ರಾಯಚೂರು: ಮಾಲೆ ಧರಿಸಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆದ ಮುಸ್ಲಿಂ ವ್ಯಕ್ತಿ!

By Kannadaprabha News  |  First Published Jan 3, 2025, 9:04 AM IST

2014ರಲ್ಲಿ ಸ್ನೇಹಿತರೊಂದಿಗೆ ಶಬರಿಮಲೆಗೆ ತೆರಳಿದ್ದ ಬಾಬು ಅವರು ಅಯ್ಯಪ್ಪ ಸ್ವಾಮಿಗೆ ಬೇಡಿಕೊಂಡಿದ್ದು ಅದು ಈಡೇರಿದ್ದರಿಂದ ಅಂದಿನಿಂದ ಅಯ್ಯಪ್ಪ ಸ್ವಾಮಿ ಮೇಲೆ ಅಪಾರ ಭಕ್ತಿಯನ್ನು ಬೆಳೆಸಿಕೊಂಡು ಪ್ರತಿವರ್ಷ ಮಾಲೆ ಧರಿಸಿ, ದರ್ಶನ ಪಡೆದು, ಸ್ವಾಮಿಯ ಕೃಪೆಗೆ ಪಾತ್ರರಾಗುತ್ತಿದ್ದಾರೆ.


ರಾಯಚೂರು(ಜ.03): ಮುಸ್ಲಿಂ ಸಹೋದರನೊಬ್ಬ ಶಬರಿಮಲೆಗೆ ತೆರಳಿ ಅಯ್ಯಪ್ಪ ಸ್ವಾಮಿ ಮಾಲೆ ಧಾರಣೆ ಮಾಡಿ, ದರ್ಶನ ಪಡೆದು ಭಕ್ತಿಯ ಜೊತೆಗೆ ಭಾವೈಕ್ಯತೆಯ ಸಂದೇಶ ಸಾರಿದ್ದಾನೆ.

ಜಿಲ್ಲೆ ದೇವದುರ್ಗದ ಮುಸ್ಲಿಂ ಸಮಾಜದ ಬಾಬು ಗೌರಂಪೇಟೆ ಅವರು ಅಯ್ಯಸ್ವಾಮಿಗಳ ಭಕ್ತರಾಗಿದ್ದಾರೆ. ಕಳೆದ 14 ವರ್ಷಗಳಿಂದ ಅಯ್ಯಪ್ಪಸ್ವಾಮಿ ಮಾಲೆ ಧರಿಸುತ್ತಿದ್ದಾರೆ. ಕಳೆದ 14 ವರ್ಷಗಳಿಂದ ಈ ಸೇವೆಯನ್ನು ಮಾಡುತ್ತಾ ಬರುತ್ತಿದ್ದಾರೆ. ಮಕರ ಸಂಕ್ರಾಂತಿ ಪ್ರಯುಕ್ತ ತಮ್ಮ ಸ್ನೇಹಿತರೊಂದಿಗೆ ಶಬರಿಮಲೈಗೆ ತೆರಳುವ ಬಾಬು ಗೌರಂಪೇಟೆ ಅವರು ಪಂಪಾನಧಿಯಲ್ಲಿ ಸ್ನಾನ ಮಾಡಿ ಮಾಲೆ ಧರಿಸಿ, ಪ್ರತ್ಯೇಕ ಪಾಸ್ ಪಡೆದು ಅಯ್ಯಪ್ಪಸ್ವಾಮಿಯ ದರ್ಶನ ಮಾಡುವ ಪರಿಪಾಠವನ್ನು ಬೆಳೆಸಿಕೊಂಡಿದ್ದರೆ. ಪ್ರಸಕ್ತ ಸಾಲಿನಲ್ಲಿ ಕಳೆದ ಡಿ.30ಕ್ಕೆ ಶಬರಿಮಲೆಗೆ ತೆರಳಿದ್ದ ಬಾಬು ಮಾಲೆ ಧರಿಸಿ, ತಲೆ ಮೇಲೆ ಇರುಮುಡಿಯನ್ನಿಟ್ಟುಕೊಂಡು ಪಾದಯಾತ್ರೆ ಮಾಡಿ, ಸರದಿ ಸಾಲಲ್ಲಿ ನಿಂತು ಡಿ.31ಕ್ಕೆ ದರ್ಶನ ಪಡೆದು ಪುನೀತರಾಗಿದ್ದು, ಅಂದು ಮಧ್ಯರಾತ್ರಿ ಹೊಸವರ್ಷ ಆಚರಿಸಿ ಮಾಲೆಯನ್ನು ವಿರಮಿಸಿದ್ದಾರೆ.

Tap to resize

Latest Videos

ಹುಬ್ಬಳ್ಳಿ ಸಿಲಿಂಡ‌ರ್ ಸ್ಫೋಟ: ಗಾಯಗೊಂಡಿದ್ದ 8 ಅಯ್ಯಪ್ಪ ಮಾಲಾಧಾರಿಗಳು ಸಾವು

ಅಪಾರ ನಂಬಿಕೆ: 

2014ರಲ್ಲಿ ಸ್ನೇಹಿತರೊಂದಿಗೆ ಶಬರಿಮಲೆಗೆ ತೆರಳಿದ್ದ ಬಾಬು ಅವರು ಅಯ್ಯಪ್ಪ ಸ್ವಾಮಿಗೆ ಬೇಡಿಕೊಂಡಿದ್ದು ಅದು ಈಡೇರಿದ್ದರಿಂದ ಅಂದಿನಿಂದ ಅಯ್ಯಪ್ಪ ಸ್ವಾಮಿ ಮೇಲೆ ಅಪಾರ ಭಕ್ತಿಯನ್ನು ಬೆಳೆಸಿಕೊಂಡು ಪ್ರತಿವರ್ಷ ಮಾಲೆ ಧರಿಸಿ, ದರ್ಶನ ಪಡೆದು, ಸ್ವಾಮಿಯ ಕೃಪೆಗೆ ಪಾತ್ರರಾಗುತ್ತಿದ್ದಾರೆ.

ಮಾದರಿ: 

ಶಬರಿಮಲೆ ಅಯ್ಯಪ್ಪಸ್ವಾಮಿ ದೇವರಿಗೆ ಜಾತ್ಯತೀತವಾಗಿ ನಡೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಿರುವ ಸಮಯದಲ್ಲಿ ಬಾಬು ಗೌರಂಪೇಟೆ ಅವರ ಭಕ್ತಿಯ ಸೇವೆ ಮಾದರಿ. ಸಮಾಜದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಘಟನಾವಳಿಗಳು ನಿರಂತರವಾಗಿ ನಡೆಯುತ್ತಿರುವ ಸಮಯದಲ್ಲಿ ಅಯ್ಯಪ್ಪ ಮಾಲೆ ಧರಿಸಿ ಭಕ್ತಿಯನ್ನು ಮೆರೆದಿರುವ ಬಾಬು ಅವರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಅಯ್ಯಪ್ಪ ಸ್ವಾಮಿ ದೇವರು ನಮ್ಮ ಜೀವನದಲ್ಲಿ ಸಾಕಷ್ಟು ಪ್ರಭಾವ ಬೀರಿದ್ದಾರೆ. ನಮ್ಮ ಕಷ್ಟ-ಕಾರ್ಪಣ್ಯಗಳನ್ನು ನಿವಾರಿಸಿ, ಇಷ್ಟಾರ್ಥಗಳನ್ನು ಸಿದ್ದಿಸುತ್ತಾ ಬಂದಿದ್ದಾರೆ. ಅದಕ್ಕಾಗಿಯೇ ಪ್ರತಿವರ್ಷ ಶಬರಿಮಲೆಗೆ ತೆರಳಿ ಮಾಲೆ ಧರಿಸಿ, ದರ್ಶನ ಪಡೆದು ಅವರ ಸೇವೆಯನ್ನು ಮಾಡುತ್ತಿದ್ದೇನೆ ಎಂದು ದೇವದುರ್ಗ ಬಾಬು ಗೌರಂಪೇಟೆ ತಿಳಿಸಿದ್ದಾರೆ. 

ಧಾರವಾಡ: ಮುಸ್ಲಿಂ ಕುಟುಂಬದಿಂದ ಅಯ್ಯಪ್ಪ ಮಾಲಾಧಾರಿಗಳ ಪಾದಪೂಜೆ!

ಕುಂದಗೋಳ: ಸಂತ ಶಿಶುನಾಳ ಶರೀಫರು ಹಾಗೂ ಗುರು ಗೋವಿಂದ ಭಟ್ಟರ ನಾಡು, ತಾಲೂಕಿನ ಯರಗುಪ್ಪಿ ಗ್ರಾಮದ ಗಾರೆ ಕೆಲಸ ಮಾಡುವ ಹಜರೇಸಾಬ ಬುಡ್ಡೇಸಾಬ್ ಬೆಳಗಲಿ ಮನೆಯಲ್ಲಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಗೆ ಅನ್ನ ಸಂತರ್ಪಣೆ ಮಾಡುವ ಮೂಲಕ ಭಾವೈಕೈತೆ ಮೆರೆದಿದ್ದಾರೆ.

ಶಬರಿಮಲೆಯ 18 ಪವಿತ್ರ ಮೆಟ್ಟಿಲು ಮೇಲೆ ನಿಂತು ಕೇರಳ ಪೊಲೀಸರ ಫೋಟೋಶೂಟ್‌!

ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿ ಪ್ರತಿವರ್ಷ ವಿಜೃಂಭಣೆಯಿಂದ ಮೊಹರಂ ಆಚರಿಸಲಾಗುತ್ತದೆ. ಜಾತಿ, ಮತ, ಪಂಥ ಮೇಲು, ಕೀಳು ಧರ್ಮ ಇವು ಯಾವುದು ಗಣನೆಗೆ ತೆಗದುಕೊಳ್ಳದೆ ಭಾವೈಕ್ಯತೆಗೆ ಮುನ್ನುಡಿ ಬರೆದ ಗ್ರಾಮವಿದು. ತಲೆತಲಾಂತರಗಳಿಂದಲೂ ಸಾಮರಸ್ಯ ಬದುಕನ್ನು ಗ್ರಾಮ ಕಲಿಸಿದೆ. ಇಲ್ಲಿ ನಾವೆಲ್ಲ ಒಂದೇ ಕುಟುಂಬದ ಸಹೋದರ-ಸಹೋದರಿಯರು ಎಂಬ ಭಾವನೆಯಿಂದ ಬೆಳೆದು ಬಂದಿದ್ದೇವೆ. ಆ ನಿಟ್ಟಿನಲ್ಲಿ ಇವತ್ತು ಅಯ್ಯಪ್ಪಸ್ವಾಮಿ ಪಾದಪೂಜೆ ಏರ್ಪಡಿಸಿ ಕುಟುಂಬದಲ್ಲಿ ಶಾಂತಿ ಸಹಬಾಳ್ವೆ, ನೆಮ್ಮದಿ ಕರುಣಿಸಲಿ ಎಂದು ಪ್ರಾರ್ಥನೆ ಮಾಡಲಾಯಿತು ಎಂದು ಹಜರೇಶ ಬೆಳಗಲಿ ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಹಿಂದೆ ಯರಗುಪ್ಪಿ ಗ್ರಾಮದಲ್ಲಿ ಪ್ರತಿವರ್ಷ ಹಿಂದೂ ಮುಸ್ಲಿಂ ಸಮುದಾಯದವರು ಸೇರಿ ಯುವಕ ಮಂಡಳದಲ್ಲಿ ಗಣೇಶನ ಪ್ರತಿಷ್ಠಾಪನೆ ಮಾಡಿ ಶಾಸ್ತ್ರೋಕ್ತವಾಗಿ ಪೂಜೆ, ಪುನಸ್ಕಾರ, ಸತ್ಕರಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಅಯ್ಯಪ್ಪ ಮಾಲಾಧಾರಿಗಳಿಗೆ ಪಾದಪೂಜೆ ಮಾಡಿ, ಮನೆಯಲ್ಲಿ ಅಯ್ಯಪ್ಪಸ್ವಾಮಿಗೆ ಪೂಜೆ ಪುನಸ್ಕಾರ ಏರ್ಪಡಿಸಿ. ಮನೆಯಲ್ಲಿ ಶಾಂತಿ ನೆಮ್ಮದಿ ಕರುಣಿಸಲಿ ಎಂದು ಅನ್ನ ಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಿ ಭಾವೈಕ್ಯತೆ ಮೆರೆದಿದ್ದಾರೆ.

click me!