ರಾಯಚೂರು; ಕಲುಷಿತ ನೀರು ಸೇವನೆ ಪ್ರಕರಣ, ಸಾವಿನ ಸಂಖ್ಯೆ 6ಕ್ಕೆ ಏರಿಕೆ!

By Suvarna News  |  First Published Jun 14, 2022, 5:44 PM IST
  • ಮೃತ ಮೂವರು ಕುಟುಂಬಸ್ಥರಿಗೆ ತಲಾ 10 ಲಕ್ಷ ರೂ.ಪರಿಹಾರ
  • ನಗರಸಭೆ ವತಿಯಿಂದ ಮೃತ ಮೂವರ ಕುಟುಂಬಸ್ಥರಿಗೆ ಚೆಕ್ ವಿತರಣೆ
  • ಜಿಲ್ಲಾ ಉಸ್ತುವಾರಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ರಿಂದ ಚೆಕ್ ವಿತರಣೆ

ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್

ರಾಯಚೂರು (ಜೂ.14): ರಾಯಚೂರು ನಗರಸಭೆ ಸರಬರಾಜು ಮಾಡಿದ ಕಲುಷಿತ ನೀರು ಸೇವಿಸಿ ಪ್ರಾಣ ಕಳೆದುಕೊಂಡವರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಈಗ ಮತ್ತೆ ಸಾವಿನ ಸರಣಿ ಮುಂದುವರೆದಿದೆ. ಕಲುಷಿತ ನೀರು ಕುಡಿದ ನೂರಾರು ಜನರು ಆಸ್ಪತ್ರೆಗಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ನಿಮ್ಮ ಏಷ್ಯಾನೆಟ್ ಸುವರ್ಣನ್ಯೂಸ್ ಬಿಗ್ 3 ರಲ್ಲಿ ಜೂನ್ 1 ಮತ್ತು ಜೂನ್ 7 ರಂದು ವಿಸ್ತೃತವಾಗಿ ವರದಿ ಮಾಡಿತ್ತು. ಏಷ್ಯಾನೆಟ್ ಸುವರ್ಣನ್ಯೂಸ್ 3  ವರದಿಯಿಂದ ರಾಯಚೂರು ನಗರಸಭೆ, ರಾಯಚೂರು ಜಿಲ್ಲಾಡಳಿತ ಎಚ್ಚತ್ತುಕೊಂಡ ಕಲುಷಿತಗೊಂಡ ಜಲ ಶುದ್ಧೀಕರಣ ಘಟಕ ಸ್ವಚ್ಚತಾ ಮಾಡುವ ಕಾರ್ಯಕ್ಕೆ ಮುಂದಾಗಿದೆ. 

Latest Videos

undefined

ಇಂದು ರಾಯಚೂರು ಜಿಲ್ಲೆಗೆ ಜಿಲ್ಲಾ ಉಸ್ತುವಾರಿ ಸಚಿವ ಶಂಕರ್. ಬಿ.ಪಾಟೀಲ್ ಮುನೇನಕೊಪ್ಪ ಭೇಟಿ ‌ನೀಡಿದ್ರು. ರಾಯಚೂರಿಗೆ ಆಗಮಿಸಿದ ಸಚಿವರು ಬೆಳಗ್ಗೆಯೇ ಅಧಿಕಾರಿಗಳ ‌ಸಮೇತ ರಾಂಪೂರ ಜಲ ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿದ್ರು. ಜಲ ಶುದ್ಧೀಕರಣ ಘಟಕವನ್ನು ಪರಿಶೀಲನೆ ನಡೆಸಿದ ಉಸ್ತುವಾರಿ ಸಚಿವರು ಹಾಗೂ ಶಾಸಕರು ಮತ್ತು ಜಿಲ್ಲಾಧಿಕಾರಿ ಎಲ್. ಚಂದ್ರಶೇಖರ ‌ನಾಯಕ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ‌ಜಲ ಶುದ್ಧೀಕರಣ ಘಟಕವನ್ನು ವೀಕ್ಷಣೆ ಮಾಡಿದ್ರು. 

Ballari ಪಾಲಿಕೆಯ ಆಯುಕ್ತೆಯ ದಿಟ್ಟ ನಿರ್ಧಾರಕ್ಕೆ, ಅಧಿಕಾರಿಗಳಿಗೆ ನಡುಕ!

ರಾಂಪೂರ ಶುದ್ಧೀಕರಣ ಘಟಕದ ನೀರು ಸೇವಿಸಿದ ಜಿಲ್ಲಾ ಉಸ್ತುವಾರಿ ಸಚಿವರು: ರಾಯಚೂರು ‌ನಗರಸಭೆ ಕಲುಷಿತ ನೀರು ಸೇವಿಸಿ ಐವರು ಸಾವನ್ನಪ್ಪಿದ್ದಾರೆ‌. ನೂರಾರು ಜನರು ಆಸ್ಪತ್ರೆಗೆ ದಾಖಲಾಗಿ ನರಳಾಟ ನಡೆಸಿದ್ದಾರೆ. ಇದರಿಂದಾಗಿ ಜನರು ನಗರಸಭೆ ಸರಭರಾಜು ಮಾಡುವ ನೀರು ಕುಡಿಯುವ ‌ಹಿಂದೇಟು ಹಾಕುವ ಪರಿಸ್ಥಿತಿ ‌ನಿರ್ಮಾಣವಾಗಿದೆ. ಹೀಗಾಗಿ ರಾಯಚೂರು ನಗರಕ್ಕೆ ಆಗಮಿಸಿದ ಉಸ್ತುವಾರಿ ಸಚಿವ ಶಂಕರ್ ಬಿ.ಪಾಟೀಲ್ ಮುನೇನಕೊಪ್ಪ ರಾಂಪೂರ ಜಲ ಶುದ್ಧೀಕರಣ ಘಟಕಕ್ಕೆ ಅಧಿಕಾರಿಗಳ ಸಮೇತ ಭೇಟಿ ನೀಡಿ ನೀರು ಖುದ್ದು ಉಸ್ತುವಾರಿ ಸಚಿವ ಶಂಕರ್.ಬಿ.ಮುನೇನಕೊಪ್ಪ ಸೇವಿಸಿ ಜನರಲ್ಲಿನ‌ ಆತಂಕ ದೂರು ಮಾಡಿದ್ರು.

ಮೃತ ಕುಟುಂಬಸ್ಥರಿಗೆ ತಲಾ 10 ಲಕ್ಷ ರೂ. ಪರಿಹಾರ ವಿತರಣೆ: 
ನಗರಸಭೆ ಸರಭರಾಜು ಮಾಡಿದ ಕಲುಷಿತ ನೀರು ಸೇವಿಸಿ ಸಾವನ್ನಪ್ಪಿದ ಕುಟುಂಬಸ್ಥರಿಗೆ ನಗರಸಭೆ ವತಿಯಿಂದ ಮೃತರ ಕುಟುಂಬಸ್ಥರಿಗೆ ತಲಾ 10 ಲಕ್ಷ ರೂಪಾಯಿ ಪರಿಹಾರದ ಚೆಕ್ ವಿತರಣೆ ‌ಮಾಡಿದ್ರು. ಆ ಬಳಿಕ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಶಂಕರ್ .ಬಿ.ಪಾಟೀಲ್ ‌.  ರಾಯಚೂರಿನಲ್ಲಿ ಇತ್ತೀಚೆಗೆ ಕಲುಷಿತ ನೀರಿನಿಂದ ಕೆಲವರು ಸಾವನಪ್ಪಿದ್ದು, ಹಲವರು ಆಸ್ಪತ್ರೆಯಲ್ಲಿ‌ ಚಿಕಿತ್ಸೆ ಪಡೆಯುತ್ತಿದ್ದು, ಇದೊಂದು ಕಹಿ ಘಟನೆಯಾಗಿದ್ದು, ಅತ್ಯಂತ ನೋವಿನ ಸಂಗತಿಯಾಗಿದೆ ಎಂದರು.

Hubballi Kims ಆಸ್ಪತ್ರೆಯಲ್ಲಿ ಮಗು ಕಳ್ಳತನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!

ಇಂದು ಕುಟುಂಬಸ್ಥರಿಗೆ ನಗರಸಭೆಯ ಎಲ್ಲಾ ಸದಸ್ಯರು ಒಮ್ಮತದಿಂದ ಮೃತಪಟ್ಟ ಕುಟುಂಬಕ್ಕೆ 10 ಲಕ್ಷ ರೂ. ಕೊಡಲು ತೀರ್ಮಾನಿಸಿರುವುದು ಹೆಮ್ಮೆಯ ವಿಚಾರವಾಗಿದ್ದು, ಕುಟುಂಬಸ್ಥರಿಗೆ ದೈರ್ಯ ತುಂಬುವ ಹಾಗೂ ಆರ್ಥಿಕ ನೆರವು ನೀಡುವ ಕೆಲಸವಾಗಬೇಕಾಗಿದ್ದು, ಜೊತೆಗೆ ಕಲುಷಿತ ನೀರು ಪೂರೈಕೆಗೆ ಕಾರಣವಾದ ಹಾಗೂ ನೀರು ಪೂರೈಕೆಯಲ್ಲಿ ನಿರ್ಲಕ್ಷ್ಯತನ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಇನ್ನು ಮುಂದೆ ಈ ರೀತಿಯಾದ ತಪ್ಪುಗಳಾಗದಂತೆ ಅತ್ಯಂತ ಜವಾಬ್ದಾರಿಯುತವಾಗಿ ಸಮಸ್ಯೆಗಳನ್ನು ಪರಿಹರಿಸಲು ಕಾರ್ಯನಿರ್ವಹಿಸಬೇಕು. ಸರ್ಕಾರದ ಮಟ್ಟದಲ್ಲಿ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿ ನಗರಸಭೆಯನ್ನು ಮೇಲ್ದರ್ಜೆಗೇರಿಸಲು ಸರ್ಕಾರದೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.

ರಾಯಚೂರು ನಗರದ ಎಲ್ಲಾ ನೀರಿನ ಟ್ಯಾಂಕ್ ಗಳ ಸ್ವಚ್ಚತಾ ಕಾರ್ಯ: 
ಐವರ ಸಾವಿನ ಬಳಿಕ ಎಚ್ಚತ್ತುಕೊಂಡ ರಾಯಚೂರು ನಗರಸಭೆ ಮತ್ತು ‌ರಾಯಚೂರು ಜಿಲ್ಲಾಡಳಿತ ಈಗ ನಗರ ವಿವಿಧ ವಾರ್ಡ್ ಗಳಿಗೆ ನೀರು ಸರಭರಾಜು ‌ಮಾಡುವ ವಾರ್ಡ್ ಗಳಲ್ಲಿ ನ ಕುಡಿಯುವ ನೀರಿನ ಟ್ಯಾಂಕ್ ಗಳನ್ನು ಸ್ವಚ್ಛತೆಗೆ ‌ಮುಂದಾಗಿದೆ. 

ಇನ್ನೂ ಈ ವೇಳೆ ಸಂಸದ ರಾಜಾ ಅಮರೇಶ್ವರ ನಾಯಕ, ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್, ನಗರಸಭೆ ಅಧ್ಯಕ್ಷೆ ಲಲಿತಾ ಕಡಗೋಲ್, ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ್ ನಾಯಕ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ನಿಖಿಲ್.ಬಿ, ನಗರಸಭೆ ಪೌರಾಯುಕ್ತ ಗುರುಲಿಂಗಪ್ಪ, ಸೇರಿದಂತೆ ವಾರ್ಡ್ ಸದಸ್ಯರು ಉಪಸ್ಥಿತರಿದ್ದರು.

click me!