ರಾಜಧಾನಿ ಬೆಂಗ್ಳೂರಿನ ಪಕ್ಕದ ನಗರಗಳಿಗೂ ಸಬರ್ಬನ್ ರೈಲು?

By Kannadaprabha News  |  First Published Jan 3, 2025, 7:36 AM IST

ಈ ಯೋಜನೆ ಅನುಷ್ಠಾನಕ್ಕೆ ನೈಋತ್ಯ ರೈಲ್ವೆ ಬೆಂಗಳೂರು ವಿಭಾಗ ಹಾಗೂ ಕೆ-ರೈಡ್ ಜಂಟ್ ಸಹಭಾಗಿತ್ವ ಅಗತ್ಯವಾಗಿದ್ದು, ವಿಸ್ತರಣೆ, ಸಂಯೋಜನೆಗೆ ಸಚಿವಾಲಯದಿಂದ ಒಪ್ಪಿಗೆ ದೊರೆತ ಬಳಿಕ ಕೆ-ರೈಡ್ ಡಿಪಿಆರ್ ರೂಪಿಸಿಕೊಳ್ಳಬೇಕು. ಬಳಿಕ ಇಲಾಖೆಯಿಂದ ಯೋಜನೆಗೆ ಒಪಿಗೆ ಪಡೆಯಬೇಕಾಗುತ್ತದೆ. 


ಬೆಂಗಳೂರು(ಜ.03): ಬೆಂಗಳೂರು ಉಪನಗರ ರೈಲು ಯೋಜನೆಯನ್ನು (ಬಿಎಸ್‌ಆರ್‌ಪಿ) ಎರಡನೇ ಹಂತದಲ್ಲಿ 146 ಕೆ. ಮೀ. ವಿಸ್ತರಿಸುವ ಹಾಗೂ ವರ್ತುಲ ರೈಲು ಯೋಜನೆ ಜೊತೆಗೆ ಸಂಧಿಸುವ ಸಂಬಂಧ ಕಾರ್ಯಸಾಧ್ಯತಾ ಅಧ್ಯಯನ ನಡೆಸಲು ಕರ್ನಾಟಕ ರೈಲು ಮೂಲ ಸೌಕರ್ಯ ಅಭಿವೃದ್ಧಿ ಕಂಪನಿ (ಕೆ-ರೈಡ್) ರೈಲ್ವೆ ಸಚಿವಾಲಯಕ್ಕೆ ಅನುಮತಿ ಕೋರಿದೆ. 

ಉಪನಗರ ರೈಲು ಯೋಜನೆ ಅನುಷ್ಠಾನಗೊಳಿಸುತ್ತಿರುವ ಕೆ-ರೈಡ್, ಮೊದಲ ಹಂತದಲ್ಲಿ 148.17 ಕಿಮೀ ಉದ್ದದ ರೈಲು ಮಾರ್ಗ ನಿರ್ಮಿಸುವ ಯೋಜನೆಯಲ್ಲಿ ತೊಡಗಿದೆ. ಬೈಯಪ್ಪನಹಳ್ಳಿಯಿಂದ ಚಿಕ್ಕಬಾಣಾವರ ಸಂಪರ್ಕಿಸುವ 'ಮಲ್ಲಿಗೆ' ಮಾರ್ಗದ ಕಾಮಗಾರಿ ಹಾಗೂ ಹೀಲಲಿಗೆಯಿಂದ ರಾಜಾನು ಕುಂಟೆ ಸಂಪರ್ಕಿಸುವ 'ಕನಕ' ಮಾರ್ಗದ ಕಾಮಗಾರಿ ಚಾಲ್ತಿಯಲ್ಲಿದೆ. ಉಳಿದಂತೆ ಮೆಜೆಸ್ಟಿಕ್ ನಿಂದ ದೇವನಹಳ್ಳಿ (ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ) ಸಂಪರ್ಕಿಸುವ 'ಸಂಪಿಗೆ" ಯೋಜನೆ ಟೆಂಡರ್ ಹಂತದಲ್ಲಿದ್ದರೆ, ಕೆಂಗೇರಿ ವೈಟ್ ಫೀಲ್ಡ್ ಸಂಪರ್ಕಿ ಸುವ 'ಪಾರಿಜಾತ' ಯೋಜನೆ ಅನುಷ್ಠಾನ ಸಂಬಂಧ ಪರಾಮರ್ಶೆ ನಡೆದಿದೆ. 

Tap to resize

Latest Videos

ಬೆಂಗಳೂರು ಉಪನಗರ ರೈಲು ಯೋಜನೆಗೆ ಪಾರಿಜಾತ ಮಾರ್ಗ ರದ್ದು?

ಉಪನಗರ ರೈಲನ್ನು 2ನೇ ಹಂತದಲ್ಲಿ ಬೆಂಗಳೂರಿನ ಹೊರವಲಯ, ಸನಿಹದ ಜಿಲ್ಲೆಗಳಿಗೆ ವಿಸ್ತರಿಸಲು ಯೋಜಿಸಲಾಗಿದೆ. ದೇವನಹಳ್ಳಿಯಿಂದ ಚಿಕ್ಕಬಳ್ಳಾಪುರ (18 ಕಿ.ಮೀ.), ಚಿಕ್ಕಬಾ ಣಾವರದಿಂದ ಕುಣಿಗಲ್ (50 ಕಿ.ಮೀ.), ಚಿಕ್ಕಬಾ ಣಾವರದಿಂದ ದಾಬಸ್‌ಪೇಟೆ (36 ಕಿ.ಮೀ.), ಕೆಂಗೇರಿಯಿಂದ ಹೆಜ್ಜಾಲ (11ಕಿ.ಮೀ.) ಹಾಗೂ ಹೀಲಲಿಗೆ ಆನೇಕಲ್ ರಸ್ತೆ (11 ಕಿ.ಮೀ.) ಹಾಗೂ ರಾಜಾನು ಕುಂಟೆ- ಒಡ್ಡರಹಳ್ಳಿ (20 ಕಿ.ಮೀ.) ವಿಸ್ತರಿಸುವ ಯೋಜನೆ ರೂಪಿಸಿಕೊಳ್ಳಲಾಗಿದೆ. 

2025ರಲ್ಲಿ ಡಿಪಿಆರ್ ಪೂರ್ಣ ಸಾಧ್ಯತೆ: 

ಇನ್ನು ರೈಲ್ವೆ ಇಲಾಖೆಯು ಬೆಂಗಳೂರು ಸುತ್ತುವರಿಯುವ 287 ಕಿ.ಮೀ. ವರ್ತುಲ ರೈಲು ಯೋಜನೆಯನ್ನು ರೂಪಿಸಿಕೊಂಡಿದೆ. ಇದು ನಿಡವಂದ- ದೊಡ್ಡಬಳ್ಳಾಪುರ (49.9 ಕಿ.ಮೀ.), ದೊಡ್ಡಬಳಾಪುರ ದೇವನಹಳ್ಳಿ (28.5 ಕಿ.ಮೀ.), ದೇವನಹಳ್ಳಿ ಮಾಲೂರು (46.5 ಕಿ.ಮೀ.), ಮಾಲೂರು ಹೀಲಲಿಗೆ (52 ಕಿಮೀ) ಹಾಗೂ ಹೆಜ್ವಾಲ ಸೊಲೂರು (43.58..)  2 (34.2 ಕಿ.ಮೀ.) ಹಾಗೂ ಹೆಬ್ಬಾಲ ಹೀಲಲಿಗೆ (42ಕಿ.ಮೀ. ) ಉದ್ದ ಒಳಗೊಂಡಿದೆ. ಇದರ ಡಿಪಿಆರ್ ಪ್ರಕ್ರಿಯೆ ನಡೆಯುತ್ತಿದ್ದು, ಈ ವರ್ಷ ಮುಗಿಯಲಿದೆ. ಈ ಯೋಜನೆ ಅನುಷ್ಠಾನಕ್ಕೆ ನೈಋತ್ಯ ರೈಲ್ವೆ ಬೆಂಗಳೂರು ವಿಭಾಗ ಹಾಗೂ ಕೆ-ರೈಡ್ ಜಂಟ್ ಸಹಭಾಗಿತ್ವ ಅಗತ್ಯವಾಗಿದ್ದು, ವಿಸ್ತರಣೆ, ಸಂಯೋಜನೆಗೆ ಸಚಿವಾಲಯದಿಂದ ಒಪ್ಪಿಗೆ ದೊರೆತ ಬಳಿಕ ಕೆ-ರೈಡ್ ಡಿಪಿಆರ್ ರೂಪಿಸಿಕೊಳ್ಳಬೇಕು. ಬಳಿಕ ಇಲಾಖೆಯಿಂದ ಯೋಜನೆಗೆ ಒಪಿಗೆ ಪಡೆಯಬೇಕಾ ಗುತ್ತದೆ ಎಂದು ನೈಋತ್ಯ ರೈಲ್ವೆ ಬೆಂಗಳೂರು ವಿಭಾಗದ ಅಧಿಕಾರಿಗಳು ತಿಳಿಸಿದರು.

click me!