Union Budget 2022: ರಾಯಚೂರು ಜಿಲ್ಲೆಗೆ ನಿರಾಸೆ ಮೂಡಿಸಿದ ಕೇಂದ್ರ ಬಜೆಟ್‌

Kannadaprabha News   | Asianet News
Published : Feb 02, 2022, 08:01 AM ISTUpdated : Feb 02, 2022, 09:31 AM IST
Union Budget 2022: ರಾಯಚೂರು ಜಿಲ್ಲೆಗೆ ನಿರಾಸೆ ಮೂಡಿಸಿದ ಕೇಂದ್ರ ಬಜೆಟ್‌

ಸಾರಾಂಶ

*  ಏಮ್ಸ್‌, ಜವಳಿ ಪಾರ್ಕ್ ಘೋಷಣೆಯಿಲ್ಲ *  ರೈಲು ಯೋಜನೆಗಳಿಗೆ, ಐಐಐಟಿಗೆ, ವಿಮಾ ನಿಲ್ದಾಣಕ್ಕೆ ಹಣ ಕೊಟ್ಟಿಲ್ಲ *  2022-23 ನೇ ಸಾಲಿನ ಬಜೆಟ್‌ ರಾಯಚೂರು ಜಿಲ್ಲೆಯ ಪಾಲಿಗೆ ಶೂನ್ಯತೆ

ರಾಯಚೂರು(ಫೆ.02):  ಜಿಲ್ಲೆಗೆ ಹೊಸದಾಗಿ ಏಮ್ಸ್‌ ಸಂಸ್ಥೆ, ಜವಳಿ ಪಾರ್ಕ್ ಘೋಷಣೆ, ವಿಮಾನ ನಿಲ್ದಾಣ ನಿರ್ಮಾಣ, ಐಐಐಟಿ, ರೈಲು ಯೋಜನೆಗಳು ಅನುದಾನ ನೀಡುವುದು ಹೀಗೆ ಹತ್ತು ಹಲವು ನಿರೀಕ್ಷೆಗಳನ್ನು ಹುಟ್ಟಿಸಿದ್ದ ಕೇಂದ್ರ ಬಜೆಟ್‌(Union Budget) ಕೊನೆಗೂ ನಿರಾಸೆ ಮೂಡಿಸಿದೆ.

ನವದೆಹಲಿಯ ಲೋಕಸಭೆಯಲ್ಲಿ ಕೇಂದ್ರ ಸರ್ಕಾರದ(Central Government) ವಿತ್ತ ಸಚಿವೆ ನಿರ್ಮಲಾ ಸೀತರಾಮನ್‌(Nirmala Sitharaman) ಅವರು ಮಂಗಳವಾರ ಮಂಡಿಸಿದ 2022-23 ನೇ ಸಾಲಿನ ಬಜೆಟ್‌ ಜಿಲ್ಲೆಯ ಪಾಲಿಗೆ ಶೂನ್ಯತೆಯನ್ನು ದಾಯಪಾಲಿಸಿದೆ.

Union Budget 2022: ಬಜೆಟ್‌ನಲ್ಲಿ ಸಿಕ್ಕಿದ್ದು ಕರ್ನಾಟಕಕ್ಕೆ 2 ಯೋಜನೆ... ಲೆಕ್ಕಕ್ಕುಂಟು ಆಟಕ್ಕಿಲ್ಲ!

ಐಐಐಟಿಯಲ್ಲಿ ನಿರಾಸೆ:

ದೇಶದ ಪ್ರತಿಷ್ಠಿತ ಸಂಸ್ಥೆಯಾಗಿರುವ ಭಾರತೀಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(IIT)ಯಿಂದ ವಂಚಿತಗೊಂಡಿರುವ ಜಿಲ್ಲೆಗೆ ಹೆಸರಿಗೆ ಮಾತ್ರ ಐಐಐಟಿ ಸಂಸ್ಥೆಯನ್ನು ನೀಡಿರುವ ಕೇಂದ್ರವು ಕಳೆದ ನಾಲ್ಕು ವರ್ಷಗಳಿಂದ ಅನುದಾನ ನೀಡದೇ ನಿರ್ಲಕ್ಷ್ಯವಹಿದೆ. ಸ್ಥಳೀಯ ಯರಮರಸ್‌ನಲ್ಲಿರುವ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಪ್ರಸಕ್ತ ಸಾಲಿನಿಂದ ಆನ್‌ಲೈನ್‌ ಮೂಲಕ ಟ್ರಿಪ್ಪಲ್‌ ಐಟಿ ತರಗತಿಗಳು ಆರಂಭಗೊಂಡಿವೆ. ಟ್ರಿಪ್ಪಲ್‌ ಐಟಿಗೆ ಐಟಿ-ಬಿಟಿ ಇಲಾಖೆಯಿಂದ 2.75 ಕೋಟಿ ರು. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ 7.46 ಕೋಟಿ ರು. ಸೇರಿದಂತೆ ಒಟ್ಟಾರೆ 10.83 ಕೋಟಿ ರು. ಅನುದಾನ(Grants) ಮಂಜೂರಾಗಿದ್ದು, ಆದರೆ ಬಜೆಟ್‌ನಲ್ಲಿ ವಿಶೇಷ ಅನುದಾನ ನೀಡಿ ಪೂರ್ಣ ಪ್ರಮಾಣದಲ್ಲಿ ಐಐಐಟಿ ನಡೆಸಲು ಅನುಕೂಲವಾಗಲಿದೆ ಎನ್ನುವ ಆಸೆ ಹೊಂದಿದ್ದ ಜನರಿಗೆ ನಿರಾಸೆಯಾಗಿದೆ.

ಹಿಂದುಳಿದ ಜಿಲ್ಲೆಗಳನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಜಿಲ್ಲೆ ಯೋಜನೆಯಡಿ ರಾಯಚೂರು(Raichur) ಜಿಲ್ಲೆ ಆಯ್ಕೆಯಾಗಿ ಮೂರ್ನಾಲ್ಕು ವರ್ಷ ಗತಿಸುತ್ತಿದ್ದರು ಸಹ ವಿಶೇಷ ಅನುದಾನ ಕೊಟ್ಟಿಲ್ಲ. ಇದರಿಂದಾಗಿ ಜಿಲ್ಲೆಯ ಆರೋಗ್ಯ, ಶಿಕ್ಷಣ, ಕೃಷಿ ವಲಯಗಳಿಗೆ ಆರ್ಥಿಕ ಸೌಕರ್ಯ ಒದಗಿಸುವುದು, ಕೌಶಾಲ್ಯಾಭಿವೃದ್ಧಿಗೆ ಆದ್ಯತೆ, ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡವುದಕ್ಕೆ ಕಷ್ಟವಾಗುತ್ತಿದೆ.

ವಿಮಾನ ನಿಲ್ದಾಣಕ್ಕಿಲ್ಲ ಅನುದಾನ:

ಜಿಲ್ಲೆಯ ಜನತೆಯ ಬಹುದಿನಗಳ ಕನಸಾದ ರಾಯಚೂರು ವಿಮಾನ ನಿಲ್ದಾಣವು(Raichur Airport) ಈಗ ನನಸಾಗುವ ಹಂತಕ್ಕೆ ಬಂದಿದೆ. ಈಗಾಗಲೇ ಯರಮರಸ್‌ ಹೊರವಲಯದಲ್ಲಿ 404 ಎಕರೆ ಭೂಮಿಯನ್ನು ಇದಕ್ಕಾಗಿ ಕಾಯ್ದಿರಿಸಲಾಗಿದೆ. ಕಲ್ಯಾಣ ಕರ್ನಾಟಕ(Kalyana Karnataka) ಪ್ರದೇಶಾಭಿವೃದ್ಧಿ ಯೋಜನೆಯಡಿ 40 ಕೋಟಿ ರು. ಅನುದಾನ ಮತ್ತು ಡಿಎಂಎಫ್‌ ಅಡಿಯಲ್ಲಿ 10 ಕೋಟಿ ಸೇರಿದಂತೆ ಒಟ್ಟು 50 ಕೋಟಿ ಅನುದಾನ ಮೀಸಲಿಡಲಾಗಿದೆ. ಇದಕ್ಕೆ ಸಂಬಂಧಿಸಿದ ವಿಸ್ತತ ಯೋಜನಾ ವರದಿ(DPR) ಸಿದ್ಧವಾಗುತ್ತಿದ್ದು, ಕೇಂದ್ರ ಬಜೆಟ್‌ನಲ್ಲಿ ವಿಶೇಷ ಅನುದಾನ ನೀಡಿದ್ದಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುಕೂಲವಾಗುತ್ತಿತ್ತು. ಆದರೆ ಆ ಕೆಲಸವನ್ನು ಮಾಡದ ಕಾರಣಕ್ಕೆ ನಿರಾಸೆ ಮೂಡಿಸುವಂತೆ ಮಾಡಿದೆ.

ಕಳೆದ ಎರಡು ದಶಕಗಳ ಹಿಂದೆ ಘೋಷಣೆಯಾಗಿದ್ದ ಗದಗ-ವಾಡಿ ರೈಲು ಯೋಜನೆಗೆ(Gadag-Wadi Rail Project) ಭೂ ಸ್ವಾಧೀನ(Land Acquisition) ಪ್ರಕ್ರಿಯೆ ಪರಿಪೂರ್ಣಗೊಳಿಸಲು ಹೆಚ್ಚುವರಿ ಅನುದಾನವನ್ನು ಬಜೆಟ್‌ನಲ್ಲಿ ನೀಡಲಿದ್ದಾರೆ ಎನ್ನುವ ಒತ್ತಾಯಕ್ಕೆ ತಣ್ಣೀರು ಎರಚಿದಂತಾಗಿದೆ. ಇನ್ನು ರಾಯಚೂರು ನಗರದ ಕೇಂದ್ರ ರೈಲು ನಿಲ್ದಾಣದಲ್ಲಿ ಎಸ್ಕಲೇಟರ್‌ ನಿರ್ಮಾಣ, ಮೇಲ್ದರ್ಜೆಗೇರಿಸಲು ಹೆಚ್ಚಿನ ಅನುದಾನ ನೀಡಬೇಕು ಎನ್ನುವುದು ಖಾಲಿ ಬೇಡಿಕೆಯಾಗಿಯೇ ಉಳಿದುಬಿಟ್ಟಿದೆ.

Union Budget 2022 ದೇಶದ ಆರ್ಥಿಕತೆಯ ಚಿತ್ರಣವನ್ನೇ ಬದಲಿಸುವ ಬಜೆಟ್: ಸಚಿವ ನಿರಾಣಿ

ಒಟ್ಟಿನಲ್ಲಿ ಕೇಂದ್ರ ಬಜೆಟ್‌ ನಿರ್ದಿಷ್ಟವಾಗಿ ಜಿಲ್ಲೆಗೆ ಹಾಗೂ ಒಟ್ಟಾರೆಯಾಗಿ ವಿವಿಧ ವರ್ಗಕ್ಕೆ ಯಾವುದೇ ರೀತಿಯಲ್ಲಿ ಹೇಳಿಕೊಳ್ಳುವಷ್ಟು ಅಂಶಗಳನ್ನು ಘೋಷಣೆ ಮಾಡದ್ದಕ್ಕೆ ಸಾಮಾನ್ಯ ಜನರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ಸುಸ್ಥಿರ ಅಭಿವೃದ್ಧಿಗೆ ಕೇಂದ್ರ ಬಜೆಟ್‌ ಪೂರಕ: ಶೆಟ್ಟರ್‌

ಸಮಾಜದ ಎಲ್ಲ ವರ್ಗಗಳನ್ನು ಒಳಗೊಂಡಂತೆ ಸಂಘಟಿತ ಹಾಗೂ ಸುಸ್ಥಿರ ಅಭಿವೃದ್ಧಿಗೆ ಪ್ರಸಕ್ತ ಸಾಲಿನ ಕೇಂದ್ರ ಬಜೆಟ್‌(Union Budget) ಪೂರಕವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌(Jagadish Shettar) ಹೇಳಿದ್ದಾರೆ. ನದಿಜೋಡಣೆಗೆ ಒತ್ತು ನೀಡಿರುವುದು ಅಗತ್ಯ ಹಾಗೂ ಅನಿವಾರ್ಯವಾಗಿದೆ ಎಂದು ತಿಳಿಸಿದ್ದಾರೆ.
 

PREV
Read more Articles on
click me!

Recommended Stories

ದುಬಾರೆ ಶಿಬಿರದಲ್ಲಿ ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ತಕ್ಷ ಹೆಸರಿನ ಆನೆ ಸಾವು
ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ