ಹೃದಯಾಘಾತಕ್ಕೆ ಕುಸಿದು ಬಿದ್ದು ಮೃತಪಟ್ಟ ರಾಯಚೂರಿನ 37ರ ಹರೆಯದ ಪೊಲೀಸ್ ಪೇದೆ

Published : Jun 25, 2026, 08:31 AM IST
Raichur Cop Passes Away

ಸಾರಾಂಶ

ಕೆಲಸದ ವೇಳೆ ತೀವ್ರ ಎದೆನೋವು ಹಾಗೂ ಎಡಗೈ ಸೆಳೆತ ಕಾಣಿಸಿಕೊಂಡ ಕಾರಣ ಸ್ಥಳೀಯ ಆಸ್ಪತ್ರೆಗೆ ಕೆರದೊಯ್ಯಲಾಗಿತ್ತು. ಇಂಜೆಕ್ಷನ್‌ಗೆ ಸಿದ್ಧತೆ ನಡೆಸುತ್ತಿದ್ದಂತೆ ಕುಳಿತಿದ್ದ ಪೊಲೀಸ್ ಪೇದೆ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ.

ರಾಯಚೂರು (ಜೂ.25) ರಾಯಚೂರಿನಲ್ಲಿ ಹೃದಾಯಾಘಾಚಕ್ಕೆ ಪೊಲೀಸ್ ಕಾನ್ಸ್‌ಸ್ಟೇಬಲ್ ಬಲಿಯಾದ ಘಟನೆ ನಡೆದಿದೆ. ರಾಯಚೂರು ಜಿಲ್ಲೆ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ರೇಣುಕಾ ರಾಜ್, ಮೊಹರಂ ಹಬ್ಬದ ಭದ್ರತೆಗೆ ನಿಯೋಜನೆಗೊಂಡಿದ್ದರು. ಕರ್ತವ್ಯದ ವೇಳೆ ತೀವ್ರ ಎದೆನೋವು ಹಾಗೂ ಎಡೆಗೈ ಸೆಳೆತ ಕಾಣಿಸಿಕೊಂಡಿತ್ತು. ಅಸ್ವಸ್ಥಗೊಂಡ ರೇಣುಕಾ ರಾಜ್‌ನನ್ನು ಪೊಲೀಸರು ಅರಕೇರಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೆರೆತರಲಾಗಿತ್ತು. ಆರೋಗ್ಯ ಕೇಂದ್ರದ ಕುರ್ಚಿಯಲ್ಲಿ ಕುಳಿದಿದ್ದ ರೇಣುಕಾ ರಾಜ್ ಕುಸಿದು ಬಿದ್ದು ಮೃತಪಟ್ಟಿದ್ದಾರೆ. 37ರ ಹರೆಯದ ಪೊಲೀಸ್ ಪೇದೆ ರೇಣುಕಾರಾಜ್ ಸಾವಿಗೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಸ್ಥಳೀಯ ಆಸ್ಪತ್ರೆ ಕುರ್ಚಿಯಿಂದ ಕುಸಿದು ಬಿದ್ದ ಪೇದೆ

ದೇವದುರ್ಗ ಠಾಣೆ ಸಿಪಿಐ ಕಾರು ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರೇಣುಕಾ ರಾಜ್, ಇದೇ ಇದೇ ಜೂನ್ 23 ರಂದು ಮೊಹರಂ ಬಂದೋಬಸ್ತ್ ಗಾಗಿ ನಿಯೋಜನೆಗೊಂಡಿದ್ದರು. ಈ ವೇಳೆ ರಾತ್ರಿ 10.30 ರ ಸುಮಾರಿಗೆ ರೇಣುಕಾ ರಾಜ್‌ಗೆ ಎದೆನೋವು ಕಾಣಿಸಿಕೊಂಡಿದೆ. ಕೆಲಸದ ನಡುವೆ ಒದ್ದಾಡಿದ ರೇಣುಕಾ ರಾಜ್‌ನನ್ನು ತಕ್ಷಣವೇ ಸಿಪಿಐ ಜೀಪ್ ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅರಕೇರಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಂಜೆಕ್ಷನ್ ಗೆ ಸಿದ್ಧತೆ ನಡೆಸುತ್ತಿದ್ದಂತೆ ಇತ್ತ ರೇಣುಕಾ ರಾಜ್ ಪ್ರಾಣಬಿಟ್ಟಿದ್ದಾರೆ.

30 ಸೆಕೆಂಡ್‌ನಲ್ಲಿ ಸಾವು

ಆಸ್ಪತ್ರೆ ಚೇರ್ ಮೇಲೆ ಕುಳಿತಿದ್ದ ರೇಣುಕಾ ರಾಜ್ ತೀವ್ರ ಒದ್ದಾಡಿದ್ದಾರೆ. ಎದೆನೋವು ಹೆಚ್ಚಾಗಿದೆ. ಅಸ್ವಸ್ಥಗೊಂಡ ರೇಣುಕಾ ರಾಜ್ ಕುಳಿತಲ್ಲಿಂದಲೇ ಕುಸಿದು ಬಿದ್ದಿದ್ದಾರೆ. ಕೇವಲ 30 ಸೆಕೆಂಡ್‌ನಲ್ಲಿ ಪ್ರಾಣ ಪಕ್ಷಿ ಹಾರಿ ಹೋಗಿದೆ. ರಾಯಚೂರು ಜಿಲ್ಲಾ ಪೊಲೀಸ್ ಘಟಕದಿಂದ ಮೃತ ಕಾನ್ಸ್ ಟೇಬಲ್ ಗೆ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ರೇಣುಕಾ ರಾಜ್ ಬಾಗಲಕೋಟೆ ಜಿಲ್ಲೆ ಇಳಕಲ್ ತಾಲೂಕಿನ ಆಮದಿಹಾಳ ಗ್ರಾಮದ ಮೂಲದವರು. ಪೊಲೀಸ್ ಪೇದೆ ಉತ್ತಮ ಆರೋಗ್ಯ ಕಾಪಾಡಿಕೊಂಡಿದ್ದರು. ನಿರಂತರ ಕೆಲಸ, ಒತ್ತಡಗಳಿಂದ ಆರೋಗ್ಯ ಕೆಟ್ಟಿರುವ ಸಾಧ್ಯತ ಇದೆ ಎಂದು ಹೇಳಲಾಗುತ್ತಿದೆ. ಆದರೆ ಈ ಘಟನೆ ಇದೀಗ ಹಲವರನ್ನು ಬೆಚ್ಚಿ ಬೀಳಿಸಿದೆ. ಹೃದಾಯಾಘಾತ ಸಮಸ್ಯೆಗಳು ತೀವ್ರಗೊಳ್ಳುತ್ತಿರುವುದು ಆತಂಕ ಹೆಚ್ಚಿಸಿದೆ. ಉತ್ತಮ ಆಹಾರ ಶೈಲಿ,  ಜೀವನ ಪದ್ಧತಿ, ವ್ಯಾಯಮಾ ಅಭ್ಯಾಸಗಳು ಬೆಳೆಸಿಕೊಂಡರೆ ಆತಂಕದಿಂದ ದೂರವಿರಲು ಸಾಧ್ಯವಿದೆ ಎಂದು ವೈದ್ಯರು ಸಲಹೆ ನೀಡಿದ್ದಾರೆ.  

 

PREV
Read more Articles on
click me!

Recommended Stories

'ಇಂದಲ್ಲ, ನಾಳೆ ನನ್ನ ಮೇಲೂ ಇ.ಡಿ, ಐಟಿ ದಾಳಿ..' ಕೇಂದ್ರದ ವಿರುದ್ಧ ಪ್ರಿಯಾಂಕ್‌ ಖರ್ಗೆ ಮತ್ತೆ ಕಿಡಿ
Priyank kharge: ಆರ್‌ಎಸ್ಎಸ್‌ ಆದಾಯದ ಕೇಳಿದ್ರೆ ಇವರಿಗೆ ಯಾಕೆ ಉರಿ: ಶೋಭಾ ಕರಂದ್ಲಾಜೆ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿ