ್ಲಿ ಗ್ರಾಮೀಣ ಘಟಕದ ಅಧ್ಯಕ್ಷ ಹನುಮಂತಪ್ಪ ಮುದ್ದಾಪುರ, ಎಪಿಎಂಸಿ ಅಧ್ಯಕ್ಷ ಸಿದ್ದನಗೌಡ ಮಾಟೂರು, ಅಂದಾನಪ್ಪ ಗುಂಡಳ್ಳಿ, ಬಸನಗೌಡ ಪೊಲೀಸ್ ಪಾಟೀಲ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಮಹಿಬೂಬ್ ಸಾಬ್, ಅದನಗೌಡ ಸಂತೆಕಲ್ಲೂರ, ಪುರಸಭೆ ಮುಖ್ಯಾಧಿಕಾರಿ ನರಸರೆಡ್ಡಿ, ಶಿವಣ್ಣ ನಾಯಕ, ನಾಗಭೂಷಣ್, ನಿಸಾರ್ ಅಹ್ಮದ್, ರಾಜೇಶ್ವರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಅನ್ವೇಷಣೆ ವಾಹನ ಚಾಲನೆ ಮಾಡುವ ಮೂಲಕ ವಾಹನಕ್ಕೆ ಚಾಲನೆ ನೀಡಿದರು. ನಂತರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಖುದ್ದು ಶಾಸಕರೇ ಜನರಿಗೆ ವಾಹನದ ಬಗ್ಗೆ ಮಾಹಿತಿ ನೀಡಿ ಇನ್ನು ಮುಂದೆ ನಿಮ್ಮ ಊರಿನ ಸಮಸ್ಯೆಗಳಿದ್ದರೆ ಈ ವಾಹನದ ನಂಬರ್ ಕರೆ ಮಾಡಿ ಅವರು ಬಂದು ನಿಮ್ಮ ಅಹವಾಲುಗಳನ್ನು ಸ್ವೀಕರಿಸಿ ಸಮಸ್ಯೆಯನ್ನು ಪರಿಹರಿಸುತ್ತಾರೆ.

- ಆರ್.ಬಸನಗೌಡ ತುರ್ವಿಹಾಳ,

ರಾಜ್ಯದಲ್ಲಿ ಪ್ರಥಮವಾಗಿ ವಿನೂತನ ಪ್ರಯತ್ನ

ಮಸ್ಕಿ ವಿಧಾನಸಭಾ ಕ್ಷೇತ್ರದ ಪ್ರತಿಯೊಂದು ಗ್ರಾಮಗಳಲ್ಲಿ ಸಮಸ್ಯೆಗಳಿದ್ದರೆ ಜನರು ಯಾರಿಗೆ ತಿಳಿಸಬೇಕು ಎಂದುಕೊಂಡು ಸಮಸ್ಯೆಗಳನ್ನು ಹೊತ್ತುಕೊಂಡು ಹಾಗೆ ಕುಳಿತುಬಿಡುತ್ತಾರೆ ಆದ್ದರಿಂದ ಕ್ಷೇತ್ರದ ಜನರ ಸಮಸ್ಯೆಗಳನ್ನು ಪರಿಹರಿಸಲು ಅವರ ಮನೆ ಬಾಗಿಲಿಗೆ ನಾವೇ ಹೋಗಬೇಕು ಎನ್ನುವ ಹಿತದೃಷ್ಟಿಯಿಂದ ಜನರ ಸೇವೆಗಾಗಿ ಹೊಸ ವಾಹನ ಖರೀದಿಸಿ ಜನರ ಸಮಸ್ಯೆಗೆ ಪರಿಹಾರ ನೀಡಲು ಸಿಬ್ಬಂದಿ ನೇಮಿಸಲಾಗಿದೆ. ಅಲ್ಲದೆ ಇನ್ನು ಮುಂದೆ ಗ್ರಾಮಗಳಲ್ಲಿ ಏನೇ ಸಮಸ್ಯೆಗಳಿದ್ದರೂ ಈ ವಾಹನದ ಹೆಲ್ಪ್ ಲೈನ್‌ಗೆ ಕರೆ ಮಾಡಿ ಅವರು ಬಂದು ನಿಮ್ಮ ಸಹಾಯಕ್ಕೆ ಮುಂದಾಗುತ್ತಾರೆ ಒಂದು ವೇಳೆ ಅಲ್ಲಿ ಸರಿಪಡಿಸದಿದ್ದರೆ ಸಮಸ್ಯೆಗಳು ನಮ್ಮ ಹಾಗೂ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದು ಶಾಸಕ ಆರ್.ಬಸನಗೌಡ ತಿಳಿಸಿದರು.

PREV
Read more Articles on
click me!

Recommended Stories

Dharwad: 45 ಎಕರೆ ಭೂಮಿಯಲ್ಲಿ 300 ಟನ್‌ ಈರುಳ್ಳಿ ಬೆಳೆದು 1 ಕೋಟಿ ಸಂಪಾದಿಸಿದ ರೈತ
ಆ್ಯಂಬುಲೆನ್ಸ್‌ಗಳು ಟೈಂಗೆ ಸರಿಯಾಗಿ ಬರದಿದ್ರೆ ₹3000 ದಂಡ: ಆರೋಗ್ಯ ಸಚಿವ ಯು.ಟಿ. ಖಾದರ್‌