ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ 40 ದಿನದ ಹಸುಗೂಸು ಕಳ್ಳತನವಾದ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಆಸ್ಪತ್ರೆಯಲ್ಲಿ ತಾಯಿ ಕೈಯಿಂದಲೇ ನಾಪತ್ತೆ ಆಗಿದ್ದ ಮಗು, ಈಗ ಪತ್ತೆಯಾಗಿದೆ.
ಹುಬ್ಬಳ್ಳಿ (ಜೂ.14): ಹುಬ್ಬಳ್ಳಿಯ (Kims) ಕಿಮ್ಸ್ (Hubballi) ಆಸ್ಪತ್ರೆಯಲ್ಲಿ 40 ದಿನದ ಹಸುಗೂಸು ಕಳ್ಳತನವಾದ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಆಸ್ಪತ್ರೆಯಲ್ಲಿ ತಾಯಿ ಕೈಯಿಂದಲೇ ನಾಪತ್ತೆ ಆಗಿದ್ದ ಮಗು, ಈಗ ಪತ್ತೆಯಾಗಿದ್ದು ಪ್ರಕರಣ ತೀವ್ರ ಕುತೂಹಲ ಹುಟ್ಟುಹಾಕಿದೆ. ಮಗು ಕಳುವಿನ ಪ್ರಕರಣದಲ್ಲಿ ತಾಯಿಯೇ ಸೂತ್ರದಾರಿಯೇ? ಎಂಬ ಅನುಮಾನ ಕೂಡ ಹುಟ್ಟಿಕೊಂಡಿದೆ.
40 ದಿನದ ಹಸುಗೂಸುನ್ನು ತನ್ನ ಕೈಯಿಂದ ಕಸಿದುಕೊಂಡು ಕದ್ದೊಯ್ದಿದ್ದಾರೆ ಎಂದು ಮಗುವಿನ ತಾಯಿ ಉಮ್ಮೇ ಜೈನಾಬ್ ಹುಸೇನ್ ಸಾಬ್ ಶೇಖ್ ಎಂಬುವವರು ನಿನ್ನೆ ಆರೋಪಿಸಿದ್ದರು. ಕಿಮ್ಸ್ ನಲ್ಲಿ ಮಗು ಕಳ್ಳತನ ಪ್ರಕರಣ ಬೆಳಕಿಗೆ ಬರುತ್ತಿದೆ ಅಲರ್ಟ್ ಆದ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಲಾಭೂರಾಮ್ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ. ಮೂರು ಪ್ರತ್ಯೇಕ ತಂಡಗಳ ರಚಿಸಿ ತನಿಕೆಗೆ ಆದೇಶಿಸಿದ್ದರು. ಪ್ರಕರಣದ ತನಿಖೆ ಚುರುಕುಗೊಳ್ಳುತ್ತಿದ್ದಂತೆ ಏಕಾಏಕಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯ ಮಗು ಪತ್ತೆಯಾಗಿದೆ.
undefined
ಕೋಟೆನಾಡಿಗೆ ಮೆಡಿಕಲ್ ಕಾಲೇಜ್ ಬಂದ್ರೆ 200 ವಿದ್ಯಾರ್ಥಿಗಳಷ್ಟೇ ಹೆಲ್ಪ್ ಆಗೋದು: ಮುರುಗ ಶರಣರು
ರಾತ್ರೋರಾತ್ರಿ ಮಗು ಪತ್ತೆ.!
ಹೌದು, ಮಗು ಕಳುವಿನ ಪ್ರಕರಣದ ಬಗ್ಗೆ ತಲೆಕೆಡಿಸಿಕೊಂಡಿದ್ದ ಪೊಲೀಸರು ಪ್ರತ್ಯೇಕ ತಂಡಗಳನ್ನು ರಚಿಸಿಕೊಂಡು ತನಿಖೆ ಚುರಕುಗೊಳಿಸುತ್ತಿದ್ದಂತೆ ನಾಪತ್ತೆಯಾಗಿದ್ದ 40 ದಿನದ ಹಸುಗೂಸು ಕಿಮ್ಸ್ ನಲ್ಲಿಯೇ ಪತ್ತೆಯಾಗಿದೆ. ಕಿಮ್ಸ್ ಮಕ್ಕಳ ವಾರ್ಡ್ ನ ಹಿಂಭಾಗದಲ್ಲಿ ಮಗುವನ್ನು ಬಿಟ್ಟು ಹೋಗಲಾಗಿದೆ. ಮಗುವಿನ ಅಳು ಗಮನಿಸಿದ ಸ್ಥಳೀಯರು ಕಿಮ್ಸ್ ಸಿಬ್ಬಂದಿಗೆ ವಿಷಯ ಮುಟ್ಟಿಸಿದ್ದು, ಸದ್ಯ ಮಗುವನ್ನು ಸುರಕ್ಷಿತವಾಗಿ ಆಸ್ಪತ್ರೆಯ ಇರಿಸಲಾಗಿದೆ.
ಹಾಗಿದ್ದರೆ ಮಗು ಕದ್ದವರು ಯಾರು? ತಾಯಿ ಕೈಯಿಂದ ಮಗು ಕಿತ್ತುಕೊಂಡ ಹೋಗಲು ತಾಯಿಯ ಸಹಕಾರ ಇತ್ತಾ? ಎಂಬ ಸಂಶಯ ಹುಟ್ಟಿಕೊಂಡಿದೆ. ಇದಕ್ಕೆ ಬಲವಾದ ಕಾರಣಗಳು ಇವೆ. ಮಗು ಕಸಿದುಕೊಂಡು ಪರಾರಿಯಾಗಿದ್ದರೆ ಎಂದು ಆರೋಪಿಸಿದ್ದ ತಾಯಿ, ಮಗು ಇಲ್ಲದ ಬಗ್ಗೆ ಆಕೆಯ ಮುಖದಲ್ಲಿ ಕೊರಗು ಇರಲಿಲ್ಲ. ಅಷ್ಟೇ ಅಲ್ಲ ಕೆಲ ಪೋನ್ ಕರೆಗಳ ಮಾಹಿತಿ ಪೊಲೀಸರು ಕಲೆ ಹಾಕಿದ್ದು ನೈಜ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.
ಇಸ್ಕಾನ್‌ನ ಶ್ರೀ ರಾಜಾಧಿರಾಜ ಗೋವಿಂದ ದೇವಸ್ಥಾನ ಲೋಕಾರ್ಪಣೆ
ಅನಾರೋಗ್ಯದಿಂದ ಬಳಲುತ್ತಿದ್ದ ಮಗು!
ಕುಂದಗೋಳದ ನೆಹರೂ ನಗರದ ನಿವಾಸಿಯಾಗಿರು ಮಹಿಳೆ ಉಮ್ನೇ ಜೈನಾಬ್ ಶೇಖ್, ಅನಾರೋಗ್ಯದ ಹಿನ್ನೆಲೆ ಜೂನ್ 10 ರಂದು ಕಿಮ್ಸ್ ಗೆ ಮಗುವನ್ನು ದಾಖಲಿಸಿದ್ದರು. ಹೆಮೊರಾಜಿಕಲ್ ಡಿಸೀಸ್ ಆಫ್ ನ್ಯೂ ಬಾರ್ನ್ ರೋಗದಿಂದ ಬಳಲುತ್ತಿದ್ದ ಮಗುವಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಮಗುವಿನ ತೂಕ ಹೆಚ್ಚಿಸುವ ಉದ್ದೇಶದಿಂದ ಕಿಮ್ಸ್ ಗೆ ದಾಖಲು ಮಾಡಲು ವೈದ್ಯರು ಹೇಳಿದ್ದರು. ಸರ್ಕಾರಿ ಆಸ್ಪತ್ರೆಯ ವೈದ್ಯರ ಸಲಹೆ ಮೇರೆಗೆ ಕಿಮ್ಸ್ ಗೆ ದಾಖಲು ಮಾಡಲಾಗಿತ್ತು. ಆದ್ರೆ ಏಕಾಏಕಿ ನಿನ್ನೆ ಮಧ್ಯಾಹ್ನ ಮಗು ಕಳುವಾದ ಬಗ್ಗೆ ಪೋಷಕರು ಆರೋಪಿಸಿದ್ದರು.